ಭದ್ರತಾ ಪಡೆ ಕಾರು ಸ್ಟೋಟಿಸಿದ ನಕ್ಸಲರು: 9 ಸಿಬ್ಬಂದಿ ಹುತಾತ್ಮ
ಛತ್ತೀಸಗಢ: ನಕ್ಸಲ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದ್ದು ಛತ್ತೀಸಗಢದ ದಂತೆವಾಡಾ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಗಿಸಿ ಮರಳುತ್ತಿದ್ದ ಜಿಲ್ಲಾ ಮೀಸಲು ಪಡೆಯ (ಡಿಆರ್ ಜಿ) ಅಧಿಕಾರಿಗಳಿದ್ದ ಕಾರನ್ನು ಕಚ್ಚಾ ಬಾಂಬ್ ಬಳಸಿ ನಕ್ಸಲರು ಸ್ಫೋಟಿಸಿದ್ದಾರೆ. ಈ ವೇಳೆ ಎಂಟು ಪೊಲೀಸರು ಹಾಗೂ ಕಾರಿನ ಚಾಲಕರು ಹುತಾತ್ಮರಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬಿಜಾಪುರ ಜಿಲ್ಲೆಯ ಬೆದರೆ-ಕುಠರೂ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ವಿರುದ್ಧ ದೊಡ್ಡ ದಾಳಿ ಇದಾಗಿದ್ದು ಸ್ಪೋಟದ ಪರಿಣಾಮ ರಸ್ತೆಯಲ್ಲಿ 10 ಅಡಿ ಆಳದ ಗುಂಡಿ ಸೃಷ್ಟಿಯಾಗಿದೆ. ಕಾಂಕ್ರಿಟ್ ರಸ್ತೆ ಭಾಗವಾಗಿದ್ದು, ಸ್ಕಾರ್ಪಿಯೋ ಕಾರು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದೆ. ಕಾರಿನ ಒಂದು ಭಾಗವು ರಸ್ತೆಯ ಪಕ್ಕದಲ್ಲಿದ್ದ ಮರವೊಂದರ ಮೇಲೆ ನೇತಾಡುತ್ತಿತ್ತು. ಪೊಲೀಸರ ಮೃತದೇಹ ಛಿದ್ರಗೊಂಡಿದೆ.
ದಂತೆವಾಡಾ, ಬಿಜಾಪುರ್ ಹಾಗೂ ನಾರಾಯಣ ಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಈ ತಂಡ ಕಾರ್ಯಾಚರಣೆ ನಡೆಸಿತ್ತು.
ಈ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಮೃತಪಟ್ಟಿದ್ದರು. ಜೊತೆಗೆ ಇಬ್ಬರು ಹೆಡ್ ಕಾನ್ಸ್ಟೇಬಲ್ ಹುತಾತ್ಮರಾಗಿದ್ದರು. ಘಟನೆ ಸಂಬಂಧ ನಕ್ಸಲರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಐಜಿಸಿ ಸುಂದರ್ ರಾಜ್ ಪಿ. ಮಾಹಿತಿ ನೀಡಿದರು.
ಪೊಲೀಸರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ.2026ರ ಮಾರ್ಚ್ ಒಳಗಾಗಿ ಭಾರತದಿಂದ ನಕ್ಸಲ್ ಚಟುವಟಿಕೆಯನ್ನು ಅಂತ್ಯಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.