Back To Top

 ಆಟೋ ಸಾಲ ತೀರಿಸಲು ಸ್ನೇಹಿತೆ ಅಪಹರಿಸಿ ಕೊಲೆ ಮಾಡಿ ಮಾಂಗಲ್ಯ ಕದ್ದ ಚಾಲಕ ಮತ್ತು ಸ್ನೇಹಿತರು

ಆಟೋ ಸಾಲ ತೀರಿಸಲು ಸ್ನೇಹಿತೆ ಅಪಹರಿಸಿ ಕೊಲೆ ಮಾಡಿ ಮಾಂಗಲ್ಯ ಕದ್ದ ಚಾಲಕ ಮತ್ತು ಸ್ನೇಹಿತರು

ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಅರ್ಚನಾಳನ್ನು ವೇಲಿನಿಂದ ಕತ್ತು ಬಿಗಿದು ಸಾಯಿಸಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ mangalya chain ದೋಚಿದ್ದಾರೆ.

ಚಿಕ್ಕಬಳ್ಳಾಪುರ: ಆಟೋ ಚಾಲಕರು ಕಷ್ಟಕ್ಕೆ ಆಗುವವರು ಎನ್ನುವ ಮಾತಿದೆ. ಆದರೆ ಆಟೋ ಚಾಲಕನೇ ಮಾಯವಾಗಿ ಬಂದರೆ ಹೇಗೇ ಎನ್ನುವುದಕ್ಕೆ ಆಟೋ ಸಾಲ ತೀರಿಸಲಾಗದೆ ಆಟೋ ಚಾಲಕನೋರ್ವ ತನ್ನ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಆಟೋ ಚಾಲಕ ರಾಕೇಶ್ ಸಾಲ ಮಾಡಿ ಹೊಸ ಆಟೋ auto ಖರೀದಿಸಿದ್ದನು. ಅಲ್ಲದೇ ಮೂರು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ದುಡ್ಡು ಮಾಡುವ ದಾರಿ ತಿಳಿಯದ ಚಾಲಕ
ಆತನ ಸ್ನೇಹಿತೆ ಅರ್ಚನಾಗೆ ವಿಡಿಯೋ ಕಾಲ್ ಮಾಡಿ ಕಷ್ಟ ಹೇಳಿಕೊಂಡು ಮಾತನಾಡುವಾಗ ರಾಕೇಶ್ ಅರ್ಚನಾಳ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರದ ಮೇಲೆ ಕಣ್ಣು ಹಾಕಿದ್ದಾನೆ.
ನಂತರ ಮತ್ತೋರ್ವ ಸ್ನೇಹಿತೆ ನಿಹಾರಿಕಾ ಬಳಿ ಇದೇ ಕಷ್ಟ ಹೇಳಿಕೊಂಡಿದ್ದನು ಎನ್ನಲಾಗಿದೆ. ಆದ್ರೆ ನಿಹಾರಿಕಾ ತಾನೂ ಬರೋಕೆ ಆಗಲ್ಲ ಅಂತ ಅಂಜಲಿ ಎಂಬ ಯುವತಿಯನ್ನು ಕಳುಹಿಸಿಕೊಟ್ಟಿದ್ದಾಳೆ. ಅಂಜಲಿ ತನ್ನ ಸ್ನೇಹಿತ ನವೀನ್ ಎಂಬಾತನನ್ನು ಜೊತೆ ಕರೆದುಕೊಂಡು ಬಂದಿದ್ದಳು ಎನ್ನಲಾಗಿದೆ.
ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನು ಊಟಕ್ಕೆ ಹೋಗೋಣ ಅಂತ ಹೇಳಿ ಕರೆದುಕೊಂಡು ಬಂದಿದ್ದಾರೆ.
ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಅರ್ಚನಾಳನ್ನು ವೇಲಿನಿಂದ ಕತ್ತು ಬಿಗಿದು ಸಾಯಿಸಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ದೋಚಿದ್ದಾರೆ.
ನಂತರ ಆಕೆಯ ಚಿನ್ನಾಭರಣವನ್ನು ಫೈನಾನ್ಸ್ ನಲ್ಲಿ ಅಡವಿಟ್ಟು 2.5 ಲಕ್ಷ ಹಣ ಪಡೆದು ಸಾಲ ತೀರಿಸಿ ಮೋಜು ಮಸ್ತಿ ಮಾಡಿದ್ದರು. ಅಪರಿಚಿತ ಶವ ಪತ್ತೆಯಾದಾಗ ಪೊಲೀಸರು police case ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಸ್ನೇಹಿತ ಎಂದು ನಂಬಿ ಬಂದ ಅರ್ಚನಾ ಕೊಲೆಯಾಗಿ ಹೋದಳು. ರಾಕೇಶ್ ಒಬ್ಬ ಕ್ರಿಮಿನಲ್ ಆಗಿದ್ದು ಹಲವು ಕಡೆ ಕೈ ಸಾಲ ಕೂಡ ಮಾಡಿಕೊಂಡಿದ್ದನು ಎನ್ನಲಾಗಿದೆ.

ಇದನ್ನು ಓದಿ:

Prev Post

ಗಣೇಶ ಹಬ್ಬದ ಪ್ರಯುಕ್ತ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಹೆಚ್ಚುವರಿ ಸೇವೆ…

Next Post

“ಯಕ್ಷಕಲಾ ಸಂಪನ್ನ”yakshakala sampanna

post-bars

Leave a Comment

Related post