ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ
ಗಂಡಂದಿರ ಸ್ನೇಹ ಸಲಿಗೆಯಲ್ಲಿ ಬೆಳೆದ ಅಕ್ರಮ ಸಂಬಂಧ ಗಂಡನ ಕೊಲೆಯಲ್ಲಿ ಅಂತ್ಯವಾಗಿದ್ದು, ಹೆಂಡತಿ ಜೈಲು ಪಾಲಾದರೆ ಪ್ರಿಯಕರ ಪರಾರಿಯಾಗಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ.
ಬೆಂಗಳೂರು: ಬೆಸ್ಟಿಗಳೇ ಜೀವನ ಹಾಳು ಮಾಡೋದು ಅನ್ನೋ ಮಾತಿದೆ. ಗೆಳೆಯರ ಸ್ನೇಹ, ಅಕ್ರಮ ಸಂಬಂಧದಿಂದ ಪತಿಯನ್ನು ಪತ್ನಿಯೇ ಕೊಲೆ ಮಾಡಿದಂತ ಘಟನೆ ನಡೆದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ madhanayakana halliಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಜಯಂತ್ ಕಳೆದ 30 ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು.
ಇಬ್ಬರೂ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವಿಜಯ್‌ಗೆ ಪತ್ನಿ ಆಶಾ ಮತ್ತು ಇಬ್ಬರು ಮಕ್ಕಳು ಇದ್ದರು. ಈ ನಡುವೆ ವಿಜಯ್ ಪತ್ನಿ ಆಶಾ ಮತ್ತು ಆತನ ಸ್ನೇಹಿತ ಜಯಂತ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.
ಪತ್ನಿ ಮತ್ತು ಸ್ನೇಹಿತನ ಸಂಬಂಧದ ಬಗ್ಗೆ ತಿಳಿದ ವಿಜಯ್, ಕುಟುಂಬದ ಶಾಂತಿಗಾಗಿ ಕಾಮಾಕ್ಷಿಪಾಳ್ಯದ ಮನೆಯನ್ನು ಬಿಟ್ಟು ಕಡಬಗೆರೆಯ ಮಾಚೋಹಳ್ಳಿ ಬಡಾವಣೆಗೆ ಸ್ಥಳಾಂತರಗೊಂಡಿದ್ದರು.
ಆದರೆ, ಆಶಾ ಮತ್ತು ಜಯಂತ್‌ರ ಅಕ್ರಮ ಸಂಬಂಧ ಮುಂದುವರಿದಿತ್ತು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು.
ಈ ಬೆನ್ನಲ್ಲೆ ಪತ್ನಿ ಆಶಾ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು. ಸಂಜೆ 7:30ರ ಸುಮಾರಿಗೆ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗುವುದಾಗಿ ಪತ್ನಿ ಆಶಾಗೆ ಹೇಳಿ ವಿಜಯ್ ಮನೆಯಿಂದ ಹೊರಟಿದ್ದ.
ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ವಿಜಯ್‌ನನ್ನು ಆತನ ಪತ್ನಿ ಆಶಾ ಮತ್ತು ಆಕೆಯ ಪ್ರಿಯಕರ ಜಯಂತ್ ಸೇರಿ ಹತ್ಯೆ ಮಾಡಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಹತ್ಯೆಯಾದ ವಿಜಯ್ ಕುಮಾರ್ ಪತ್ನಿ ಆಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ನಡೆದ ನಂತರ ನಾಪತ್ತೆಯಾಗಿರುವ ಪ್ರಿಯಕರ ಜಯಂತ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಗಂಡಂದಿರ ಸ್ನೇಹ ಸಲಿಗೆಯಲ್ಲಿ ಬೆಳೆದ ಅಕ್ರಮ ಸಂಬಂಧ ಗಂಡನ ಕೊಲೆಯಲ್ಲಿ ಅಂತ್ಯವಾಗಿದ್ದು, ಹೆಂಡತಿ ಜೈಲು ಪಾಲಾದರೆ ಪ್ರಿಯಕರ ಪರಾರಿಯಾಗಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ.
ಇದನ್ನು ಓದಿ: