Back To Top

 ಮಾಧ್ಯಮ ರಂಗದಲ್ಲಿ ಅಂಬಾನಿ – ರಿಲಯನ್ಸ್‌ – Network 18 – Viacom 18 – Jio
February 16, 2025

ಮಾಧ್ಯಮ ರಂಗದಲ್ಲಿ ಅಂಬಾನಿ – ರಿಲಯನ್ಸ್‌ – Network 18 – Viacom 18 – Jio


  • ಕೇವಲ ಒಂದು ದಶಕದಲ್ಲಿ ಭಾರತದ ಮಾಧ್ಯಮ ರಂಗದ ಅಧಿಪತಿಯಾದ ರಿಲಯನ್ಸ್
  • ಕೇಜ್ರಿವಾಲ್ ಅವ್ರ ಭ್ರಷ್ಟಾಚಾರ ವಿರೋಧಿ ಆಂದೋಲನ, ಮೋದಿಯವರಿಂದ ರಿಲಯನ್ಸ್ & network 18 ನಡುವೆ ಬಿರುಕು
  • ಸುದ್ದಿ ವಾಹಿನಿ, ಮನೋರಂಜನಾ ಚಾನಲ್ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ರಿಲಯನ್ಸ್ ಪ್ರಾಬಲ್ಯ
  • Star India ಜೊತೆಗಿನ ಪಾಲುದಾರಿಕೆಯಿಂದ ಮತ್ತಷ್ಟು ಶಕ್ತಿ
  • Network 18 ನಂತೆ Star ಅನ್ನೂ ಸಂಪೂರ್ಣವಾಗಿ ವಶಕ್ಕೆ ಪಡೀತಾರಾ ಅಂಬಾನಿ?

ಅದು 2012. ರಿಲಯನ್ಸ್‌ ಸಂಸ್ಥೆ ಮೊದಲ ಬಾರಿಗೆ ಮಾಧ್ಯಮ ರಂಗವನ್ನು ಪ್ರವೇಶಿಸಿತು. ಸಾಲದಲ್ಲಿದ್ದ ನೆಟ್ವರ್ಕ್‌ 18 ಸಮೂಹದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿತು. ಇಂಡಿಪೆಂಡೆಂಟ್‌ ಮೀಡಿಯಾ ಟ್ರಸ್ಟ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ನೆಟ್ವರ್ಕ್‌ 18 ಗೆ ಆರ್ಥಿಕವಾಗಿ ಸಹಾಯ ಮಾಡಲು ಶುರು ಮಾಡಿತು. ಇದೇ ಸಮಯದಲ್ಲಿ ದಕ್ಷಿಣ ಭಾರತದ ಜನಪ್ರಿಯ ಮಾಧ್ಯಮ ಸಮೂಹವಾಗಿದ್ದ ಈಟಿವಿ ನೆಟ್ವರ್ಕ್‌ ನಲ್ಲಿ ಹೂಡಿಕೆ ಮಾಡುವಂತೆ ನೆಟ್ವರ್ಕ್‌ 18 ಬಳಿ ಕೇಳಿಕೊಂಡಿತು. ಅಂದಿನ ಬೆಲೆಗಿಂತಲೂ ಸುಮಾರು 6 ಪಟ್ಟು ಹಣ ನೀಡಲು ನೆಟ್ವರ್ಕ್‌ 18 ಮುಂದಾಯಿತು (ಕಂಪನಿಯ ಮೌಲ್ಯ 525 ಕೋಟಿ ರೂಪಾಯಿ ಇದ್ದರೂ, 3,500 ಕೋಟಿ ರೂಪಾಯಿಯನ್ನು ನೆಟ್ವರ್ಕ್‌ 18 ಮುಂದಿಟ್ಟಿತ್ತು!). ಈಟಿವಿ ಅನ್ನೋ ಬ್ರ್ಯಾಂಡ್‌ ಅನ್ನು ಹಾಗೆಯೇ ಉಳಿಸಿದ್ದರೂ, ಈಟಿವಿ ಸಮೂಹದ 5 ಸುದ್ದಿ ಚಾನಲ್‌ಗಳಲ್ಲಿ 100% ಷೇರುಗಳನ್ನು, 5 ಮನೋರಂಜನಾ ಚಾನಲ್‌ಗಳಲ್ಲಿ 50% ಷೇರುಗಳನ್ನು ಹಾಗೂ 2 ಇತರ ಚಾನಲ್‌ಗಳಲ್ಲಿ 24.5% ಷೇರುಗಳನ್ನು ನೆಟ್ವರ್ಕ್‌ 18 ಪಡೆದುಕೊಂಡಿತು. Viacom 18 ಮೂಲಕ ಮನೋರಂಜನಾ ಚಾನಲ್‌ಗಳನ್ನು ನಡೆಸಲಾಯಿತು. 2013 ರ ಅಂತ್ಯದ ವೇಳೆ, ನೆಟ್ವರ್ಕ್‌ 18 ಸಮೂಹದ ಸಾಲವೆಲ್ಲವೂ ತೀರಿಸಿ ಆಗಿತ್ತು. ಅತ್ತ Viacom 18 ಸಹ ಭಾರೀ ಲಾಭದ ಕಡೆ ಮುಖ ಮಾಡಿತ್ತು.

