ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ
ಕಾಬೂಲ್ಗೆ 21 ಟನ್ ಭೂಕಂಪ ಸಹಾಯ ಸಾಮಗ್ರಿಗಳನ್ನು ವಿಮಾನದ ಮೂಲಕ ತಲುಪಿಸಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ನವದೆಹಲಿ: ಆಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪದ afghanistan earthquake 2025 ನಂತರ ಸಾವನ್ನಪ್ಪಿದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ಭಾರತವು ಕಾಬೂಲ್ಗೆ 21 ಟನ್ ಭೂಕಂಪ ಸಹಾಯ ಸಾಮಗ್ರಿಗಳನ್ನು ವಿಮಾನದ ಮೂಲಕ ತಲುಪಿಸಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಭಾರತದ ಭೂಕಂಪ ಸಹಾಯವು ಕಾಬೂಲ್ಗೆ ವಿಮಾನದ ಮೂಲಕ ತಲುಪಿದೆ. ಕಂಬಳಿಗಳು, ಟೆಂಟ್ಗಳು, ನೈರ್ಮಲ್ಯ ಕಿಟ್ಗಳು, ನೀರು ಸಂಗ್ರಹ ಟ್ಯಾಂಕ್ಗಳು, ಜನರೇಟರ್ಗಳು, ಅಡುಗೆ ಪಾತ್ರೆಗಳು, ಪೋರ್ಟಬಲ್ ವಾಟರ್ ಪ್ಯೂರಿಫೈಯರ್ಗಳು, ಸ್ಲೀಪಿಂಗ್ ಬ್ಯಾಗ್ಗಳು, ಅಗತ್ಯ ಔಷಧಗಳು, ವೀಲ್ಚೇರ್ಗಳು, ಹ್ಯಾಂಡ್ ಸ್ಯಾನಿಟೈಸರ್ಗಳು, ನೀರು ಶುದ್ಧೀಕರಣ ಮಾತ್ರೆಗಳು, ORS ಪರಿಹಾರಗಳು ಮತ್ತು ವೈದ್ಯಕೀಯ ಉಪಭೋಗ್ಯ ವಸ್ತುಗಳು ಸೇರಿದಂತೆ 21 ಟನ್ ಪರಿಹಾರ ಸಾಮಗ್ರಿಗಳನ್ನು ಇಂದು ವಿಮಾನದ ಮೂಲಕ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲಿಬಾನ್ ಸರ್ಕಾರದ ವಕ್ತಾರರ ಪ್ರಕಾರ, ಭೂಕಂಪದಿಂದ ಆಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1500 ಆಗಿದೆ ಎನ್ನಲಾಗಿದೆ.
ಭೂಕಂಪದ ಬಗ್ಗೆ ಪ್ರಧಾನಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ ಮತ್ತು ಗಾಯಗೊಂಡವರಿಗೆ ನಾವು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇವೆ. ಪೀಡಿತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಭಾರತ ಸಿದ್ಧವಾಗಿದೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: