Back To Top

 ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ
September 4, 2025

ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ

ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕನ್ನಡ ಚಿತ್ರರಂಗದ ಕಾಟೇರ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕನ್ನಡ ಚಿತ್ರರಂಗದ ಕಾಟೇರ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ parappana agrahara ಜೈಲು ಸೇರಿದ್ದಾರೆ.
ಆದರೆ, ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಕುರಿತಂತೆ ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು, ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕೋರ್ಟ್ ಗೆ ನುಗ್ಗಿದ್ದಾನೆ.
ಇಂದು ನಟ ದರ್ಶನ್ ಸೇರಿ ಐವರು ಆರೋಪಿಗಳ ಸ್ಥಳಾಂತರ ಸಂಬಂಧ ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಕೋರ್ಟ್ ಗೆ court letter ಪತ್ರ ಹಿಡಿದು ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಕೇಸ್ ನ kole case 17 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಈ ವೇಳೆ ಜಡ್ಜ್ ನೀವು ಯಾರು ಎಂದು ಅಪರಿಚಿತ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ ಅಪರಿಚಿತ ವ್ಯಕ್ತಿ ನಾನು ರವಿ ಬೆಳೆಗೆರೆ ಕಡೆಯವನು ಎಂದು ಹೇಳಿದ್ದಾನೆ.
ಏನೇ ಇದ್ರೂ ಸರ್ಕಾರದ ಮುಖಾಂತರ ಬರುವಂತೆ ಜಡ್ಜ್ ಸೂಚಿಸಿದ್ದಾರೆ. ನಿಮ್ಮ ಅರ್ಜಿಯನ್ನು ತೆಗೆದುಕೊಂಡು ಹೋಗಿ ಎಂದು ಜಡ್ಜ್ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಐವರು ಆರೋಪಿಗಳ ಬಳ್ಳಾರಿ ಜೈಲಿಗೆ ಸ್ಥಳಾಂತರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡದಂತೆ ದರ್ಶನ್ ಸೇರಿದಂತೆ ಎಲ್ಲರೂ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 64ನೇ ಸಿಸಿಏಚ್ ನ್ಯಾಯಾಲಯ ಸೆಪ್ಟೆಂಬರ್ 9ಕ್ಕೆ ಆದೇಶ ಕಾಯ್ದಿರಿಸಿದೆ.
ಸದ್ಯ ದರ್ಶನ್ ಸ್ಥಳಾಂತರ ವಿಚಾರದ ಜತೆಗೆ ಅಪರಿಚಿತ ವ್ಯಕ್ತಿಯ ವರ್ತನೆ ಮತ್ತು ಬೇಡಿಕೆ ಅನುಮಾನ ಮೂಡಿಸಿದೆ. ಒಟ್ಟಾರೆಯಾಗಿ ದರ್ಶನ್ ಕೇಸಿನಿಂದ ಹೊರಗೆಳೆಯಲು ಕೆಲವರು ಪ್ರಯತ್ನಿಸಿದರೆ ಕೇಸ್ ಮುಗಿಯದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಇದನ್ನು ಓದಿ:

Prev Post

ವರದಕ್ಷಿಣೆ ಕಿರುಕುಳ: ಪತ್ನಿಯ ಮಾನ ಹರಾಜು ಮಾಡಿದ ಪತಿ

Next Post

ರಾಜ್ಯದ ಡಿಸಿಎಂ ದೇಶದಲ್ಲಿ ಎರಡನೇ ಶ್ರೀಮಂತ ಸಚಿವರಂತೆ!!!

post-bars

Leave a Comment

Related post