ನಾಗರ ಪಂಚಮಿ ಹಬ್ಬದ ವಿಶೇಷತೆ ಮತ್ತು ಆಚರಣೆ
ಹಾಲಿಗೆ ಜೇನುತುಪ್ಪ, ಬೆಲ್ಲ, ಎಳನೀರು, ಅರಿಶಿಣ ಇತ್ಯಾದಿ ಹಾಕಿ ನಾಗದೇವರಿಗೆ ಅಭಿಷೇಕ ಮಾಡಲಾಗುತ್ತದೆ. : nagarapanchami
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವಾರು ಭಾಗಗಳಲ್ಲಿ ಭಕ್ತಿಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. cobra ಈ ದಿನ ಭಕ್ತರು ನಾಗನಿಗೆ (ಹಾವು), nagrapanchami ವಿಶೇಷವಾಗಿ ನಾಗದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಪೂಜೆ ಮತ್ತು ವಿಶೇಷ ತಯಾರಿಗಳು
• ಸಾಮಾನ್ಯವಾಗಿ ಹಾವಿನ ಹುತ್ತಕ್ಕೆ ಅಲಂಕಾರ ಮಾಡಿ, ಹಾಲೆರೆದು ಪೂಜೆಗೈಯುತ್ತಾರೆ.
• ಕೆಲವೆಡೆ ನಾಗಸಂಪಿಗೆ, ಪಿಂಗಾರ, ಅಕ್ಕಿ, ಬೆಲ್ಲ, ಅರಳು ಇತ್ಯಾದಿ ನೀಡಲಾಗುತ್ತದೆ.
• ಹಾಲಿಗೆ ಜೇನುತುಪ್ಪ, ಬೆಲ್ಲ, ಎಳನೀರು, ಅರಿಶಿಣ ಇತ್ಯಾದಿ ಹಾಕಿ ನಾಗದೇವರಿಗೆ ಅಭಿಷೇಕ ಮಾಡಲಾಗುತ್ತದೆ.
ಪೂಜೆ ವಿಧಾನ
• ಹುತ್ತ ಅಥವಾ ಕಲ್ಲಿನ ಮೂರ್ತಿಯನ್ನು ನೀರಿನಿಂದ ಶುದ್ಧ ಮಾಡಿ, ಹಾಲು, ಅರಶಿಣ, ಎಳ್ನೀರು, ಜೇನುತುಪ್ಪಗಳಿಂದ ನಾಗದೇವರಿಗೆ ಅಭಿಷೇಕ ಮಾಡುತ್ತಾರೆ.
• ನಂತರ ಪೂಜೆಗೆ ಪಿಂಗಾರ, ಅಕ್ಕಿ, ಬೆಲ್ಲ, ಅರಳು ಇವನ್ನು ಸಮರ್ಪಿಸಿ ದೀಪ ಹಚ್ಚಿ ಆರತಿಯನ್ನು ಸಲ್ಲಿಸಲಾಗುತ್ತದೆ.
• ಹಬ್ಬದ ನಂತರ ಎಲ್ಲರೂ ಪ್ರಸಾದ ನೀಡಲಾಗುತ್ತದೆ
ತಿಂಡಿ ಮತ್ತು ಸಾಂಪ್ರದಾಯ
• ನಾಗರ ಪಂಚಮಿಯ ದಿನ ಅರಿಶಿಣ ಎಲೆಯಲ್ಲಿ ಸಾಂಪ್ರದಾಯಕ್ಕನುಗುಣವಾಗಿ ತಿಂಡಿ ಮಾಡಲಾಗುತ್ತದೆ.
• ಈ ದಿನ ಮೆಣಸಿನ ಹುಳಿ ಅಥವಾ ಸಾಂಬಾರ ಮಾಡುವುದಿಲ್ಲ.
• ಅರಿಶಿಣ ಎಲೆಯ ತಿಂಡಿಗಳನ್ನು ತಿನ್ನುವುದೇ ಈ ಹಬ್ಬದ ವಿಶೇಷತೆಯಾಗಿದೆ.
• ಅಕ್ಕಿ ಹಿಟ್ಟು, ಎಳ್ಳು, ಬೆಲ್ಲ, ತೆಂಗಿನಕಾಯಿ ಮುಂತಾದವುಗಳಿಂದ ಈ ತಿಂಡಿಯನ್ನು ತಯಾರಿಸಲಾಗುತ್ತದೆ.
ನಂಬಿಕೆ ಮತ್ತು ಮಹತ್ವ
• ನಾಗದೇವರನ್ನು ಪೂಜಿಸುವುದರಿಂದ ಸರ್ಪದೋಷ, ವಿಷಬಾಧೆ, ಮತ್ತು ಇತರ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ.
• ಹಿರಿಯರು ಇಂದಿಗೂ ಈ ಹಬ್ಬದ ಮೂಲಕ ನಾಗದೇವರ ಆರಾಧನೆ ಮತ್ತು ನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ.
• ದೇವಸ್ಥಾನಗಳಲ್ಲಿಯೂ ನಾಗರ ಪಂಚಮಿ ಪೂಜೆ ಜರಗುತ್ತದೆ.
ಬರಹ:
ಅನನ್ಯ
ಎಸ್‌ಡಿಎಂ ಕಾಲೇಜು, ಉಜಿರೆ
ಇದನ್ನು ಓದಿ: