ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.51 ಲಕ್ಷ ಕೋಟಿ ರೂ.
ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯೂ ಕಳೆದ ವರ್ಷದಷ್ಟೇ ಅನುದಾನ ಮೀಸಲಿಟ್ಟಿದ್ದು, 2.51 ಲಕ್ಷ ಕೋಟಿ ರೂ ಘೋಷಣೆ ಮಾಡಲಾಗಿದೆ.
ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ಸಿಕ್ಕಂತಾಗಿದೆ. ಈ ಬಾರಿಯೂ ರೈಲ್ವೇ ಇಲಾಖೆಗೆ 2.51 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಬಾರಿಯೂ ಇಷ್ಟೇ ಅನುದಾನ ನೀಡಲಾಗಿತ್ತು.

2025 – 26ರಲ್ಲಿ ಪ್ರಯಾಣಿಕರ ಸವಲತ್ತುಗಳಿಗಾಗಿ 12 ಸಾವಿರ ಕೋಟಿ ರೂಪಾಯಿ, ಸುರಕ್ಷತೆ ವ್ಯವಸ್ಥೆಗಳಿಗಾಗಿ ರೂ.1,16,500 ಕೋಟಿ ರೂ. ಮೀಸಲಿಡಲಾಗಿದೆ. ರೈಲ್ವೆಗಳಿಗೆ ರೋಲಿಂಗ್ ಸ್ಟಾಕ್‌ಗೆ 45,530 ಕೋಟಿ ರೂ. ಹಂಚಿಕೆಯಾಗಿದೆ. ಸಿಗ್ನಲಿಂಗ್ ಮತ್ತು ದೂರಸಂಪರ್ಕಕ್ಕೆ 6,800 ಕೋಟಿ ರೂ. ಹಂಚಿಕೆಯಾಗಿದ್ದರೆ, ವಿದ್ಯುದೀಕರಣ ಯೋಜನೆಗಳಿಗೆ 6,150 ಕೋಟಿ ರೂ. ಹಂಚಿಕೆಯಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಐಷಾರಾಮಿ ರೈಲುಗಳ ಜತೆಗೆ ಸಾಮಾನ್ಯ ಜನರಿಗಾಗಿ ವಿಶೇಷ ರೈಲುಗಳಿಗೂ ಒತ್ತು ನೀಡಲಾಗಿದೆ. ಸದ್ಯ 228 ವಂದೇ ಭಾರತ್ ರೈಲುಗಳು ಓಡುತ್ತಿದ್ದು, ಇನ್ನು ಮುಂದಿನ ವರ್ಷದೊಳಗಾಗಿ ರೈಲಿನ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್ ಕೂಡ ನಿರ್ಮಿಸಲು ತಯಾರಿ ನಡೆದಿವೆ.
ಹೊಸ ಯೋಜನೆಗಳ, ವಿನಾಯಿತಿ ಜೊತೆಗೆ ಒಂದಷ್ಟು ಸುರಕ್ಷಾ ಕ್ರಮಗಳನ್ನು ಪರಿಚಯಿಸಲಾಗಿದೆ. ಈ ಸಂಬಂಧ ರೇಲ್ವೆ ಸುರಕ್ಷತೆಗೆ ಕವಚ್ 4.0 ಯೋಜನೆ ಜಾರಿಗೊಳಿಸಿದೆ. ಈಗಾಗಲೇ ಈ ಪ್ರಯೋಗ ನಡೆದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೆ ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಈ ವರ್ಷದ ಬಜೆಟ್‌ನಲ್ಲಿ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಹಿಂದಿನ ಘೋಷಣೆಗಳನ್ನು ಪೂರೈಸುವುದು ರೈಲ್ವೆಯ ಆದ್ಯತೆಯಾಗಿದೆ.
ಇದನ್ನು ಓದಿ: