ನಿಮ್ಮ ಮುಖ ಲಕ ಲಕ ಹೊಳೆಯಬೇಕಾ?
ಮನೆಯಲ್ಲಿಯೇ ಸರಳ ಸುಂದರ ಮೇಕಪ್ ಮಾಡಿಕೊಳ್ಳುವ ಮುನ್ನ ಮೊದಲ ಪ್ರಯತ್ನದಲ್ಲಿ ಕೆಲವೊಮ್ಮೆ ತಪ್ಪಾಗುವುದು ಸಹಜ. ಆದರೆ, ಈ ತಪ್ಪುಗಳನ್ನು ಸರಿದೂಗಿಸಿ ಹೇಗೆ ನಿಮ್ಮ ಅಂದವನ್ನು ಹೆಚ್ಚಿಸಬಹುದು ಎಂಬ ಸರಳ ಮೇಕಪ್ ವಿಧಾನ ಇಲ್ಲಿದೆ.
ಅಂದವಾಗಿ ಕಾಣಬೇಕು ಎಂದು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಳೆಯರಿಗೆ ಮೇಕಪ್ (Make up) ಮೇಲಿನ ಆಸಕ್ತಿ ಕೊಂಚ ಅಪಾರ ಎಂದರು ತಪ್ಪಾಗಲಾರದು. ಅದರಲ್ಲೂ ಮದುವೆ, ಸಮಾರಂಭ, ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಬೇಕು ಎಂದು ಕಾಯುತ್ತಿರುತ್ತಾರೆ. ವಯಸ್ಸಿನ ಭೇದ ಮರೆತು ಎಲ್ಲರನ್ನು ತಮ್ಮತ್ತ ಆಕರ್ಷಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಕೆಲವರಂತೂ ಬ್ಯೂಟಿ ಪಾರ್ಲರ್ (beauty parlous) ಹೊಕ್ಕು ಗಂಟೆ ಗಟ್ಟಲೇ ಕಾಲ ವ್ಯಯಮಾಡುತ್ತಾರೆ. ಆದರೆ, ಈ ಸುಂದರ ಮೇಕಪ್ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಆದರೆ, ಈ ವಿಧಾನ ತಿಳಿದಿರುವುದು ಅವಶ್ಯ.

ಈಗಂತೂ ಎಲ್ಲಾ ಮೇಕಪ್ ಸಾಮಾನುಗಳು ನಮಗೆ ಲಭ್ಯವಿದೆ. ಹತ್ತಾರು ಕಂಪನಿಯ ವಿವಿಧ ಗುಣಮಟ್ಟದ ಮೇಕಪ್ ಸಾಮಾನುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಈ ಮೇಕಪ್ ಸಾಮಾನುಗಳ ಬಳಕೆಯನ್ನು ತಿಳಿಯದೇ ಅನೇಕರು ಒದ್ದಾಡುತ್ತಾರೆ. ಇದಕ್ಕಾಗಿ ಬೇರೆಯವರ ಮೊರೆ ಹೋಗುತ್ತಾರೆ. ಈ ಹಿನ್ನಲೆ ಮೇಕಪ್ ಮಾಡಿಕೊಳ್ಳುವ ವಿಧಾನದ ತಿಳಿಯುವುದು ಅವಶ್ಯ.
ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ ಎಂಬಂತೆ ಮೇಕಪ್ ವಿಧಾನ ತಿಳಿಯುವವರೆಗೂ ಕಷ್ಟ. ಒಮ್ಮೆ ಈ ವಿಧಾನ ಕರಗತವಾದರೆ, ಸ್ವಂತ ಮೇಕಪ್ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಎಷ್ಟೇ ವಯಸ್ಸಾದ್ರೂ ಯಂಗ್ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ. ವಯಸ್ಸಿಗೂ ಮದ್ದು ಕಂಡು ಹಿಡಿದ್ರಂತೆ ಚೀನಾ ವಿಜ್ಞಾನಿಗಳು! ಇನ್ನು ಮನುಷ್ಯನಿಗೆ ಸಿಗುತ್ತಾ ಚಿರಯೌವನ?

