Back To Top

 ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!:  Language Policy in karnataka

ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!: Language Policy in karnataka

ಶಾಲೆಯಲ್ಲಿ ಮಕ್ಕಳ ಸಂಭಾಷಣೆ, ಬರವಣಿಗೆಯಂತಹ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ.: bilingual policy in karnataka

ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ರೂಪುಗೊಂಡಾಗಿನಿಂದಲೂ, ಪ್ರಮುಖ ವಿಷಯಗಳ ಜೊತೆಗೆ ಭಾಷಾ ಜ್ಞಾನವನ್ನೂ ಬೋಧಿಸಲಾಗುತ್ತಿದೆ. ಮತ್ತು ಅದು ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ. ಸ್ವಾತಂತ್ರ್ಯಾ ನಂತರ, ಆಯಾ ರಾಜ್ಯಗಳಲ್ಲಿರುವ ಭಾಷೆಗಳಿಗನುಸಾರ, ಭಾಷೆಯನ್ನು ಬೋಧಿಸಲಾಗುತ್ತಿದೆ. ಉದಾಹರಣೆಗೆ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯ ಭಾಷೆಯಾಗಿ, ತನ್ನದೇ ಆದ ಒಂದು ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಅವುಗಳೊಂದಿಗೆ, ರಾಜ್ಯದಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯನ್ನೂ ಬೋಧಿಸಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳ ಸಂಭಾಷಣೆ, ಬರವಣಿಗೆಯಂತಹ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ.

ಮಹಾರಾಷ್ಟ್ರದಲ್ಲಿ ಹೊಸ ನೀತಿ!

ಮಹಾರಾಷ್ಟ್ರದಲ್ಲಿಯೂ ತ್ರಿಭಾಷಾ ಸೂತ್ರವೇ ಅಳವಡಿಕೆಯಾಗಿದ್ದು, ಅಲ್ಲಿ hindi ಹಿಂದಿ, english ಇಂಗ್ಲಿಷ್‌ ಜೊತೆಗೆ ಅಲ್ಲಿನ ರಾಜ್ಯ ಭಾಷೆ ಮರಾಠಿಯನ್ನು ಬೋಧಿಸಲಾಗುತ್ತಿದೆ. ಆದರೀಗ, ಈ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ತಂದು, ದ್ವಿಭಾಷಾ ನೀತಿ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ಯೋಚಿಸುತ್ತಿದೆ. ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ, ತೃತೀಯ ಭಾಷೆಯಾಗಿ ಹಿಂದಿ ಬೋಧಿಸುವುದು ಬೇಡ ಎಂಬ ತೀರ್ಮಾನಕ್ಕೆ ಸರ್ಕಾರ ನಿರ್ಧರಿಸಿತ್ತು.

ಕರ್ನಾಟಕದಲ್ಲೂ ಅಳವಡಿಕೆಗೆ ಒತ್ತಾಯ!

ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಈ ನೀತಿಯನ್ನು ಅಳವಡಿಸುವಂತೆ ಕೂಗುಗಳು ಕೇಳಿಬರುತ್ತಿದೆ. ಇಲ್ಲಿಯೂ ಸಹ ಒಂದರಿಂದ – ಐದನೇ ತರಗತಿಯವರೆಗೆ ಕಡ್ಡಾಯವಾಗಿ ದ್ವಿಭಾಷ ಪದ್ಧತಿಯನ್ನು ಪರಿಚಯಿಸಬೇಕೆಂದ ಒತ್ತಾಯಿಸಲಾಗುತ್ತಿದೆ. ಹಿಂದಿಯನ್ನ ಹೊರತುಪಡಿಸಿ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂಬ ಕೂಗು ಇದೆ.

ಆದರೆ ಕರ್ನಾಟಕದಲ್ಲಿ ದ್ವಿಭಾಷ ನೀತಿಯ ಅವಶ್ಯಕತೆ ಇದೆಯಾ?

ಎಲ್ಲಾ ರಾಜ್ಯಗಳು ತಮ್ಮ ರಾಜ್ಯ ಭಾಷೆಯ ಕಲಿಕೆಗೆ ಆದ್ಯತೆ ನೀಡುತ್ತಿದೆ. ಉದಾಹರಣೆಗೆ – ತಮಿಳುನಾಡು thamilnadu ತಮಿಳನ್ನು, ಮಹಾರಾಷ್ಟ್ರ ಮರಾಠಿಯನ್ನು, kerala ಕೇರಳದಲ್ಲಿ ಮಲಯಾಳಂ ಇತ್ಯಾದಿ. ಈ ರಾಜ್ಯಗಳು ಅಲ್ಲಿನ ಮೂಲ ಭಾಷೆಯನ್ನು ಕಲಿಸುವುದರ ಜೊತೆಗೆ, ಆ ಭಾಷೆಯ ಪರಂಪರೆಯನ್ನು ಉಳಿಸುವ ಕೈಂಕರ್ಯದಲ್ಲಿ ತೊಡಗಿದೆ.

