ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್ ನೀಡಿಲ್ಲ
ಗೆಲುವು ಸಾಧಿಸಿದ ಭಾರತ ಪಾಕಿಸ್ತಾನಕ್ಕೆ ವಿಜಯದ ಕೈಕುಲುಕುವಿಕೆ ನಿರಾಕರಿಸಿತ್ತು. ಇದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆಗಿತ್ತು. ಈ ಗೆಲುವನ್ನು ಭಾರತ ಪೆಹಲ್ಗಾಂ ದುರಂತದಲ್ಲಿ ಮಡಿದವರಿಗೆ ಸಮರ್ಪಿಸಿತ್ತು.
ಬೆಂಗಳೂರು: 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ india ಭರ್ಜರಿ ಜಯ ಗಳಿಸಿತು. ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ಪಾಕಿಸ್ತಾನಕ್ಕೆ ವಿಜಯದ ಕೈಕುಲುಕುವಿಕೆ ನಿರಾಕರಿಸಿತ್ತು. ಇದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆಗಿತ್ತು. ಈ ಗೆಲುವನ್ನು ಭಾರತ ಪೆಹಲ್ಗಾಂ ದುರಂತದಲ್ಲಿ ಮಡಿದವರಿಗೆ ಸಮರ್ಪಿಸಿತ್ತು.
ಆದರೆ ಮತ್ತೊಂದು ವಿಚಾರದಿಂದ ಕ್ರಿಕೆಟ್ ಆಟಗಾರರು ಸುದ್ದಿಯಲ್ಲಿದ್ದಾರೆ. ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕ್ ನಾಯಕ ಸಲ್ಮಾನ್ ಅಘಾಗೆ shake hand ಶೇಕ್‌ಹ್ಯಾಂಡ್ ನೀಡಲು ಮುಂದಾಗಲಿಲ್ಲ.
ಲೀಗ್ ಪಂದ್ಯದಂತೆಯೇ ಈ ವೇಳೆಯೂ ಹಾಗೆಯೇ ಇದ್ದರು. ಎದುರಾಳಿ ನಾಯಕ ಕೂಡ ಹಸ್ತಲಾಘವ ನೀಡುವ ಬಗ್ಗೆ ಆಸಕ್ತಿ ತೋರಲಿಲ್ಲ. ಆ ಮೂಲಕ ಉಭಯ ನಾಯಕರ ನಡುವೆ ಹ್ಯಾಂಡ್‌ಶೇಕ್ ಇಲ್ಲದೆ ಟಾಸ್ ಪ್ರಕ್ರಿಯೆ ನಡೆಯಿತು.
ಕಳೆದ ಪಂದ್ಯದಲ್ಲಿ ಮ್ಯಾಚ್ match ರೆಫರಿಯಾಗಿದ್ದ ಆಂಡಿ ಪೈಕ್ರಾಫ್ಟ್ ಅವರೇ ಈ ಹಣಾಹಣಿಯಲ್ಲಿದ್ದರು. ಆದರೂ ಈ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ಪ್ರಕ್ರಿಯೆ ನಡೆಯಲಿಲ್ಲ. ಅಂದ ಹಾಗೆ ಸೆಪ್ಟಂಬರ್ 14ರಿಂದಲೂ ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ಪಂದ್ಯದಲ್ಲಿನ ನೋ ಹ್ಯಾಂಡ್‌ಶೇಕ್ ಸಂಬಂಧ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಈ ಬಗ್ಗೆ ಐಸಿಸಿಗೆ ದೂರು ನೀಡಿದ್ದರು ಹಾಗೂ ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಕೈ ಬಿಡಬೇಕೆಂದು ಮನವಿ ಮಾಡಿದ್ದರು.
ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಕಾಳಗದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ನಡೆಗೆ ಛೀಮಾರಿ ಹಾಕಿದ್ದರು. ಆನಂತರ ಕ್ರಿಕ್ರೆಟ್ ನಡೆಸಬಾರದೆಂದು ಕೂಡ ಚರ್ಚೆ ಆಗಿತ್ತು. ಆದರೆ ಈಗ ಆಟವನ್ನು ಆಟದಂತೆ ನೋಡಬೇಕು ಎಂದ ಬಳಿಕ ಆಟಗಾರರು ಗೆಲ್ಲುವ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ: