Back To Top

 ನಿಮ್ಮ ಆದಾಯ 12 ಲಕ್ಷ ರೂ.ಗಿಂತ ಜಾಸ್ತಿಯಾದರೆ ಬೀಳುತ್ತೆ ಟ್ಯಾಕ್ಸ್‌!
February 3, 2025

ನಿಮ್ಮ ಆದಾಯ 12 ಲಕ್ಷ ರೂ.ಗಿಂತ ಜಾಸ್ತಿಯಾದರೆ ಬೀಳುತ್ತೆ ಟ್ಯಾಕ್ಸ್‌!

ನಿರೀಕ್ಷೆಯಂತೆ ಬಜೆಟ್‌ನಲ್ಲಿಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ ಗಿಫ್ಟ್‌ ನೀಡಲಾಗಿದೆ. ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಾದರೂ ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ.

ಹೊಸದಿಲ್ಲಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಯ ವ್ಯಯ ಪತ್ರವನ್ನು ಲೋಕಸಭೆಯಲ್ಲಿ ಶನಿವಾರ (ಫೆ.1) ಮಂಡಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಕೇಂದ್ರ ಸರ್ಕಾರ ಬಂಪರ್‌ ಗಿಫ್ಟ್‌ ನೀಡಿದೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಅವರ 12 ಲಕ್ಷ ರೂ. ಆದಾಯ ತೆರಿಗೆ ಮುಕ್ತ. ಆದರೆ 12 ಲಕ್ಷ ರೂ.ಗಿಂತ 1 ರೂ. ಅಧಿಕವಾದರೂ ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ.

ನಿಮ್ಮ ಆದಾಯವು 12 ಲಕ್ಷ ರೂ. ಒಳಗೆ ಇದ್ದರೆ ಅದಕ್ಕೆ ರಿಬೇಟ್‌ ಪ್ರಕಾರ ತೆರಿಗೆ ಇರುವುದಿಲ್ಲ.‌ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 87 ಎ ಅಡಿಯಲ್ಲಿ ಈ ರಿಬೇಟ್‌ ಸಿಗುತ್ತದೆ. ಆದರೆ 12 ಲಕ್ಷ ರೂ.ಗಿಂತ 1 ರೂ. ಹೆಚ್ಚು ಆದಾಯ ಇದ್ದರೂ ನಿಮಗೆ 4 ಲಕ್ಷ ರೂ.ಯಿಂದಲೇ ಟ್ಯಾಕ್ಸ್‌ ಲೆಕ್ಕಚಾರ ಅನ್ವಯವಾಗುತ್ತದೆ. ಟ್ಯಾಕ್ಸ್‌ ರಿಬೇಟ್‌ ಈ ಹಿಂದೆ 7 ಲಕ್ಷ ರೂ. ತನಕ ಇತ್ತು. ಈಗ 12 ಲಕ್ಷ ರೂ. ತನಕ ಏರಿಸಲಾಗಿದೆ.

ಬಜೆಟ್‌ನಲ್ಲಿ ಬಾಡಿಗೆ ಕುರಿತ ಟಿಡಿಎಸ್‌ ಮಿತಿಯನ್ನು 2.40 ಲಕ್ಷ ರೂ.ಯಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ. ವೃತ್ತಿಪರ ಶುಲ್ಕಗಳ ಮೇಲಿನ ಟಿಡಿಎಸ್‌ ಮಿತಿಯನ್ನು 30 ಸಾವಿರ ರೂ.ಯಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. ಡಿವಿಡೆಂಡ್‌ ಮೇಲಿನ ಟಿಡಿಎಸ್‌ ಮಿತಿಯನ್ನು 5,000 ರೂ.ಯಿಂದ 10,000 ರೂ.ಗೆ ಏರಿಸಲಾಗಿದೆ.

ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂ. ಆಗಿದ್ದರೆ ಹೊಸ ಪದ್ಧತಿಯಲ್ಲಿ 31,200 ರೂ. ತೆರಿಗೆ ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯವಿದ್ದರೆ 83,200 ರೂ. ತೆರಿಗೆ ಉಳಿತಾಯ ಸಿಗುತ್ತದೆ. 15 ಲಕ್ಷ ರೂ. ಆದಾಯ ಇದ್ದರೆ 36,400 ರೂ. ತೆರಿಗೆ ಉಳಿತಾಯವಾಗುತ್ತದೆ. 20 ಲಕ್ಷ ರೂ. ಆದಾಯ ಇದ್ದರೆ 93,600 ರೂ. ಟ್ಯಾಕ್ಸ್‌ ಉಳಿತಾಯವಾಗುತ್ತದೆ. 25 ಲಕ್ಷ ರೂ. ಆದಾಯ ಇದ್ದರೆ 1,14,400 ರೂ. ತೆರಿಗೆ ಉಳಿತಾಯವಾಗುತ್ತದೆ. 30 ಲಕ್ಷ ರೂ. ಅದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 35 ಲಕ್ಷ ರೂ. ಆದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 55 ಲಕ್ಷ ರೂ. ಆದಾಯವಿದ್ದರೆ 1,25,840 ರೂ. ತೆರಿಗೆ ಉಳಿತಾಯವಾಗುತ್ತದೆ.

ಇದನ್ನು ಓದಿ:

https://infomindz.in/%e0%b2%ad%e0%b2%b0%e0%b2%a4-%e0%b2%ae%e0%b2%a4%e0%b2%a4-%e0%b2%87%e0%b2%97%e0%b2%b2%e0%b2%a1-%e0%b2%b9%e0%b2%a3%e0%b2%b9%e0%b2%a3/
Prev Post

ಮಹಾಕುಂಭ ಮೇಳದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಪುಣ್ಯಸ್ನಾನ

Next Post

ಮಹಾಕುಂಭ ಮೇಳ ಪ್ರಯಾಣ ಈಗ ಸುಲಭ! ವಿಮಾನ ಟಿಕೆಟ್ ದರ ಅರ್ಧದಷ್ಟು ಇಳಿಕೆ!

post-bars

Leave a Comment

Related post