ಪ್ರೀತಿಪಾತ್ರರಿಗೆ ಚಾಕಲೇಟ್ ನೀಡಿ ಸಿಹಿ ಸಂಬಂಧ ವೃದ್ಧಿಸಿ….
Valentine’s Week 2025
ಪ್ರೇಮಿಗಳ ದಿನದ ಖರೀದಿಗಳಲ್ಲಿ ಗುಲಾಬಿ, ಚಿನ್ನಾಭರಣ, ಗಿಫ್ಟ್ ಗಳ ಜೊತೆಗೆ ಚಾಕೊಲೇಟ್ ಗಳಿಗೂ ಬೇಡಿಕೆ ಹೆಚ್ಚಾಗಿದೆ. ಪರಸ್ಪರ ಚಾಕಲೇಟ್ ನೀಡಿ ಪ್ರೀತಿ ವಿನಿಮಯ ಮಾಡಿಕೊಳ್ಳುವ ಪ್ರೇಮಿಗಳಿಗೆ ಸಂಬಂಧ ಸಿಹಿಗೊಳಿಸುವ ಚಾಕಲೇಟ್ ಮೇಲೂ ಅಪಾರವಾದ ಪ್ರೀತಿ.
ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡದವರೆಗೂ ಇಷ್ಟಪಡುವ ಚಾಕಲೇಟ್ ಗೆ ಪ್ರೇಮಿಗಳ ದಿನದಲ್ಲಿ ಒಂದು ದಿನ ಮೀಸಲಿಡಲಾಗಿದೆ.
ಪ್ರೇಮಿಗಳ ವಾರದಲ್ಲಿ ಮೂರನೇ ದಿನವನ್ನು ಫೆಬ್ರವರಿ 9ರಂದು ಚಾಕೊಲೇಟ್ ದಿನವಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಯಾವಾಗ ಎಂದು ನಾವು ತಿಳಿದುಕೊಳ್ಳಬೇಕು.
ಪ್ರೇಮಿಗಳ ವಾರ ಶುರುವಾಗಿದ್ದು, ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಒಂದೊಂದು ದಿನವು ಒಂದೊಂದು ವಿಶೇಷತೆ ಹೊಂದಿದೆ. ಫೆಬ್ರವರಿ 9ಕ್ಕೆ ಚಾಕೋಲೇಟ್ ದಿನ. ಪ್ರೇಮಿಗಳು ಈ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಬದುಕಿನಲ್ಲಿ ಖುಷಿ ಇದ್ದರೆ ಬದುಕು ಸಿಹಿಯಾಗಿರುವುದು ಎಂಬ ಸಂದೇಶ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
20ನೇ ಶತಮಾನದಲ್ಲಿ ಕಾಡ್ಬರಿ, ಹರ್ಷಿಸ್, ಮಾರ್ಸ್ನಂತಹ ವಿವಿಧ ಚಾಕೊಲೇಟ್ ಬ್ರ್ಯಾಂಡ್ಗಳು ವಿವಿಧ ರೀತಿಯ ಚಾಕೊಲೇಟ್ಗಳನ್ನು ತಯಾರಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ವಿವಿಧ ಚಾಕೊಲೇಟ್ ಗಳು ಚಾಕೊಲೇಟ್ ಪ್ರಿಯರ ಗಮನ ಸೆಳೆದಿದೆ.
ಅನೇಕ ವರ್ಷಗಳ ಹಿಂದೆ ಸೇಂಟ್ ವ್ಯಾಲೆಂಟೈನ್ಸ್ ಎಂಬ ಕ್ರಿಶ್ಚಿಯನ್ ಸಂತರಿಗೆ ಗೌರವ ನೀಡುವ ಉದ್ದೇಶದಿಂದ ವ್ಯಾಲೆಂಟೈನ್ಸ್ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಅದರಲ್ಲಿಯೂ ಈ ವಿಕೋರಿಯನ್ ಯುಗದಲ್ಲಿ ಜನರು ಪ್ರೀತಿಯಲ್ಲಿ ಇದ್ದಾಗ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಚಾಕೊಲೇಟನ್ನು ಉಡುಗೊರೆ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ, 19ನೇ ಶತಮಾನದಲ್ಲಿ ಬ್ರಿಟಿಷ್ ಕುಟುಂಬವೊಂದು ಚಾಕೊಲೇಟ್ ಹೊಸ ರೂಪ ನೀಡುವ ಬಗ್ಗೆ ಯೋಚಿಸಿತ್ತು. 1861ರಲ್ಲಿ ಕ್ಯುಪಿಡ್ ಹಾಗೂ ರೋಸ್ಟಡ್ಗಳೊಂದಿಗೆ ಹೃದಯಾಕಾರದ ಚಾಕೊಲೇಟ್ಗಳ ಉತ್ಪಾದನೆ ಮಾಡಿದರು. ವಾಷಿಂಗ್ಟನ್ ಡಿಸಿ ಯ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಪ್ರಕಾರ, 19ನೇ ಶತಮಾನದಲ್ಲಿ ಚಾಕೊಲೇಟ್ ದಿನದ ಆಚರಣೆ ಶುರುವಾಯಿತು. ಅಂದಿನಿಂದ ವಿಶ್ವದಾದಂತ್ಯ ಜನರು ವಿಭಿನ್ನವಾಗಿ ಚಾಕೋಲೇಟ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದ್ದಾರೆ.
ಚಾಕೊಲೇಟ್ ಮೇಲಿನ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ವ್ಯಾಲೆಂಟೈನ್ಸ್ ವೀಕ್ನಲ್ಲಿ ಪ್ರೀತಿ ಮತ್ತು ಮಾಧುರ್ಯದ ಸವಿಯನ್ನು ಅನುಭವಿಸುವ ಸಲುವಾಗಿ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ.
ಬಹುಮುಖ್ಯವಾಗಿ ಚಾಕಲೇಟ್ ವಿನಿಮಯಕ್ಕೆ ಡೈರಿ ಮಿಲ್ಕ್ , ಕ್ಯಾಡ್ ಬರಿ ಅಂತಹ ಚಾಕಲೇಟ್ ಗೆ ಪ್ರಾಮುಖ್ಯತೆ ನೀಡಲಾಗಿದ್ದು, ಡೈರಿ ಮಿಲ್ಕ್ ಪ್ರೇಮಿಗಳ ಇಷ್ಟದ ಚಾಕಲೇಟ್ ಆಗಿದ್ದು ಅಗ್ರಸ್ಥಾನದಲ್ಲಿದೆ.