Back To Top

 19 ಪುರುಷರಿಗೆ ಎಚ್ಐವಿ ಹರಡಿದ ಮಾದಕ ವ್ಯಸನಿಯಾಗಿದ್ದ 17ರ ಬಾಲಕಿ
August 10, 2025

19 ಪುರುಷರಿಗೆ ಎಚ್ಐವಿ ಹರಡಿದ ಮಾದಕ ವ್ಯಸನಿಯಾಗಿದ್ದ 17ರ ಬಾಲಕಿ

ಉತ್ತರಾಖಂಡ: ಮಾದಕವಸ್ತುಗಳ ಜಾಲಕ್ಕೆ ಯುವಜನರು ಬೇಗ ಬಲಿಯಾಗುತ್ತಿದ್ದಾರೆ. ಉತ್ತಮ ಭವಿಷ್ಯ ರೂಪಿಸುವ ಸಂದರ್ಭದಲ್ಲಿ ಕೆಟ್ಟ ಚಟಗಳು ಮಕ್ಕಳ ಭವಿಷ್ಯ ಹಾಳು ಮಾಡುತ್ತದೆ ಇದಕ್ಕೆ ಉದಾಹರಣೆಯಾಗಿ ಮಾದಕ ವ್ಯಸನಿಯಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಕಳೆದ ಒಂದೂವರೆ ವರ್ಷಗಳಲ್ಲಿ ಕನಿಷ್ಠ 19 ಪುರುಷರಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಹರಡಿದ್ದಾಳೆ ಎನ್ನಲಾಗಿದೆ.

ಮಾದಕ ವ್ಯಸನಕ್ಕೆ ದಾಸಳಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಹಲವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಲ್ಲದೆ, ಎಚ್‌ಐವಿ ಹರಡಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡದ ರಾಮನಗರ್ ಪಟ್ಟಣದಲ್ಲಿ ನಡೆದಿದೆ.
ಈ ಘಟನೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೈನಿತಾಲ್ ಜಿಲ್ಲೆಯ ಗುಲರ್‌ಘಟ್ಟಿ ಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಹದಿಹರೆಯದ ಬಾಲಕಿ ಹಲವಾರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಅವರಲ್ಲಿ ಹಲವರಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ. ಬಾಲಕಿ ತನಗೆ ಬಂದ ಹಣವನ್ನು ತನ್ನ ಮಾದಕ ವ್ಯಸನಕ್ಕೆ ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ.
ಹದಿಹರೆಯದ ಬಾಲಕಿಯೊಂದಿಗೆ ಸಂಪರ್ಕ ಹೊಂದಿದ ಪುರುಷರಿಗೆ ಅವಳು ಎಚ್‌ಐವಿ ಪಾಸಿಟಿವ್ ಎಂದು ತಿಳಿದಿರಲಿಲ್ಲ ಎನ್ನಲಾಗಿದೆ. ವಿವಾಹಿತ ಪುರುಷರೊಂದಿಗೂ ಆಕೆ ಮಲಗಿದ್ದಳು. ಇದು ಅವರ ಹೆಂಡತಿಯರಿಗೆ ವೈರಸ್ ಮತ್ತಷ್ಟು ಹರಡಲು ಕಾರಣವಾಯಿತು ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹಲವಾರು ಜನರ ಬದುಕಿಗೆ ಆಕೆ ಕಪ್ಪು ಚುಕ್ಕೆ ಇಟ್ಟಿದ್ದು ಈಗ ರೋಗಕ್ಕೆ ಬಲಿಯಾದವರಿಗೆ ಆರೋಗ್ಯದ ಆತಂಕ ಉಂಟಾಗಿದೆ.

ಇದನ್ನು ಓದಿ:

Prev Post

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ

Next Post

ಬ್ಯೂಟೀಷಿಯನ್ ಯುವತಿ ಮೇಲೆ ಪಾರ್ಲರ್ ಮಾಲಕಿಯಿಂದ ಹಲ್ಲೆ, ಬ್ಲಾಕ್ ಮೇಲ್ ಆರೋಪ

post-bars

Leave a Comment

Related post