Back To Top

 2024ರ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಟೀಂಗೆ ಬೂಮ್ರಾ ಸಾರಥಿ
January 2, 2025

2024ರ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಟೀಂಗೆ ಬೂಮ್ರಾ ಸಾರಥಿ

ಸಿಡ್ನಿ: ವರ್ಷದ ಟೆಸ್ಟ್ ಕ್ರಿಕೆಟ್ ತಂಡ ಕಟ್ಟಿರುವ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಭಾರತದ ಸ್ಟಾರ್ ವೇಗಿ ಜಸ್ ಪ್ರೀತ್ ಬೂಮ್ರಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
2024ರಲ್ಲಿ ವಿವಿಧ ದೇಶಗಳ ಆಟಗಾರರು ನೀಡಿದ್ದ ಪ್ರದರ್ಶನದ ಆಧಾರದ ಮೇಲೆ ಈ ಆಯ್ಕೆ ನಡೆದಿದ್ದು ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೂ ಸ್ಥಾನ ನೀಡಿದೆ.
ವರ್ಷದುದ್ದಕ್ಕೂ ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬೂಮ್ರಾ 13 ಪಂದ್ಯಗಳ 26 ಇನ್ನಿಂಗ್ಸ್ ಗಳಲ್ಲಿ 14.92ರ ಸರಾಸರಿಯೊಂದಿಗೆ ಬರೋಬ್ಬರಿ 71 ವಿಕೆಟ್ ಗಳನ್ನು ಉರುಳಿಸಿದ್ದಾರೆ.


ಇಮ್ರಾನ್ ಅವರು 13.29ರ ಸರಾಸರಿಯಲ್ಲಿ 62 ವಿಕೆಟ್ ಗಳನ್ನು ಪಡೆದಿದ್ದರು.
ಸದ್ಯದ ಬಾರ್ಡರ್ -ಗವಾಸ್ಕರ್ ಟೂರ್ನಿಯಲ್ಲಿ ಆಸ್ಟ್ರೇಲಿಯಾಗೆ ಬಿಸಿ ಮುಟ್ಟಿಸಿರುವ ಬೂಮ್ರಾ 2024ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಆಡಿದ 4 ಪಂದ್ಯದಲ್ಲಿ 19 ವಿಕೆಟ್ ಉರುಳಿಸಿದ್ದರು.


ಬೂಮ್ರಾ ಮಾತ್ರವಲ್ಲದೆ, 2024ರಲ್ಲಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿರುವ ಯಶಸ್ವಿ ಜೈಸ್ವಾಲ್ ಅವರಿಗೂ ಸಿಎ ತಂಡದಲ್ಲಿದ್ದಾರೆ.
ಜೈಸ್ವಾಲ್ 15 ಪಂದ್ಯಗಳ 29 ಇನ್ನಿಂಗ್ಸ್ಗಳಿಂದ 54.74ರ ಸರಾಸರಿ 1478 ರನ್ ಗಳಿಸಿದ್ದಾರೆ.
ಕಳೆದ ವರ್ಷ ಆಡಿದ 9 ಟೆಸ್ಟ್ ಗಳಲ್ಲಿ 37 ವಿಕೆಟ್ ಪಡೆದಿರುವ ಆಸಿಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಸ್ಥಾನ ದೊರೆತಿಲ್ಲ ಎಂದು ಹೇಳಲಾಗುತ್ತದೆ.

Prev Post

ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

Next Post

ಅಸ್ಸಾದಿ, ಬಯ್ಯಾರೆಡ್ಡಿ ನಿಧನಕ್ಕೆ ಸಚಿವ ಎಂ‌ ಬಿ ಪಾಟೀಲ ಸಂತಾಪ

post-bars

Leave a Comment

Related post

March 10, 2025