ಕೇಜ್ರಿವಾಲ್‌ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಹಾಗೂ 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನೆಟ್ವರ್ಕ್‌ 18 ಹಾಗೂ ರಿಲಯನ್ಸ್‌ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಅಂಬಾನಿ ವಿರುದ್ಧ ಕೇಜ್ರಿವಾಲ್‌ ನೀಡಿರುವ ಹೇಳಿಕೆಗಳು, ಮೋದಿ ಬಗೆಗಿನ ಸುದ್ದಿ ಪ್ರಸಾರ ಮಾಡುವಂತೆ ರಿಲಯನ್ಸ್‌ ಕಡೆಯಿಂದ ಬಂದ ಒತ್ತಾಯಗಳು ಎರಡೂ ಸಮೂಹದ ನಡುವೆ ಬಿರುಕು ತಂದಿತು. ಇಲ್ಲಿ ಕೊನೆಗೆ ಗೆದ್ದದ್ದು ಅಂಬಾನಿಯೇ. ನೆಟ್ವರ್ಕ್‌ 18 ನ ಉಳಿದ ಷೇರುಗಳನ್ನೂ ಕೊಂಡು, ಸಂಪೂರ್ಣ ನೆಟ್ವರ್ಕ್‌ 18 ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡ ರಿಲಯನ್ಸ್‌, ಭಾರತದ ದೊಡ್ಡ ಮಾಧ್ಯಮ ಸಮೂಹವಾಗಿ ಬೆಳೆಯಿತು. ಇನ್ನೊಂದೆಡೆಯಿಂದ ಈಟಿವಿ ಸಮೂಹದ ಚಾನಲ್‌ಗಳನ್ನೂ ಹಂತಹಂತವಾಗಿ acquire ಮಾಡಲಾಯಿತು. ಮನೋರಂಜನಾ ಚಾನಲ್‌ಗಳನ್ನು viacom 18 ಅಡಿಯಲ್ಲಿ acquire ಮಾಡಿ, colors ಹೆಸರಿನಲ್ಲಿ rebrand ಮಾಡಲಾಯಿತು ಹಾಗೂ ಸುದ್ದಿ ಚಾನಲ್‌ಗಳನ್ನು ನೇರವಾಗಿ network 18 ಸಮೂಹದ ತೆಕ್ಕೆಯಲ್ಲಿಟ್ಟು news 18 ಎಂದು ಮರುನಾಮಕರಣ ಮಾಡಲಾಯಿತು. ಈಗ ಕೆಲವು ಚಾನಲ್‌ಗಳಷ್ಟೇ ಈಟಿವಿ ನೆಟ್ವರ್ಕ್‌ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿವೆ.

ಆ ಬಳಿಕವೂ ಅವರು ತಮ್ಮ ಸಂಸ್ಥಾನವನ್ನು ವಿಸ್ತರಿಸುವುದನ್ನು ನಿಲ್ಲಿಸಲಿಲ್ಲ. TV channel ಗಳ ಜೊತೆಗೆ digital media ಗಳಲ್ಲೂ ಹೂಡಿಕೆ ಮಾಡಲು reliance ಮುಂದಾಯಿತು. Jio ಎಂಬ brand name ನಲ್ಲಿ online platform ಗಳನ್ನು ಶುರು ಮಾಡಿತು.

