Back To Top

 “ಯಕ್ಷ ಯಶಸ್ವಿನಿ”: yaksha yashashwini
July 31, 2025

“ಯಕ್ಷ ಯಶಸ್ವಿನಿ”: yaksha yashashwini

ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಗೊಂಡು ಇಂದು ಹವ್ಯಾಸಿ ತಂಡಗಳಲ್ಲಿ ತಮ್ಮ ವೇಷದ ಮೂಲಕ ಪ್ರತಿಭೆಯನ್ನು ತೋರಿಸುತ್ತಿರುವ ಯುವ ಕಲಾವಿದೆ ಯಶಸ್ವಿನಿ ಸಾಲಿಗ್ರಾಮ.

ತಂದೆಯೊಂದಿಗೆ ಬಾಲ್ಯದಿಂದಲೇ ರಾತ್ರಿಪೂರ್ತಿ ಯಕ್ಷಗಾನ yakshagana ನೋಡುತ್ತಾ ಬೆಳೆದ ಇವರು ಯಕ್ಷಗಾನದ ಕುಣಿತ, ವೇಷಭೂಷಣ ನೋಡಿ ನಾನು ಯಕ್ಷಗಾನ ಕ್ಷೇತ್ರಕ್ಕೆ ಬರಬೇಕು ಎಂಬ ಆಸಕ್ತಿ ಹಾಗೂ ಮನೆಯ ಹಿಂದೆಯೇ ಸಾಲಿಗ್ರಾಮ ಮೇಳದ ಯಕ್ಷಗಾನ ತುಂಬಾ ಆಗುತ್ತಿತ್ತು. ಇದರಿಂದಲೂ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಗೊಂಡು ಇಂದು ಹವ್ಯಾಸಿ ತಂಡಗಳಲ್ಲಿ ತಮ್ಮ ವೇಷದ ಮೂಲಕ ಪ್ರತಿಭೆಯನ್ನು ತೋರಿಸುತ್ತಿರುವ ಯುವ ಕಲಾವಿದೆ ಯಶಸ್ವಿನಿ ಸಾಲಿಗ್ರಾಮ.

cm

ಉಡುಪಿ ಜಿಲ್ಲೆಯ ಸಾಲಿಗ್ರಾಮದ ದಿವಂಗತ ಲಕ್ಷ್ಮಣ ಹಾಗೂ ಸರೋಜಿನಿ ಇವರ ಮಗಳಾಗಿ 25.09.2001 ರಂದು ಯಶಸ್ವಿನಿ ಸಾಲಿಗ್ರಾಮ ಅವರ ಜನನ. ಬಿಕಾಂ ಇವರ ವಿದ್ಯಾಭ್ಯಾಸ.

ಯಕ್ಷಗಾನ ಗುರುಗಳು:-
♦️ ಪ್ರಸಾದ್ ಕುಮಾರ್ ಮೊಗೆಬೆಟ್ಟು.
♦️ ಉದಯ್ ಹೊಸಾಳ.
♦️ ಮಹೇಶ್ ಮಂದಾರ್ತಿ.

ನೆಚ್ಚಿನ ಪ್ರಸಂಗಗಳು:-
ಸುಧನ್ವಾರ್ಜುನ, ಸುದರ್ಶನ ವಿಜಯ, ನರಕಾಸುರ ವಧೆ, ದಕ್ಷಯಜ್ಞ, ಚಕ್ರಚಂಡಿಕೆ, ಜ್ವಾಲಾ ಪ್ರತಾಪ.
ನೆಚ್ಚಿನ ವೇಷಗಳು:-
ವಿಷ್ಣು, ಸುಧನ್ವ, ನರಕಾಸುರ, ರಾವಣ, ಮೀನಾಕ್ಷೀ, ಬರ್ಬರಿಕ, ಅರ್ಜುನ.

jfj

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳ ನಿರ್ದೇಶನ, ಅನುಭವ ಇರುವ ಕಲಾವಿದರ ಹತ್ತಿರ ಹೋಗಿ ಆ ದಿನದ ಪ್ರಸಂಗದ ಬಗ್ಗೆ ಕೇಳಿ ಪ್ರಸಂಗದ ಪದ್ಯ ಒಮ್ಮೆ ನೋಡಿ ಹಾಗೂ ಎದುರು ವೇಷದ ನಡೆ ಬಗ್ಗೆ ತಿಳಿದುಕೊಂಡು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯುವ ಪ್ರೇಕ್ಷಕರು ಈ ಕಲೆಯ ಮೇಲೆ ಹೆಚ್ಚು ಆಕರ್ಷಿತರಾಗಿದ್ದಾರೆ. ಪ್ರೇಕ್ಷಕರು ಯಾವತ್ತು ಕಲೆಗೂ ಕಲಾವಿದರಿಗೂ ಅಗತ್ಯ. ಉತ್ತಮ ಪ್ರೇಕ್ಷಕರು ಇಂದು ಆಟವನ್ನು ನೋಡುವುದಕ್ಕೆ ಬಂದು ಕಲಾವಿದರ ತಪ್ಪು ಒಪ್ಪುಗಳನ್ನು ಕಲಾವಿದರಿಗೆ ತಲುಪಿಸುವ ಮೂಲಕ ತಿದ್ದಿಕೊಳ್ಳುವುದಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ.

mmc

ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ಯೋಜನೆ ಮಾಡಿ ಅದನ್ನು ಪೂರ್ಣಗೊಳಿಸುವ ಅರ್ಹತೆ ನಾನಿನ್ನೂ ಪಡೆದಿಲ್ಲ. ಆದರೆ ಪಾತ್ರದ ಔಚಿತ್ಯಕ್ಕೆ ಬೇಕಾದ ಹಾಗೆ ಪಾತ್ರ ಮಾಡುವಲ್ಲಿ ಕಲಿಯುವ ಹಾಗೂ ಅದನ್ನು ಸಾಧಿಸುವ ಹಂಬಲ ಯೋಚನೆ ಇದೆ.

ndmm

ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಬಾಂಧವ್ಯ ಫೌಂಡೇಶನ್ (ರಿ) ಪಾಂಡೇಶ್ವರ.
♦️ ಯುವ ವೇದಿಕೆ (ರಿ) ಚಿತ್ಪಾಡಿ ಉಡುಪಿ ಸನ್ಮಾನ.
ಊರಿನ ಕೆಲವು ಸಂಘ ಸಂಸ್ಥೆಯಲ್ಲಿ  ಪ್ರತಿಭಾ ಪುರಸ್ಕಾರ.
ಚಿನ್ನದ ಮೀನು, ಬೆಸ್ಟ್ ಸ್ವಿಮ್ಮರ್, ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.

nfm

ಹವ್ಯಾಸಗಳು:-
ಈಜು, ವಾಲಿಬಾಲ್, ಚಿತ್ರಕಲೆ, ನೃತ್ಯ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಯಶಸ್ವಿನಿ ಸಾಲಿಗ್ರಾಮ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇದನ್ನು ಓದಿ:

Prev Post

ನಟಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗರಂ: ದರ್ಶನ್ ಪರ ರಕ್ಷಿತಾ ಟಾಂಗ್

Next Post

“ಮಲೆನಾಡಿನ ಕಲಾಸಿರಿ”: malenada kalasiri nagashri

post-bars

Leave a Comment

Related post