Back To Top

 ಡೇ ಕೇರ್’ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹಲ್ಲೆ ನಡೆಸಿದ ಸಿಬ್ಬಂದಿ

ಡೇ ಕೇರ್’ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹಲ್ಲೆ ನಡೆಸಿದ ಸಿಬ್ಬಂದಿ

ದಾದಿಯೊಬ್ಬಳು ‘ಡೇ ಕೇರ್’ನಲ್ಲಿ 15 ತಿಂಗಳ ಕಂದಮ್ಮನಿಗೆ ಕಚ್ಚಿ, ಕ್ರೂರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ನೋಯ್ಡಾ: ದಾದಿಯೊಬ್ಬಳು ‘ಡೇ ಕೇರ್’ನಲ್ಲಿ 15 ತಿಂಗಳ ಕಂದಮ್ಮನಿಗೆ ಕಚ್ಚಿ, ಕ್ರೂರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ನೋಯ್ಡಾದ ಡೇ ಕೇರ್ ನಲ್ಲಿ(noyda day care baby) 15 ತಿಂಗಳ ಹೆಣ್ಣು ಮಗುವಿಗೆ ದಾದಿಯೊಬ್ಬರು ಕಪಾಳಮೋಕ್ಷ ಮಾಡಿ, ಕಚ್ಚಿ, ನೆಲಕ್ಕೆ ಎಸೆದು, ಪ್ಲಾಸ್ಟಿಕ್ ಬಾಟಲಿಯಿಂದ ಥಳಿಸಿದ್ದಾರೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ.4 ರಂದು ಮಗುವಿನ ತಾಯಿ ಅವಳನ್ನು ಡೇ ಕೇರ್ ನಿಂದ ಮನೆಗೆ ಕರೆತಂದಾಗ, ಮಗು ಒಂದೇ ಸಮನೆ ಅಳುತ್ತಿರುವುದನ್ನು ಕಂಡಳು.
ಮಗುವಿನ ಬಟ್ಟೆ ಬದಲಾಯಿಸುವಾಗ, ತಾಯಿ ಅವಳ ಎರಡೂ ತೊಡೆಗಳ ಮೇಲೆ ಗಾಯದ ಗುರುತುಗಳನ್ನು ಗಮನಿಸಿದಳು. ಅವರು ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ದರು. ಇದು ಮಾನವನ ಹಲ್ಲಿನ teeth ಕಡಿತದಿಂದ ಆದ ಗಾಯ ಎಂದು ಹೇಳಿದ್ದಾರೆ.
ನಂತರ ಪೋಷಕರು ಡೇ ಕೇರ್ ನ ಸಿಸಿಟಿವಿ cctv ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದೌರ್ಜನ್ಯದ ಆಘಾತಕಾರಿ ದೃಶ್ಯಗಳು ಬಹಿರಂಗಗೊಂಡವು. ವೀಡಿಯೊದಲ್ಲಿ, ಕೆಲಸದಾಕೆ ಅಳುತ್ತಿರುವ ಮಗುವನ್ನು ಆರಂಭದಲ್ಲಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಹುಡುಗಿ ಅಳುತ್ತಲೇ ಇದ್ದಾಗ, ಕೆಲಸದಾಕೆ ಕೋಣೆಯ ಬಾಗಿಲು ಮುಚ್ಚಿ, ಮಗುವನ್ನು ನೆಲಕ್ಕೆ ಬೀಳಿಸಿ, ಕಪಾಳಮೋಕ್ಷ ಮಾಡಿ, ಕಚ್ಚಿ, ಪ್ಲಾಸ್ಟಿಕ್ ಬ್ಯಾಟ್ ನಿಂದ ಹೊಡೆದಳು.
ಇದಕ್ಕೆ‌ ಪೋಷಕರು ಡೇ ಕೇರ್ ಮುಖ್ಯಸ್ಥರ ನಿರ್ಲಕ್ಷ್ಯ ಮತ್ತು ದುರ್ನಡತೆ ಕಾರಣ ಎಂದು ಆರೋಪ ಮಾಡಲಾಗಿದ್ದು, ಕೆಲಸದಾಕೆ ಮತ್ತು ಡೇ ಕೇರ್ ಮುಖ್ಯಸ್ಥರು ಹಲ್ಲೆಯ ಬಗ್ಗೆ ಕೇಳಲು ಹೋದಾಗ ನಿಂದನಾ ಭಾಷೆ ಮತ್ತು ಬೆದರಿಕೆಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಕೈಗೊಳ್ಳಲಾಗಿದೆ.

ಇದನ್ನು ಓದಿ:

Prev Post

ಕಸ್ಟಡಿಯಲ್ಲಿರುವಾಗಲೇ ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ ಕಳ್ಳ: ಕಾನ್ಸ್ಟೇಬಲ್ ಅಮಾನತು

Next Post

ಕೊರಟಗೆರೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಅತ್ತೆಯನ್ನು ಕೊಂದು ತುಂಡರಿಸಿದ ಅಳಿಯ

post-bars

Leave a Comment

Related post