ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆ: ಸಾಮಾನ್ಯರಂತೆ ಬದುಕುವ ಆಸೆ ತೋರಿದ ಬಾಗಪ್ಪ ಹೆಣವಾದ
ವಿಜಯಪುರ : ಭೀಮಾ ತೀರದ ಕುಖ್ಯಾತ ರೌಡಿ ಬಾಗಪ್ಪ ಹರಿಜನನನ್ನು ನಗರದ ರೇಡಿಯೋ ಕೇಂದ್ರದ ಬಳಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಕೆಲ ದಿನಗಳಿಂದ ತಣ್ಣಗಿದ್ದ ಭೀಮಾತೀರದಲ್ಲಿ ಈಗ ರಕ್ತದ ಕೋಡಿ ಹರಿದಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.
ಭೀಮಾತೀರದ ಹಂತಕ ಬಾಗಪ್ಪ ಹರಿಜನನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆವಾಗಿ ಹತ್ಯೆ ಮಾಡಿದ್ದಾರೆ. ಫೆಬ್ರವರಿ 11ರ ರಾತ್ರಿ ಊರು ಉಂಡು ಮಲಗುವ ಹೊತ್ತಲ್ಲಿ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ಸಿಕ್ಕ ಸಿಕ್ಕಲಿ ಹೊಡೆದು ಬಾಗಪ್ಪನನ್ನ ಕೊಲೆ ಮಾಡಲಾಗಿದೆ.
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಸಲ ಹಂತಕರು ಬಾಗಪ್ಪನನ್ನು ಬಿಡಲಿಲ್ಲ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ಬಾಗಪ್ಪ ವಾಸ ಮಾಡುತ್ತಿದ್ದ. ರಾತ್ರಿ 8.50ರ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದು, ಘಟನಾ ಸ್ಥಳಕ್ಕೆ ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಗಪ್ಪ ಹರಿಜನ ಹಂತಕರ ಪತ್ತೆಗಾಗಿ ಎಎಸ್ಪಿ ರಾಮಣ್ಣಗೌಡರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಈ ಹಿಂದೆ ನಡೆದ ಹಲವಾರು ಕೊಲೆ ಪ್ರಕರಣದಲ್ಲಿ ಬಾಗಪ್ಪ ಹರಿಜನ ಪ್ರಮುಖ ಆರೋಪಿ ಆಗಿದ್ದು ಜಾಮೀನು ಮೇಲೆ ಆಚೆ ಬರುತ್ತಿದ್ದ. ಇತ್ತೀಚೆಗೆ ಅಪರಾಧ ಜಗತ್ತಿನಿಂದ ಆಚೆ ಬಂದು ಹೊಸ ಜೀವನ ಮಾಡಬೇಕೆಂದು ಬಾಗಪ್ಪ ಹೇಳಿಕೊಂಡಿದ್ದ.
ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ತನಗೆ ಚಂದಪ್ಪನ ಸಂಬಂಧಿಗಳು ಬಿಡುತ್ತಿಲ್ಲ ಎಂದು ಭೀಮಾ ತೀರದ ಹಂತಕನಂತಲೇ ಗುರುತಿಸಿಕೊಂಡಿರುವ ಬಾಗಪ್ಪ ಹರಿಜನ ಇತ್ತೀಚೆಗೆ ಹೇಳಿಕೊಂಡಿದ್ದ.
ಈ ಹಿಂದೆ ಗುಂಡೇಟಿನಿಂದ ಗಾಯಗೊಂಡು ಬದುಕುಳಿದಿದ್ದ ಭೀಮಾ ತೀರದ ಹಂತಕನ ಸಹವರ್ತಿ ಬಾಗಪ್ಪ ನಾನು ಸಮಾಜಮುಖಿಯಾಗುತ್ತಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬಾರದು. ನನ್ನ ವಿಷಯಕ್ಕೆ ಬಂದಲ್ಲಿ 24 ತಾಸಿನಲ್ಲೇ ಬಂದೂಕು ಹಿಡಿಯುವೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದ ನಾನು ಉತ್ತಮ ವ್ಯಕ್ತಿಯಾಗಿ ಬದುಕಬೇಕೆಂದುಕೊಂಡಿದ್ದೇನೆ ಎನ್ನುವಾಗಲೇ ಬಾಗಪ್ಪ ರಕ್ತದೋಕುಳಿಯಲ್ಲಿ ಹೆಣವಾಗಿ ಪ್ರಾಣಬಿಟ್ಟಿದ್ದಾನೆ.