Back To Top

 ಹಿಂದೂ ಯುವತಿ ಜೊತೆ ಪರಾರಿಯಾದ ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು

ಹಿಂದೂ ಯುವತಿ ಜೊತೆ ಪರಾರಿಯಾದ ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು


ಸುಳ್ಳು ದಾಖಲೆ ಸೃಷ್ಟಿಸಿ ಮೋಸ: ಲವ್‌ ಜಿಹಾದ್ ಆರೋಪ ಕಾಮಿಡಿ ಯೂಟ್ಯೂಬರ್ ಕ್ವಾಜಾ ಬಂದೇನವಾಜಾ ಮಹಮದ್ ಹನೀಫ್‌ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ದೂರು

ಧಾರವಾಡ: ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾನೆ, ಲವ್ ಜಿಹಾದ್ ನಿಂದ ಯುವತಿಯನ್ನು ಮೋ‌ಸದಿಂದ ಅಪಹರಿಸಿದ್ದಾನೆ ಎಂದು ಕಾಮಿಡಿ ಯೂಟ್ಯೂಬರ್ ಕ್ವಾಜಾ ಬಂದೇನವಾಜಾ ಮಹಮದ್ ಹನೀಫ್‌ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಕಳೆಪ್ಪ ಇಸ್ಲಾಂ (Islam) ಧರ್ಮಕ್ಕೆ ಸೇರಿದವನಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ದೂರಿನಲ್ಲಿ ಬಜರಂಗದಳ ಕಾರ್ಯಕರ್ತರು (Bajrang Dal Workers) ಆರೋಪಿಸಿದ್ದಾರೆ.
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ Mukaleppa ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ವೀಡಿಯೋ ಮಾಡುತ್ತಾನೆ. short video ಶಾರ್ಟ್ ವೀಡಿಯೋದಲ್ಲಿ ಹಿಂದೂ ಯುವತಿಯರು ಹಾಗೂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ವೀಡಿಯೋ ಮಾಡುತ್ತಾನೆ. ಕಳೆದ ಜೂನ್ 5 ರಂದು ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ಈತ ವಿವಾಹವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡ ಗ್ರಾಮೀಣ ಠಾಣೆಗೆ (Dharwad Rural Police Station) ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈಗ ಮುಕಳೆಪ್ಪನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರು ದೂರು ಕೊಟ್ಟಿದ್ದು, ಇನ್ನೂ ಎಫ್ಐಆರ್ ದಾಖಲಾಗಿಲ್ಲ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ವಿಡಿಯೋ ಮಾಡ್ತಾ ಇದ್ದಾನೆ ಮತ್ತು ಹಿಂದೂ ಧರ್ಮದ ವಿರುದ್ಧ ವಿಡಿ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾನೆ ಎಂದು ಹಿಂದೂ ಬಜರಂಗದಳದ ಕಾರ್ಯಕರ್ತರು ದೂರಿನಲ್ಲಿ ದಾಖಲಿಸಲಾಗಿದೆ.

ಇದನ್ನು ಓದಿ:

Prev Post

ಅರಸಯ್ಯನ ಪ್ರೇಮಕ್ಕೆ ಒಲಿದ ಪೋಸ್ಟ್ ಮೇಡಂ

Next Post

ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು

post-bars

Leave a Comment

Related post