Back To Top

 ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ
January 20, 2025

ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ

ಮುಂಬೈ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ಮೇಲೆ ಜ.16ರಂದು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಆತನ ಮೂಲ ಹೆಸರು ಮೊಹಮ್ಮದ್ ಷರೀಫ್ ಉಲ್ಲ್ ಇಸ್ಲಾಂ ಶೆಹಜಾದ್ ಎಂದು ತಿಳಿದುಬಂದಿದ್ದು ತನ್ನ ಹೆಸರನ್ನು ವಿಜಯ ದಾಸ್ ಎಂದು ಬದಲಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಆರೋಪಿಯು ನಟನ ಮನೆಗೆ ನುಗ್ಗಿ ಅಪರಾಧ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಹೌಸ್ ಕೀಪಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಈ ಹಿಂದೆ ಸೈಫ್ ಮನೆ ಸ್ವಚ್ಚಗಾರನಾಗಿ ಹೋಗಿದ್ದ ಎಂದು ಕೆಲ ಮೂಲಗಳು ಹೇಳುತ್ತಿವೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಬಗ್ಗೆ ಪೊಲೀಸ್ ಡಿಸಿಪಿ ದೀಕ್ಷಿತ್ ಗೆಡಮ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಆತನ ಬಳಿ ಇಸ್ಲಾಂ ಧರ್ಮದ ಕೆಲವು ವಸ್ತುಗಳಿವೆ. ಆತ ಬಾಂಗ್ಲಾ ಪ್ರಜೆಯಾಗಿದ್ದು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾನೆ ಎನ್ನುವ ಶಂಕೆ ಇದೆ.
ಭಾರತಕ್ಕೆ ಬಂದ ನಂತರ ಆತ ಹಲವಾರು ಹೆಸರುಗಳನ್ನು ಹೊಂದಿದ್ದಾನೆ.
ಕಳೆದ ಏಳೆಂಟು ತಿಂಗಳಿಂದ ಮುಂಬೈ ಮತ್ತು ಥಾನಾದ ಇತರೆಡೆ ಆತ ಕೆಲಸ ಮಾಡುತಿದ್ದ ಮತ್ತು ಆತನಿಗೆ ಕ್ರಿಮಿನಲ್ ದಾಖಲೆಗಳು ಇಲ್ಲ ಎಂದು ಹೇಳಲಾಗುತ್ತದೆ.

Prev Post

ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ, ಪರಾಮರ್ಶೆ ಮಾಡಬೇಕು : ಸಿಎಂ ಸಿದ್ದರಾಮಯ್ಯ

Next Post

ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.

post-bars

Leave a Comment

Related post