Back To Top

 ನಟ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಜೈಲುಪಾಲು
August 16, 2025

ನಟ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಜೈಲುಪಾಲು

ದರ್ಶನ್ ಪೊಲೀಸರ ಕಣ್ಣು ತಪ್ಪಿಸಿ ಹೊಸಕರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆ ಸೇರಿದ್ದರು. ಪತ್ನಿ ಮನೆಯಿಂದಲೇ ಪೊಲೀಸರು ದರ್ಶನ್‌ ನನ್ನು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರು: ಬೇಲ್ ಮೇಲೆ ಹೊರಬಂದು ಓಡಾಡುತ್ತಿದ್ದ darshan ದರ್ಶನ್ ಮತ್ತೆ jailu ಜೈಲು ಪಾಲಾಗಿದ್ದಾರೆ.
ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಈಗ ಜೈಲು ಊಟ ಮಾಡುವಂತಾಗಿದೆ. ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ಕಾಟೇರಾ katera ಕಂಗಾಲಾಗಿದ್ದು ಸೈಲೆಂಟ್ ಮೂಡ್ ಗೆ ಹೋಗಿದ್ದಾರೆ.
ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಪ್ರಮುಖ ಆರೋಪಿ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ pavithra gowda ಬಂಧನವಾಗಿದೆ. ಇದೀಗ ಎ2 ಆರೋಪಿಯನ್ನು ಬಂಧಿಸಲು ನೈಸ್ ರೋಡ್ ಬಳಿ ಕಾದಿದ್ದರು.
ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿದ್ದರು. ಟೋಲ್ ಗೇಟ್ ಬಳಿಯೇ ಜೀಪ್ ಹಾಕಿಕೊಂಡು ಪೊಲೀಸರು ಕಾಯುತ್ತಿದ್ದರು. ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿ ಹೊಸಕರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆ ಸೇರಿದ್ದರು. ಪತ್ನಿ ಮನೆಯಿಂದಲೇ ಪೊಲೀಸರು ದರ್ಶನ್‌ ನನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಬೆಂಗಳೂರಿನಲ್ಲಿ ಐದು ಜನರ ಬಂಧನವಾಗಿದೆ, ಮತ್ತಿಬ್ಬರ ಬಂಧನಕ್ಕೆ ಬೆಂಗಳೂರು ಪೊಲೀಸರು ಚಿತ್ರದುರ್ಗಕ್ಕೆ ತೆರಳಿದ್ದಾರೆ.
ಪ್ರಕರಣ ಸಂಬಂಧ ಈಗ ಒಬ್ಬೊಬ್ಬರಾಗಿ ಬಂಧನವಾಗುತ್ತಿದ್ದು ಸಂದರ್ಭದಲ್ಲಿ ದರ್ಶನ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈಗ ಹೊಸಕೆರೆ ಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ನಿವಾಸಲ್ಲಿ ದರ್ಶನ್ ಪತ್ತೆಯಾಗಿದ್ದು, ಬಂಧನವಾಗಿದೆ.
ಅವರ ಅತ್ಯಾಪ್ತೆ ಗೆಳತಿ ಪವಿತ್ರಾ ಗೌಡಳನ್ನು ಕೂಡ ಆರ್ ಆರ್ ನಗರದಲ್ಲಿನ ನಿವಾಸದಲ್ಲೇ ಬಂಧಿಸಲಾಗಿತ್ತು. ಆಗಸ್ಟ್ 13ರಂದು ಮೈಸೂರಿನ ಟೀ ನರಸೀಪುರದಲ್ಲಿರುವ ವಿನೀಶ್ ದರ್ಶನ್ ಫಾರಂ ಹೌಸ್‌ ನಲ್ಲಿ ಇದ್ದರೆಂದು ಮಾಹಿತಿ ಲಭ್ಯವಾಗಿತ್ತು. ಆದರೆ ಅಲ್ಲಿರಲಿಲ್ಲ. ತಮಿಳುನಾಡು ಹೋಗಿದ್ದಾರೆಂದು ಸುದ್ದಿಯಾಗಿತ್ತು. ಟೋಲ್‌ ಗಳಲ್ಲಿ ಅವರ ಕಾರು ಮತ್ತು ಜೀಪು ಓಡಾಡಿದ ಸಿಸಿಟಿವಿ ದೃಶ್ಯ ಸೆರೆಯಾಗಿತ್ತು.
ಬೇಲ್‌ ರದ್ದಾದ ಮೇಲೆ ಪೊಲೀಸರು ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದರು. ಕಾರು ಮತ್ತು ಜೀಪು ವಾಪಾಸಾಗುವಾಗ ನೈಸ್‌ ರಸ್ತೆ ಬಳಿ ಅವರ ಆಪ್ತರು ವಾಹನವನ್ನು ಓಡಿಸುತ್ತಿದ್ದದು ಪತ್ತೆಯಾಯ್ತು. ಹೀಗಾಗಿ ಪೊಲೀಸರ ಕಣ್ಣು ತಪ್ಪಿಸಿದ್ದ ದರ್ಶನ್ ಕೊನೆಗೂ ಬಂಧನವಾಗಿದೆ.
ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಪೊಲೀಸ್‌ ಠಾಣೆಯಲ್ಲಿದ್ದು, ಈಕೆಯ ಜೊತೆಗೆ ಲಕ್ಷ್ಮಣ್, ಪ್ರದೋಷ್, ನಾಗಾರಾಜ್ ಬಂಧನವಾಗಿದೆ.

