Back To Top

 ವಿದ್ಯುತ್ ಶಾಕ್ ಕೊಟ್ಟು ಮಾವನನ್ನು ಕೊಲೆ ಮಾಡಿದಲ್ಲದೆ ಗಾಯ ಮಾಸಲು ಅರಿಶಿಣ ಹಚ್ಚಿದ ಕಿಲಾಡಿ ಸೊಸೆ: current shock

ವಿದ್ಯುತ್ ಶಾಕ್ ಕೊಟ್ಟು ಮಾವನನ್ನು ಕೊಲೆ ಮಾಡಿದಲ್ಲದೆ ಗಾಯ ಮಾಸಲು ಅರಿಶಿಣ ಹಚ್ಚಿದ ಕಿಲಾಡಿ ಸೊಸೆ: current shock

ನಿದ್ದೆ ಮತ್ತು ಕುಡಿದ ಅಮಲಿನಲ್ಲಿದ್ದ ಮಾವನ ದೇಹದಲ್ಲಿ ಸುಟ್ಟ ಗಾಯಗಳಾಗಿತ್ತು. current shock ಸುಟ್ಟ ಗಾಯಗಳನ್ನು ಮರೆ ಮಾಚಲು ಮಹಿಳೆ ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿ ಅವುಗಳನ್ನು ಸಹಜವಾಗಿ ಕಾಣುವಂತೆ ಮಾಡಿದ್ದಾಳೆ.

ಛತ್ತೀಸ್‌ಗಢ: ಕೆಲವೊಂದು ಅಪರಾಧಗಳು ಎಷ್ಟೊಂದು ಆತಂಕಕಾರಿಯಾಗಿದೆ ಎಂದರೆ ಮಹಿಳೆಯೊಬ್ಬಳು ವಿದ್ಯುತ್ ಶಾಕ್ ನೀಡಿ ಮಾವನ ಕೊಲೆ ಮಾಡಿದ್ದಾಳೆ. ಅಲ್ಲದೆ ಗಾಯ ಅಳಿಸಲು ಅರಿಶಿಣ ಹಚ್ಚಿದ್ದಾಳೆ. ಈ ಪ್ರಕರಣದಲ್ಲಿ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಬಂಧಿಸಲಾಗಿದೆ. ತನ್ನ ಗಂಡನ ತಂದೆಯಾದ ಹಿರಿಯ ವ್ಯಕ್ತಿಯನ್ನು ಇಬ್ಬರೂ ವಿದ್ಯುತ್ ಆಘಾತ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯುತ್ ತಂತಿಯಿಂದ ಸುತ್ತಿದ ಲೋಹದ ರಾಡ್ rad ಬಳಸಿ ಕೊಲೆ ಮಾಡಿದ್ದಾರೆ. ವಿದ್ಯುತ್ ಈ ವೇಳೆ ಆಘಾತಕ್ಕೊಳಗಾಗುವುದನ್ನು ತಪ್ಪಿಸಲು ಮಹಿಳೆ ಎಲೆಕ್ಟ್ರಿಷಿಯನ್ ಕೈ ಗವಸುಗಳನ್ನು ಧರಿಸಿದ್ದರು, ಆದರೆ ಆಕೆಯ ಸಂಗಾತಿ ಈ ಕೃತ್ಯ ಎಸಗಿದ್ದರು.

ನಿದ್ದೆ ಮತ್ತು ಕುಡಿದ ಅಮಲಿನಲ್ಲಿದ್ದ ಮಾವನ ದೇಹದಲ್ಲಿ ಸುಟ್ಟ ಗಾಯಗಳಾಗಿತ್ತು. ಸುಟ್ಟ ಗಾಯಗಳನ್ನು ಮರೆ ಮಾಚಲು ಮಹಿಳೆ ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿ ಅವುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಿದ್ದಾಳೆ. cycle ಸೈಕಲ್‌ನಿಂದ ಬಿದ್ದು ಸಾವು ಸಂಭವಿಸಿದೆ ಎಂದು ಅವರು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಿಗೆ ಬಿಂಬಿಸಿದ್ದಾರೆ.
ಅಂತ್ಯಕ್ರಿಯೆಗೆ ತಯಾರಿ ನಡೆಸುವಾಗ ಗ್ರಾಮಸ್ಥರು ಅಸಹಜವಾಗಿದ್ದ ಗಾಯಗಳನ್ನು ಗಮನಿಸಿ police ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯು ವಿದ್ಯುತ್ ಆಘಾತ ಸಾವಿಗೆ ಕಾರಣವೆಂದು ದೃಢಪಡಿಸಿದೆ. ಮಹಿಳೆ ಮತ್ತು ಮೃತರ ನಡುವೆ ನಡೆಯುತ್ತಿರುವ ಕೌಟುಂಬಿಕ ಕಲಹದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನು ಓದಿ:

Prev Post

“ಪ್ರತಿಭಾನ್ವಿತ ಕಲಾವಿದ”: Guruprasad

Next Post

ಧರ್ಮಸ್ಥಳ ಪ್ರಕರಣ, ಅತ್ಯಾಚಾರ, ಕೊಲೆ, ಶವ ಹೂತ ವ್ಯಕ್ತಿ ಎಲ್ಲಾ ವಿವಾದಗಳ ತನಿಖೆಗೆ…

post-bars

Leave a Comment

Related post