ಪ್ರೀತಿ, ನಂಬಿಕೆಯ ಬಲವಾದ ಭಾಷೆಯೇ ಪ್ರಾಮಿಸ್..
ಪ್ರೇಮಿಗಳು ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಲು ಪ್ರಾಮಿಸ್ ಮಾಡಿಕೊಳ್ಳುವುದು ಅವರ ಪ್ರೀತಿಯನ್ನು ಇನ್ನಷ್ಟು ಬಲಗೊಳಿಸುತ್ತದೆ.
ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ವಾರದಲ್ಲಿ ರೋಸ್ ಡೇ, ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ ನಂತರ ಬರುವುದು ಪ್ರಾಮೀಸ್ ಡೇ. ಇದು ಫೆಬ್ರವರಿ 11ರಂದು ಆಚರಿಸಲಾಗುತ್ತದೆ. ಹಂತ ಹಂತವಾಗಿ ಪ್ರೇಮಿಗೆ ತನ್ನ ಪ್ರೀತಿಯ ಆಳವನ್ನು ತಿಳಿಸುತ್ತಾ ಇಂಪ್ರೇಸ್ ಮಾಡುವ ಜೊತೆಗೆ ಪ್ರೀತಿಯ ಭಾಷೆ ಪಡೆದುಕೊಂಡು ಜೀವನ ಪರ್ಯಂತ ನಿನ್ನ ಜೊತೆ ಇರುತ್ತೇನೆ ಎಂದು ಹೇಳಿಕೊಳ್ಳುವುದಾಗಿದೆ.
ಪ್ರಾಮಿಸ್ ದಿನದಂದು ಅನೇಕ ದಂಪತಿಗಳು ತಮ್ಮ ಬಂಧವನ್ನು ಬಲಪಡಿಸಲು ಅರ್ಥಪೂರ್ಣ ಭರವಸೆಗಳನ್ನು ನೀಡುತ್ತಾರೆ. ಪ್ರಾಮಿಸ್ ಡೇ ಎಂದರೆ ಬದ್ಧತೆ, ನಂಬಿಕೆ ಮತ್ತು ಜೀವನದ ಏರಿಳಿತಗಳಲ್ಲಿ ಪರಸ್ಪರ ಬೆಂಬಲವಾಗಿ ನಿಲ್ಲುತ್ತೇವೆಂದು ಮಾತು ಕೊಡುವುದು.
ಪ್ರೇಮಿಗಳಿಗೆ ಪಾಲಿಗೆ ಈ ದಿನ ಅತ್ಯಂತ ಮಹತ್ವ ಪೂರ್ಣವಾದ ದಿನ ಇದಾಗಿದ್ದು ಈ ವಿಶೇಷ ದಿನವನ್ನು ಮಾತು ಕೊಡುವ ಮುನ್ನ ಪರಸ್ಪರರು ಗಿಫ್ಟ್ ವಿನಿಮಯ ಮಾಡಿಕೊಳ್ಳುತ್ತಾರೆ.
ಯಾವುದೇ ಸಂಬಂಧದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಂಬಿಕೆ ಮತ್ತು ಬದ್ಧತೆ. ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸಿದಾಗ ಅಥವಾ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಪರಸ್ಪರ ನಂಬಿಕೆ ಮತ್ತು ಸಮರ್ಪಣೆ ಅಗತ್ಯ. ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳಲು ಸಂಗತಿ ನೀಡುವ ಭರವಸೆಯೇ ಕಾರಣವಾಗಿದೆ. ಈ ವಿಶೇಷ ದಿನದಂದು ಸಂಗಾತಿ ಅಥವಾ ಪ್ರೇಮಿಗೆ ನೀಡುವ ಭರವಸೆಗಳು ಬಂಧವನ್ನು ಗಟ್ಟಿಗೊಳಿಸಿ ಪ್ರೀತಿ ಹೆಚ್ಚಾಗಳು ಕಾರಣವಾಗುತ್ತದೆ. ಹೀಗಾಗಿ ಪ್ರೇಮಿಗಳ ವಾರದಲ್ಲಿ ಬರುವ ಪ್ರಾಮಿಸ್ ಡೇ ಆಚರಣೆ ಮಹತ್ವದ್ದಾಗಿದೆ. ಹೀಗಾಗಿ ಫೆಬ್ರವರಿ 11 ರ ಪ್ರಾಮಿಸ್ ಡೇಯಂದು ಸಂಗಾತಿ ಹಾಗೂ ಪ್ರೇಮಿಗಳು ಸದಾ ಜೊತೆಗೆ ಇರುವೆ ಎಂದು ಮಾತು ಕೊಡುವ ಮೂಲಕ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಬಹಳಷ್ಟು ಪ್ರಾಮಿಸ್ ಗಳು ಆ ಸಂದರ್ಭಕ್ಕಷ್ಟೇ ಸೀಮಿತವಾಗಿದ್ದು ಅದರ ಆಳವನ್ನು ಅರ್ಥೈಸಿಕೊಂಡು ನಂಬಿಕೆ ಉಳಿಸಿಕೊಳ್ಳಲು ಪ್ರೇಮಿಗಳು ವಿಫಲರಾಗುತ್ತಾರೆ.
ಆದರೆ ಕೊಟ್ಟ ಪ್ರಾಮಿಸ್ ಗೆ ಬದ್ದವಾಗಿದ್ದುಕೊಂಡು ಪ್ರೀತಿ ಮತ್ತು ಪ್ರೇಮಿಗೆ ನಿಯತ್ತಾಗಿದ್ದು ಪ್ರೀತಿಯ ಬಂಧ ಬಲಗೊಳಿಸಿದರೆ ಕೊಟ್ಟ ಪ್ರಾಮೀಸ್ ಗೆ ಅರ್ಥ ಬರುತ್ತದೆ ಮತ್ತು ಪ್ರಾಮಿಸ್ ಡೇ ಆಚರಣೆ ಸಂಬಂಧವನ್ನು ಸುಂದರಗೊಳಿಸುತ್ತದೆ.
ಶರಣ್ಯ ಕೋಲ್ಚಾರ್