ಚಿತ್ರದುರ್ಗದ ಇಬ್ಬರು ಆರೋಪಿಗಳಾದ ಎ6 ಅನುಕುಮಾರ್, ಎ7 ಜಗದೀಶ್ ಅನ್ನು ವಶಕ್ಕೆ ಪಡೆಯಲು ಕಾಮಾಕ್ಷಿಪಾಳ್ಯ ಠಾಣೆ ಎಸ್ ಐ ವಿನಾಯಕ ನೇತೃತ್ವದ ಟೀಮ್ ಚಿತ್ರದುರ್ಗಕ್ಕೆ ತೆರಳಿದೆ. ಆರೋಪಿಗಳ ಮೆಡಿಕಲ್ ಚೆಕಪ್ ಮಾಡಿಸಲು ವೈದ್ಯರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿರುವ ವೇಳೆ ಮಾರ್ಗ ಮಧ್ಯೆ ನಟ ದರ್ಶನ್ ಕಾರು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನೈಸ್‌ ರಸ್ತೆಯಲ್ಲಿ ದರ್ಶನ್‌ನ ವಾಹನಗಳು ಪತ್ತೆಯಾಗಿದ್ದು, ಫಾರ್ಚೂನರ್ ಕಾರು ಹಾಗೂ ಕೆಂಪು ಬಣ್ಣದ ಜೀಪ್‌ ಎರಡನ್ನೂ ಪೊಲೀಸರು ತಡೆದು ಅದರಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.
ಇನ್ನು ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಪೋಟೋ ಹಾಕಿ ಹಾರ್ಟ್ ಬ್ರೇಕ್ ಸಿಂಬಲ್ ಹಾಕಿದ್ದಾರೆ. ದೇವಾಲಯಗಳನ್ನು ಸುತ್ತಿ ದರ್ಶನ್ ಬಚ್ಚಾವಿಗೆ ಶ್ರಮಿಸುತಿದ್ದ ವಿಜಯಲಕ್ಷ್ಮಿಗೆ ದೊಡ್ಡ ಆಘಾತವೇ ಆಗಿದೆ.
ಈಗ ಜೈಲ್ ನಲ್ಲಿ ಸಾಮಾನ್ಯರಂತೆ ವ್ಯವಸ್ಥೆಗಳಿದ್ದು ಸೆಲೆಬ್ರಿಟಿಗಳ ಸ್ಟೇಟಸ್ ತೋರಿಸುವಂತಿಲ್ಲ. ಪುರುಷ ಕೈದಿಗಳು ಒಂದೇ ಜೈಲಿನಲ್ಲಿ ಇದ್ದರೆ, ಪವಿತ್ರಾ ಗೌಡ ಮಹಿಳಾ ಜೈಲಿನಲ್ಲಿದ್ದಾರೆ‌.

ಇದನ್ನು ಓದಿ:

Prev Post

ಆಕಸ್ಮಿಕ ಬೆಂಕಿ ಅವಘಡಕ್ಕೆ ಕುಟುಂಬ ಸೇರಿ ಐವರು ಸಾವು

Next Post

ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ

post-bars

Leave a Comment

Related post