Back To Top

 ಛತ್ತೀಸಗಢದಲ್ಲಿ ಎನ್ ಕೌಂಟರ್: ನಾಲ್ವರು ನಕ್ಸಲರು ಹತ, ಪೊಲೀಸ್ ಸಿಬ್ಬಂದಿ ಸಾವು

ಛತ್ತೀಸಗಢದಲ್ಲಿ ಎನ್ ಕೌಂಟರ್: ನಾಲ್ವರು ನಕ್ಸಲರು ಹತ, ಪೊಲೀಸ್ ಸಿಬ್ಬಂದಿ ಸಾವು

ಭದ್ರತಾಪಡೆ ಮತ್ತು ನಕ್ಸಲರೊಂದಿಗೆ ಗುಂಡಿನ ಚಕಮಕಿ

ಛತ್ತಿಸ್ ಗಢ: ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.
ಛತ್ತೀಸ್ ಗಢದ ಬಸ್ತಾರ್ ಪ್ರದೇಶದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್ ಮದ್ ಅರಣ್ಯದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.

ಭದ್ರತಾ ಸಿಬ್ಬಂದಿ ಮತ್ತು ಜಂಟಿ ತಂಡ ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ.
ಈ ವೇಳೆ ನಾಲ್ವರು ಹತ್ಯೆಯಾಗಿದ್ದು ಒಬ್ಬ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮೃತರಾಗಿದ್ದಾರೆ.

ಶನಿವಾರ ತಡರಾತ್ರಿ ಗುಂಡಿನ ಕಾಳಗ ನಿಂತಿದ್ದು, ಸ್ಥಳದಲ್ಲಿ ನಾಲ್ವರು ನಕ್ಸಲರ ಮೃತದೇಹ ಮತ್ತು ಎಕೆ-47 ರೈಫಲ್ ಮತ್ತು (SLR) ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.
ಮೃತ ಪೊಲೀಸ್ ಸಿಬ್ಬಂದಿ ಸನ್ನು ಕರಂ ಎಂದು ಗುರುತಿಸಲಾಗಿದೆ. ಹೆಚ್ಚಿನ ಶೋಧನೆಗಾಗಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

Prev Post

ಗ್ರಾಮೀಣ ಭಾರತ ಮಹೋತ್ಸವಕ್ಕೆ ಪ್ರಧಾನಿ ಚಾಲನೆ

Next Post

22ನೇ ಚಿತ್ರಸಂತೆ: ಮಹಾನಗರಿಯಲ್ಲಿ ಬಣ್ಣಬಣ್ಣದ ನೋಟ, ರಸದೂಟ

post-bars

Leave a Comment

Related post