Back To Top

 ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು
July 22, 2025

ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು

ನಾಯಿಗಳು ಔಷಧಿ ಬಾಟಲಿಗಳೊಂದಿಗೆ, ಪಾಲಿಥಿನ್ ಮತ್ತು ಖಾಲಿ ಇಂಜೆಕ್ಷನ್ ಸಿರಿಂಜ್‌ಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ವಾರ್ಡ್‌ಗಳ ಸುತ್ತಲೂ ಓಡುತ್ತಿದ್ದರೂ ಕ್ಯಾರ್ ಮಾಡ್ತಾ ಇಲ್ಲ ಅನ್ನುವುದು ಚರ್ಚೆಗೆ ಕಾರಣವಾಗಿದೆ.

ಉತ್ತರ ಪ್ರದೇಶ: ಆಸ್ಪತ್ರೆ hospital ಎಂದರೆ ನೂರಾರು ರೋಗಿಗಳ ಕಾಳಜಿ ವಹಿಸುವ ಅತಿ ಸೂಕ್ಷ್ಮ ಪ್ರದೇಶ.ಎಂಥದೆ ಆರೋಗ್ಯ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಹೋದರೆ ಆರೋಗ್ಯ ಸುಧಾರಿಸುತ್ತದೆ ಎಂದು ನಂಬುತ್ತೇವೆ. ಆದರೆ ಮಹೋಬಾ ಮತ್ತು ಇಟಾವ ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿನಾಯಿಗಳು ಮನೆ ಮಾಡಿಕೊಂಡಿದೆ. ವಾರ್ಡ್ ಒಳಗೆ ನಾಯಿಗಳು ರಕ್ತದ ಚೀಲಗಳೊಂದಿಗೆ ಆಟವಾಡುತ್ತಿದ್ದರೂ ಯಾರೂ ಅವುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿಲ್ಲ.

ನಾಯಿಗಳು ಔಷಧಿ ಬಾಟಲಿಗಳೊಂದಿಗೆ, ಪಾಲಿಥಿನ್ ಮತ್ತು ಖಾಲಿ ಇಂಜೆಕ್ಷನ್ ಸಿರಿಂಜ್‌ಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ವಾರ್ಡ್‌ಗಳ ಸುತ್ತಲೂ ಓಡುತ್ತಿದ್ದರೂ ಕ್ಯಾರ್ ಮಾಡ್ತಾ ಇಲ್ಲ ಅನ್ನುವುದು ಚರ್ಚೆಗೆ ಕಾರಣವಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿನಾಯಿಗಳ ಕಾಟದಿಂದ ರೋಗಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಆವರಣದಲ್ಲಿ ನಾಯಿಗಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ವೇಳೆ ರೋಗಿಗಳಿಗೆ, ಸಿಬ್ಬಂದಿಗಳಿಗೆ ಆತಂಕ ಉಂಟಾಗಿದೆ.
ರೋಗಿಗಳ ಹಾಸಿಗೆಗಳ ಮೇಲೆ ನಾಯಿಗಳು ಹತ್ತಿ ಗಲೀಜು ಮಾಡುವ ಕಾರಣ ರೋಗಿಗಳು ತಮ್ಮನ್ನು ಕಚ್ಚಬಹುದೆಂಬ ಭಯದಲ್ಲಿರುತ್ತಾರೆ. ಚಿಕಿತ್ಸೆಗಾಗಿ ಬಂದಿರುವ ಅನಾರೋಗ್ಯ ಪೀಡಿತರು ನಾಯಿಗಳಿಂದ ಇತರ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.
ಈ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು ಕಾಳಜಿ ವಹಿಸುವವರಿಲ್ಲದಾಗಿದೆ. ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.
ಆಸ್ಪತ್ರೆಯಲ್ಲಿ ಸಿಬ್ಬಂದಿ ಸಂಖ್ಯೆಯೂ ಕಡಿಮೆ ಇದ್ದು, ಭದ್ರತೆಗೆ ಯಾವುದೇ ಕಾವಲುಗಾರರಾಗಲಿ ಅಥವಾ ಪೊಲೀಸ್‌ ಸಿಬ್ಬಂದಿಯಾಗಲಿ ಇಲ್ಲ. ರಾತ್ರಿ ವೇಳೆ ಇಲ್ಲಿ ಕೆಲವೇ ಸಿಬ್ಬಂದಿ ಇರುತ್ತಾರೆ, ಅವರು ಎಲ್ಲಾ ವಾರ್ಡ್‌ಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಸ್ವಚ್ಛತೆಯ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಕೊಳಕು ಸ್ನಾನಗೃಹಗಳು, ವಾಸನೆ ಬೀರುವ ವಾರ್ಡ್‌ಗಳು ಮತ್ತು ಈಗ ನಾಯಿಗಳ ಭಯ, ಇವೆಲ್ಲದರ ನಡುವೆ ರೋಗಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗುತ್ತಿದ್ದು
ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ನಿರ್ಲಕ್ಷ್ಯ ವಹಿಸಿದ ಉದ್ಯೋಗಿಗಳಿಗೆ ನೋಟಿಸ್ ನೀಡುವುದಾಗಿ ಸಿಎಂಎಸ್ ಡಾ. ಪಿ.ಕೆ. ಅಗರ್ವಾಲ್ ಹೇಳಿದ್ದಾರೆ.
ಸದ್ಯ ನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಮತ್ತು ಆಸ್ಪತ್ರೆ ಅವ್ಯವಸ್ಥೆಯಿಂದ ಮುಕ್ತಿ ಕೊಡಿಸುವ ಬಗ್ಗೆ , ರೋಗಿಗಳ ಕಾಳಜಿಗೆ ಗಮನ ಹರಿಸಬೇಕಾಗುತ್ತದೆ.

ಇದನ್ನು ಓದಿ:

CHC Jaswantnagar viral video

Prev Post

ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi…

Next Post

“ಯಕ್ಷ ಕಿಂಕರ” yaksha kinkara

post-bars

Leave a Comment

Related post