ಅದೇ ರೀತಿ ಕರ್ನಾಟಕದಲ್ಲಿ kannda ಕನ್ನಡ ಭಾಷೆಯೇ ಸಾರ್ವಭೌಮ. ಕನ್ನಡದ ಕಲಿಕೆ ವಿದ್ಯಾರ್ಥಿಗಳಿಗೆ ಕನ್ನಡದ ಭಾಷಾ ಇತಿಹಾಸವನ್ನು ಸಾರುವುದರ ಜೊತೆಗೆ, ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲೂ ಸಹಕಾರಿಯಾಗುತ್ತಿದೆ. ಭಾಷಾಭಿಮಾನವೇ ಕುಸಿಯುತ್ತಿರುವಂತೆ ಗೋಚರವಾಗುತ್ತಿರುವ ಈ ದಿನಗಳಲ್ಲಿ ಭಾಷೆಗೆ ಪ್ರಾಮುಖ್ಯತೆ ನೀಡುವುದರಲ್ಲಿ ತಪ್ಪಿಲ್ಲ. ನಮ್ಮ ನಾಡಿನ ಬೆಳೆ, ವಸತಿ, ಆಸ್ತಿ, ಅಂತಸ್ತುಗಳನ್ನೆಲ್ಲ ಪಡೆದು, ನಮ್ಮ ಭಾಷೆ ಬೇಡ ಎಂಬ ಕೀಳರಿಮೆಯನ್ನ ತೋರಿಸುವವ ಅನೇಕರು ಕಾಣಸಿಗುತ್ತಿದ್ದಾರೆ. ಅದರ ಜೊತೆಗೆ, ಕನ್ನಡ ಚಲನಚಿತ್ರಗಳನ್ನ ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆಯೂ ಇಳಿಕೆಯಾಗುತ್ತಿರುವುದು, ಮತ್ತು ಕಲಿಕೆ ಹಾಗೂ ಸಂಭಾಷಣೆಗೆ ಅನ್ಯಭಾಷೆಗೆ ಪ್ರಾಧ್ಯನತೆ ಕೊಡುತ್ತಿರುವುದು ಕನ್ನಡಿಗರಿಗೆ ಚಿಂತೆಗೀಡುಮಾಡುತ್ತಿದೆ.

ಇಂತಹ ಒಂದಷ್ಟು ಭಾಷಾ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿಯಾದರೂ, ದ್ವಿಭಾಷ ನೀತಿ ಜಾರಿಯಾಗುವುದು ಉತ್ತಮ. ಕನ್ನಡವನ್ನು ಕಡ್ಡಾಯವಾಗಿ ಕಲಿಸಿ, ಇಂಗ್ಲೀಷ್‌ ಅನ್ನು ಅದರ ಜೊತೆಗೆ ಕಲಿಸಿದರೆ ಉತ್ತಮ. ಇಂತಹ ನೀತಿಯಿಂದ ನಾವು ನಮ್ಮ ಭಾಷೆಗೆ ಹೆಚ್ಚಿನ ಪ್ರಾಧ್ಯನತೆ ಕೊಡುವುದರಿಂದ, ಈಗಿನ ಪೀಳಿಗೆಯ ಮಕ್ಕಳಲ್ಲಿ ನಮ್ಮ ಭಾಷೆಗಿರುವ ಇತಿಹಾಸ, ಘನತೆ, ಗೌರವ, ಸ್ಥಾನಮಾನಗಳು ಎಷ್ಟಿದೆ ಎಂದು ತಿಳಿ ಹೇಳಬಹುದು. ಜೊತೆಗೆ ಮಕ್ಕಳಲ್ಲಿ ಭಾಷಾ ಪ್ರಜ್ಞೆ, ಭಾಷೆಯ ಬಗೆಗಿನ ಅಪಾರವಾದ ಪ್ರೀತಿ, ಗೌರವ, ಮತ್ತು ಮೌಲ್ಯಗಳನ್ನ ಹುಟ್ಟುಹಾಕಬಹುದು. ಇದರಿಂದ ನೂರಕ್ಕೆ ಶೇಖಡ ಐವತ್ತರಷ್ಟು ಮಕ್ಕಳಲ್ಲಾದರೂ, ಈ ಮನೋಭಾವವನ್ನು ಹಿತಕರವಾದ ರೀತಿಯಲ್ಲಿ ಮೂಡಿಸಬಹುದಾಗಿದೆ.

ಇದು ಈ ಪೀಳಿಗೆಗೆ ತುಂಬಾ ಪ್ರಯೋಜನಕಾರಿಯಾದ ಅಸ್ತ್ರವಾಗಿದೆ. ದ್ವಿಭಾಷದಿಂದ ಮತ್ತೊಂದು ಭಾಷೆಯು ಪ್ರಾಮುಖ್ಯತೆ ಪಡೆಯುತ್ತದೆ ಎಂದಾದರೆ ಅಥವಾ ಭಾವಿಸಿದರೆ, ಎರಡರಲ್ಲಿ ಮೂಲ ಭಾಷೆಗೆ ಹೆಚ್ಚಿನ ಆಸಕ್ತಿ ಮತ್ತು ಪ್ರಧಾನ್ಯತೆಯನ್ನ ಕೊಡಬಹುದಾಗಿದೆ. ಈ ನೀತಿಯು ಕನ್ನಡ ಭಾಷೆಯ ಅಳಿವನ್ನ, ಉಳಿವಾಗಿ ಪರಿವರ್ತನೆ ಮಾಡುವಲ್ಲಿ ತುಂಬಾ ಸೂಕ್ತವಾಗಿದೆ. ಅನ್ಯಭಾಷೆಯನ್ನ ನಮ್ಮ ಅಪಾರವಾದ ಜ್ಞಾನಕ್ಕಾಗಿ ಬಳಸಿಕೊಳ್ಳಬೇಕೆ ಹೊರತು, ಸಂಸ್ಕೃತಿ ಮತ್ತು ಮೂಲ ಭಾಷೆಯ ಅಳಿವಿಗಲ್ಲ.

ಬರಹ:

ಪವನ್‌ ಕುಮಾರ್‌ ಎಂ. ಕೆ.
ಎಸ್‌ಡಿಎಂ ಕಾಲೇಜು, ಉಜಿರೆ

ಇದನ್ನು ಓದಿ:

Prev Post

ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ…

Next Post

“ಪ್ರತಿಭಾನ್ವಿತ ಕಲಾವಿದ”: Guruprasad

post-bars

Leave a Comment

Related post