Back To Top

 ಟಿಕೆಟ್ ದರ ಏರಿಸಿ ಖಾಲಿಯಾದ ನಮ್ಮ ಮೆಟ್ರೋ:10 ರೂಪಾಯಿ ಇಳಿಕೆ ಮಾಡಿರುವ BMRCL
February 16, 2025

ಟಿಕೆಟ್ ದರ ಏರಿಸಿ ಖಾಲಿಯಾದ ನಮ್ಮ ಮೆಟ್ರೋ:10 ರೂಪಾಯಿ ಇಳಿಕೆ ಮಾಡಿರುವ BMRCL

ಬೆಂಗಳೂರು: ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು, ಬೆನ್ನಲ್ಲೇ ದರವನ್ನು ಪರಿಷ್ಕರಿಸಿರುವ ಬಿಎಂಆರ್ ಸಿಎಲ್ 10 ರೂಪಾಯಿ ಕಡಿಮೆ ಮಾಡಿದೆ. ಆದರೂ, ಪ್ರಯಾಣಿಕರ ಕೋಪ ಮಾತ್ರ ತಣ್ಣಗಾಗಿಲ್ಲ. ಇದೀಗ ನಮ್ಮ ಮೆಟ್ರೋಗೆ ಹೊಸ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ.
ಈಗಾಗಲೇ ಟಿಕೆಟ್ ಬೆಲೆ ದುಪ್ಪಟ್ಟು ಏರಿಕೆ ಮಾಡಿದ್ದೀರಿ. ಬೆಲೆ ಏರಿಕೆ ಮಾಡಿದ ರೀತಿಯಲ್ಲಿ ಬಿಎಂಆರ್ಸಿಎಲ್ ಸೌಲಭ್ಯ ನೀಡಬೇಕು. ಮುಂಬೈ, ಹೈದರಾಬಾದ್, ಚೆನ್ನೈ ಮಾದರಿಯನ್ನು ನಮ್ಮ ಮೆಟ್ರೋ ಅನುಸರಿಸಿಕೊಳ್ಳಬೇಕು. ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ದರ ಡಬಲ್, ವಿವಿಧ ಫೆಸಿಲಿಟಿಗಳು ಮಾತ್ರ ಶೂನ್ಯ ಎಂದು ಕಿಡಿಕಾರಿದ್ದಾರೆ.
ಹೈದರಾಬಾದ್‌ ಮೆಟ್ರೋದಲ್ಲಿ ಸಂಚರಿಸಿದರೆ ವಿವಿಧ ಗಿಫ್ಟ್ಗಳು ಸಿಗಲಿವೆ. ಸಾರ್ವಜನಿಕರ ಸೆಳೆಯಲು ದೇಶದ ಬೇರೆ ಬೇರೆ ಮೆಟ್ರೋ ವಿವಿಧ ಯೋಜನೆಗಳನ್ನು ಇಟ್ಟುಕೊಂಡಿವೆ. ಆದರೆ ನಮ್ಮ ಮೆಟ್ರೋ ಹಾಗಿಲ್ಲ. ಚೆನ್ನೈ, ಕೊಚ್ಚಿ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ಆಫರ್ ಇದೆ.

ಚೆನ್ನೈ ಮೆಟ್ರೋದಲ್ಲಿ ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯರು ಪುರುಷರಿಗೆ ಪ್ರತ್ಯೇಕ ಸೈಕಲ್‌ ವ್ಯವಸ್ಥೆ ಇದೆ. 24 ಗಂಟೆಯೊಳಗೆ ಸೈಕಲ್‌ ಹಿಂದಿರುಗಿಸಬೇಕು. ಇಲ್ಲದಿದ್ದರೆ ಪ್ರತಿ ತಾಸಿಗೆ 50 ರೂಪಾಯಿ ಹೆಚ್ಚುವರಿ ಹಣ ನೀಡಬೇಕು. ಸೈಕಲ್‌ ಕಳೆದರೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಭಾನುವಾರ ಮತ್ತು ರಾಷ್ಟ್ರೀಯ ಹಬ್ಬದ ದಿನ ಶೇಕಡಾ 50ರಷ್ಟು ರಿಯಾಯಿತಿ ಕೂಡ ಇದೆ.
ಇನ್ನು ಮುಂಬೈ ಮೆಟ್ರೋದ ಭರ್ಜರಿ ಡಿಸ್ಕೌಂಟ್ ವ್ಯವಸ್ಥೆ ಇದೆ. ಒಂದು ಕಾರ್ಡ್ ತೆಗೆದು ಕೊಂಡರೆ ಶೇಕಡಾ 25 ಡಿಸ್ಕೌಂಟ್ ಸಿಗಲಿದೆ. ನಾಗಪುರ ಮೆಟ್ರೋದಲ್ಲಿ ಪ್ರತಿ ನಿಲ್ದಾಣದಲ್ಲಿ ಬೇಬಿ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಹೈದ್ರಾಬಾದ್ ಮೆಟ್ರೋದಲ್ಲಿ ಲಾಯಲ್ಟಿ ಪ್ರೋಗ್ರಾಂ ಪರಿಚಯಿಸಲಾಗಿದೆ. ತಿಂಗಳಿಗೆ 71ಕ್ಕಿಂತ ಹೆಚ್ಚು ಬಾರಿ ಪ್ರಯಾಣ ಮಾಡಿದ್ರೆ ಟೀ ಶರ್ಟ್ ಸೇರಿದಂತೆ ಬೇರೆ ಬೇರೆ ಗಿಫ್ಟ್ ನೀಡಲಾಗುತ್ತದೆ. ಆದರೆ ನಮ್ಮ ಮೆಟ್ರೋದಲ್ಲಿ ಅದ್ಯಾವುದೂ ಇಲ್ಲ. ಬೆಲೆ ಮಾತ್ರ ದುಪ್ಪಟ್ಟು ಮಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದುಬಾರಿ ಮೆಟ್ರೋಗಿಂತ ಜನ ಬಿಎಂಟಿಸಿ ಪರವಾಗಿಲ್ಲ ಎಂದು ಓಡಾಡುತ್ತಿದ್ದಾರೆ.

Prev Post

ಡಾಲಿ ಧನಂಜಯ ಮದುವೆಯಲ್ಲಿ ಭೋಜನಕ್ಕೆ ಅದ್ಭುತ ವ್ಯವಸ್ಥೆ

Next Post

ಗಮನ ಸೆಳೆದ ‘ಹುಡುಗಾ ಬೇಕಾ’ QR ಕೋಡ್‘Rent a BOYFRIEND’ ಅಸಲಿ ಸತ್ಯ…

post-bars

Leave a Comment

Related post