Back To Top

 ಆ.10ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅರ್ಧ ಕಿಮೀನಷ್ಟು ರೋಡ್ ಶೋ, ಬೃಹತ್ ಸಮಾವೇಶದಲ್ಲಿ ಭಾಗಿ
August 5, 2025

ಆ.10ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅರ್ಧ ಕಿಮೀನಷ್ಟು ರೋಡ್ ಶೋ, ಬೃಹತ್ ಸಮಾವೇಶದಲ್ಲಿ ಭಾಗಿ

ಆ.10ರಂದು ಪ್ರಧಾನಿ ಮೋದಿ pm modhi ಬೆಂಗಳೂರು ಮೆಟ್ರೋ ಹಳದಿ ಮಾರ್ಗ yellow root ಉದ್ಘಾಟಿಸಲಿದ್ದಾರೆ. ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ metro train ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆ.10ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸಲಿದ್ದು, ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಆ.10ರಂದು ಪ್ರಧಾನಿ ಮೋದಿ ಬಿಜೆಪಿ bjp ಆಯೋಜಿಸಿರುವ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಅರ್ಧ ಕಿಮೀನಷ್ಟು ರೋಡ್ ಶೋ road showಕೂಡ ನಡೆಸಲಿದ್ದಾರೆ. ಮೆಟ್ರೋ ಕಾರ್ಯಕ್ರಮ ಮುಗಿದ ಬಳಿಕ ಮೋದಿ ಮೆಟ್ರೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಯನಗರದಲ್ಲಿರುವ ಶಾಲಿನ ಆಟದ ಮೈದಾನದಲ್ಲಿ ಸಮಾವೇಶ ನಿಗದಿಯಾಗಿದೆ.
ಆ.10ರಂದು ಪ್ರಧಾನಿ ಮೋದಿ narendra modhi ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ. ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.
ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸಲಾಗಿದೆ.
ಈ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದ್ದು, 19.15 ಕಿಲೋಮೀಟರ್ ದೂರ ಹೊಂದಿದೆ.
ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ ಸೆಂಟ್ರಲ್, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣದವರೆಗೆ ಕಾರ್ಯಾಚರಣೆ ನಡೆಸಲಿದೆ.
ಒಟ್ಟು 16 ನಿಲ್ದಾಣ ಒಳಗೊಂಡಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದ ನಂತರ ಪ್ರತಿದಿನ ಸುಮಾರು 2.6 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಮೆಟ್ರೋದಿಂದ ಸಾಕಷ್ಟು ದೂರದ ಪ್ರಯಾಣಿಕರಿಗೆ ಸಹಾಯವಾಗಲಿದೆ. ಮತ್ತು ಟ್ರಾಫಿಕ್ ರಹಿತ ವೇಗದ ಪ್ರಯಾಣಕ್ಕೆ ಸಹಕಾರಿಯಾಗಲಿದೆ.

ಇದನ್ನು ಓದಿ:

Prev Post

“ಯಕ್ಷ ಕಲಾನ್ವಿತೆ” yaksha kalanvithe

Next Post

ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಲೈನ್ ಗೆ ಚಾಲನೆ

post-bars

Leave a Comment

Related post