Back To Top

 ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ
February 16, 2025

ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ

ನೆಲಮಂಗಲ: 10 ವರ್ಷಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಬಾಯಿಗೆ ಫಿವಿಕ್ವಿಕ್ ಹಾಕಿ ಕೊಲೆಗೆ ಯತ್ನಿಸಿದ್ದಾನೆ.
ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ 38 ವರ್ಷದ ಸಿದ್ದಲಿಂಗಯ್ಯ ಸ್ವಾಮಿ ಎಂಬಾತ ಈ ಕೃತ್ಯ ಎಸಗಿದ್ದಾನೆ. ನಿನ್ನೆ ಗಂಡ, ಹೆಂಡತಿ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸಿದ್ದಲಿಂಗಯ್ಯ ಸ್ವಾಮಿ ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಕತ್ತು ಹಿಸುಕಿದ್ದಾನೆ. ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಾಗ ಸತ್ತಿದ್ದಾಳೆ ಅಂತಾ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ನನ್ನ ಹೆಂಡತಿನಾ ಕೊಲೆ ಮಾಡಿದ್ದೀನಿ ಸಾರ್ ಸಿದ್ದಲಿಂಗಯ್ಯ ಸ್ವಾಮಿ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಸಿದ್ದಲಿಂಗಯ್ಯನ ಮನೆಗೆ ಹೋಗಿ ಪೊಲೀಸರು ಹೋಗಿ ಚೆಕ್ ಮಾಡಿದಾಗ ಮಹಿಳೆ ಬದುಕಿದ್ದಳು.
ಸದ್ಯ ಮಹಿಳೆಯನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆರೋಪಿ ಪತಿ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಿ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Prev Post

ಮನಕೆ ಆವರಿಸಿದ ನೂರಾರು ನೋವುಗಳಿಗೆ ಸಿಹಿ ಮುತ್ತಿನ ಮದ್ದು

Next Post

ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿ ಸುದ್ದಿಯಾದ ಕಿಪ್ಪಿ ಕೀರ್ತಿ

post-bars

Leave a Comment

Related post