ಲಕಲಕನೆ ನಿಮ್ಮ ಮುಖ ಹೊಳೆಯಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಸರಳ ಮೇಕಪ್ ವಿಧಾನ:
ಮೇಕಪ್ನ ಪ್ರಮುಖ ಅಂಶ ಎಂದರೆ, ಎಲ್ಲೂ ದೋಷ ಕಂಡು ಬರದಂತೆ ಅಂದವಾಗಿ ಅಲಂಕಾರಗೊಳ್ಳುವುದು. ಜೊತೆಗೆ ನಿಮ್ಮ ತ್ವಚೆಯ ಗುಣಮಟ್ಟ ಕಾಪಾಡಿ, ದೀರ್ಘಕಾಲದವರೆಗೆ ಆ ಮೇಕಪ್ ಇರುವಂತೆ ನೋಡಿಕೊಳ್ಳುವುದು. ಮೇಕಪ್ಗೆ ಮೊದಲು ಪ್ರತಿಬಾರಿಯು ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಬಿಬಿ ಕ್ರೀಮ್ ಮಾಯಿಶ್ಚರೈಸರ್ ಬಳಕೆ ಉತ್ತಮ ಬಳಿಕ ಅದರ ಮೇಲೆ ಕೊಂಚ ಕನ್ಸಿಲರ್ ಬಳಕೆ ಮಾಡಿ. ಅದನ್ನು ಮುಖದ ಮೇಲೆ ಚೆನ್ನಾಗಿ ಬ್ಲೇಡ್ ಮಾಡಿ. ಈ ಮೂಲಕ ನಿಮ್ಮ ಮುಖದಲ್ಲಿನ ಕಲೆಗಳು ಮರೆಯಾಗುತ್ತವೆ.

ಬಳಿಕ ನಿಮ್ಮ ಚರ್ಮದ ಬಣ್ಣ ಅನುಸರವಾಗಿ ಕ್ರೀಮ್ ಆಧಾರಿತ ಬ್ಲಾಶ್ ಬಳಸಿ. ಕೆನ್ನೆ, ಮೂಗಿನ ಮೇಲೆ ಹೆಚ್ಚಿನ ಬ್ಲಶ್ ಮಾಡುವ ಮೂಲಕ ಹೊಳಪು ಕಾಯ್ದುಕೊಳ್ಳಬಹುದು. ನಂತರ ಕಣ್ಣಿನ ಅಂದ ಹೆಚ್ಚಿಸಿ, ಕಣ್ಣಿಗೆ ಅಂತವಾಗಿ ಸ್ಮೂಕಿ ಲುಕ್ ನೀಡಿ. ರಾತ್ರಿ ಸಮಾರಂಭವಾದರೆ ನೀಲಿ ಅಥವಾ ಗ್ರೇ ಬಳಕೆ ಉತ್ತಮ.
ಮಸ್ಕರ ಹಚ್ಚದೇ ನಿಮ್ಮ ಮೇಕಪ್ ಪೂರ್ಣಗೊಳಸಬೇಡಿ. ನಿಮ್ಮ ಕಣ್ಣು ರೆಪ್ಪೆ ಸೌಂದರ್ಯವನ್ನು ಹೆಚ್ಚಿಸುವುದರಿಂದ ಅದಕ್ಕೆ ಮಸ್ಕರ ತಪ್ಪದೇ ಹಾಕಿ. ಎಲ್ಲಾ ಮೇಕಪ್ ಮುಗಿದ ಮೇಲೆ ಏನೋ ಕೊರತೆ ಇದೆ ಎನ್ನಿಸುವುದು ಸಹಜ. ಅದೇ ನಿಮ್ಮ ತುಂಟಿಯ ರಂಗು. ಲಿಪ್ಸ್ಟಿಕ್ಗಳನ್ನು ಕೂಡ ದೀರ್ಘ ಸಮಯದವರೆಗೆ ಇರುವಂತಹವ ನಿಮ್ಮ ಮೆಚ್ಚಿನ ಬಣ್ಣದ ತುಂಟಿಯ ರಂಗು ಆಯ್ಕೆ ಮಾಡಿ ಬಳಸಿ.

ಲಿಪ್ಸ್ಟಿಕ್ ಬಳಕೆಗೆ ಮುನ್ನ ಮತ್ತು ನಂತರ ಕೂಡ ಲಿಪ್ ಬಾಮ್ ಹಚ್ಚಿ ಇದರಿಂದ ತುಟಿಯ ತ್ವಚೆಗೆ ಕೂಡ ಉತ್ತಮ ಇನ್ನು ಉಬ್ಬುಗಳಿಗೆ ಹೆಚ್ಚಿನ ನಿಗಾ ಕೊಡಿ, ಅದಕ್ಕೆಂದೆ ಪುಟ್ಟ ಪುಟ್ಟ ಬ್ರಶ್ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದು, ಅವುಗಳ ಮೂಲಕ ಬಾಚಿ ಇದರಿಂದ ಅವು ಇನ್ನಷ್ಟು ಲುಕ್ ನೀಡುತ್ತವೆ. ಯಾವುದೇ ಮೇಕಪ್ಗೂ ಕೂಡ ಕೊಂಚ ಪ್ರಯತ್ನಬೇಕು ಎಂಬುದನ್ನು ಎಂದು ಮರೆಯಬಾರದು.