2016 – JioTV ಹಾಗೂ JioCinema launch ಮಾಡಲಾಯಿತು. JioTV ಯಲ್ಲಿ ಈವತ್ತಿಗೂ ನೂರಾರು ಚಾನಲ್‌ಗಳನ್ನು ಫ್ರೀಯಾಗಿ ನೋಡಬಹುದು! (Jio Number/ Network ಇರಬೇಕು)
2017-18 – ರಿಲಯನ್ಸ್‌ ನವರ Jiomusic – Saavn ನ ಷೇರುಗಳನ್ನು acquire ಮಾಡಿ JioSaavn ಆಗಿ ಹೊರಬಂತು.
2020 – Jio – Disney Hotstar ಜೊತೆಗೆ collaboration ಮಾಡಿಕೊಂಡಿತು. ಒಂದಷ್ಟು ಸಮಯದ ಬಳಿಕ ಅವರು ಬೇರ್ಪಟ್ಟರು
2023 – Viacom 18 ಅಡಿಯಲ್ಲಿ ಇದ್ದ Voot ಅನ್ನು acquire ಮಾಡಿ, ಅದನ್ನ JioCinema ಜೊತೆಗೆ merge ಮಾಡಲಾಯಿತು‌. ಇದೇ ಸಮಯದಲ್ಲಿ JioCinema ವನ್ನು sports streaming ಗಾಗಿಯೂ ಬಳಸಲಾಯಿತು. IPL, FIFA WC, ಎಲ್ಲವುದರ digital streaming rights ಪಡೆದು ಅವುಗಳನ್ನು ಉಚಿತವಾಗಿ ಜನರಿಗೆ ತೋರಿಸಲಾಯಿತು. Sports streaming ಗೆ ಹೆಸರುವಾಸಿಯಾಗಿದ್ದ Hotstar ನ downfall ಇಲ್ಲಿಂದ ಶುರುವಾಯಿತು.
2023-24 – Reliance ಹಾಗೂ Star India (ಭಾರತದ ಮತ್ತೊಂದು ದೊಡ್ಡ ಮಾಧ್ಯಮ ಸಮೂಹ) ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡವು. Disney star ಅನ್ನೋದನ್ನು JioStar ಎಂದು rebrand ಮಾಡಲಾಯಿತು.
2024-25 – Star India ದ streaming platform Hotstar ಅನ್ನು Jio acquire ಮಾಡಿತು ಹಾಗೂ ಅದನ್ನು JioCinema ದ ಜೊತೆಗೆ merge ಮಾಡಲಾಯಿತು. ಈಗ JioHotstar ಹೆಸರಿನಲ್ಲಿ app ಕಾರ್ಯನಿರ್ವಹಿಸುತ್ತಿದೆ.

ಮುಂದೊಂದು ದಿನ, Star India ವನ್ನೂ ಸಂಪೂರ್ಣವಾಗಿ acquire ಮಾಡಿದರೂ ಅಚ್ಚರಿಯಿಲ್ಲ. Network 18, Viacom 18 ಹಾಗೂ Jio ನ ಅಡಿಯಲ್ಲಿ ಕ್ರಮವಾಗಿ ಸುದ್ದಿ, ಮನೋರಂಜನೆ ಹಾಗೂ ಡಿಜಿಟಲ್ ಚಾನಲ್‌ಗಳನ್ನೆಲ್ಲ ತನ್ನ ತೆಕ್ಕೆಗೆ ಹಾಕಲೂಬಹುದು.

Reliance (Network 18 group) ಬಿಟ್ಟರೆ ಭಾರತದಲ್ಲಿ Zee (Essel Group), Times group, Sun Network ಅತ್ಯಂತ ದೊಡ್ಡ ಮಾಧ್ಯಮ ಸಮೂಹವಾಗಿದೆ.

Prev Post

ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ -2025

Next Post

ದಬ್ಬಾಳಿಕೆ, ಅನ್ಯಾಯದ ವಿರುದ್ಧದ ಹೋರಾಟದ ಚಿತ್ರಕಥೆ – ದಸ್ಕತ್!

post-bars

Leave a Comment

Related post