ಇಂದು ಭಾರತ-ಇಂಗ್ಲೆಂಡ್ 3ನೇ ಟಿ-20: ಹಣಾಹಣಿಯ ಪಂದ್ಯಾಟಕ್ಕೆ ಕಾತರ!!
ರಾಜ್ಕೋಟ್: ಇಂದು ರಾಜ್ಕೋಟ್ನಲ್ಲಿ ನಡೆಯುವ ಮೂರನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ ಗೆಲ್ಲುವ ತವಕದಲ್ಲಿರುವ ಭಾರತ ತಂಡ. ಈ ಪಂದ್ಯ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ಸ್ಟಾರ್ ಲಭ್ಯವಿದೆ.
ನಾಯಕನಾದ ಬಳಿಕ ಅಬ್ಬರಿಸಿ ಬ್ಯಾಟಿಂಗ್ ಮೆರೆದು ಕೂಲಾಗಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಾದರೂ ಸಿಡಿಯಬಹುದೇ ಎಂದು ಕಾದು ನೋಡಬೇಕಿದೆ. 14 ತಿಂಗಳ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ ವ್ಯಕ್ತವಾಗಿದೆ,
ರಾಜ್ಕೋಟ್ನ ನಿರಂಜನ್ ಷಾ ಸ್ಟೇಡಿಯಂ ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದಂತಿದೆ.

ಇಲ್ಲಿನ ಬೌಂಡರಿ ಗೆರೆಗಳು ಚಿಕ್ಕದಾಗಿದ್ದು, ಉಭಯ ತಂಡಗಳಿಂದ ರನ್ ಗಳ ಮಳೆ ನಿರೀಕ್ಷೆ ಮಾಡಲಾಗಿದೆ. ಆದರೆ, ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ಬೌಲರ್ಗಳು ಹರಸಾಹಸ ಪಡಬೇಕಾಗುವುದು ಖಚಿತ. ವೇಗದ ಬೌಲರ್ಗಳು ಕೊಂಚ ಹಳಿ ತಪ್ಪಿದರೂ, ಸ್ಪಿನ್ನರ್ಗಳು ಮೇಲುಗೈ ಸಾಧ್ಯತೆಯೂ ಇದೆ. ಹಾಗಾಗಿ ಉಭಯ ತಂಡಗಳು ಸ್ಪಿನ್ನರ್ಗಳಿಗೆ ಮಣೆ ಹಾಕುವ ನಿರೀಕ್ಷೆ ಹೆಚ್ಚಿದೆ.
ಭಾರತ ತಂಡದಲ್ಲಿ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಮಣದೀಪ್ ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್.
ಇಂಗ್ಲೆಂಡ್ ಆಟಗಾರರು:
ಜೋಸ್ ಬ್ಯಾಟ್ಲರ್ (ನಾಯಕ), ಬೆನ್ ಡಕೆಟ್, ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಜೇಮಿ ಸ್ಮಿತ್, ಜೇಮೀ ಓವರ್ಟನ್, ಬ್ರೇಡನ್ ಕಾರ್ಸೆ, ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಆದಿಲ್ ರಶೀದ್.
ರಾಜ್ಕೋಟ್ನಲ್ಲಿ ಹವಾಮಾನವು ಸ್ಪಷ್ಟವಾಗಿದ್ದು ಮಳೆಯಾಗುವ ಸಾಧ್ಯತೆಯಿಲ್ಲ. ಗರಿಷ್ಠ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ, ಆದರೆ ಕನಿಷ್ಠ ತಾಪಮಾನವು 15 ಡಿಗ್ರಿಗಳಿಗೆ ಇಳಿಯುತ್ತದೆ. ಪಂದ್ಯದ ಮೇಲೆ ಯಾವುದೇ ಇಬ್ಬನಿ ಅಂಶವು ಪರಿಣಾಮ ಬೀರುವುದಿಲ್ಲ ಹೀಗಾಗಿ ಆಟ ಸಂಪೂರ್ಣವಾಗಿ ಪೈಪೋಟಿಯಿಂದ ಸಾಗುವ ನಿರೀಕ್ಷೆ ಇದೆ.
ಇದನ್ನು ಓದಿ: