ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಲ್ಚಾರ್ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ತರಗತಿ ಆರಂಭ: State Award Kolchar School english medium inauguration
ರಾಜ್ಯ ಪ್ರಶಸ್ತಿ state award ವಿಜೇತ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರ ಅನುಮತಿಸಿದ ದ್ವಿಭಾಷಾ ಶಿಕ್ಷಣ ಪದ್ದತಿಯಲ್ಲಿ ಆಂಗ್ಲ ಭಾಷಾ ತರಗತಿ ಉದ್ಘಾಟನೆಗೊಂಡಿತು. kolchar school english medium inauguration.
ಸುಳ್ಯ: ಇಂಗ್ಲಿಷ್ ಮಾಧ್ಯಮ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಸರಿ ಸಮಾನವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಕೋಲ್ಚಾರ್ ಶಾಲೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಈ ಶಾಲೆ.
ಈ ಸರ್ಕಾರಿ ಶಾಲೆಯಲ್ಲಿ ಈಗ ಇಂಗ್ಲಿಷ್ ಮಾಧ್ಯಮ ಆರಂಭಗೊಂಡಿದೆ. english medium

ರಾಜ್ಯ ಪ್ರಶಸ್ತಿ ವಿಜೇತ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಸರ್ಕಾರ ಅನುಮತಿಸಿದ ದ್ವಿಭಾಷಾ ಶಿಕ್ಷಣ ಪದ್ದತಿಯಲ್ಲಿ ಆಂಗ್ಲ ಭಾಷಾ ತರಗತಿ ಉದ್ಘಾಟನೆಗೊಂಡಿತು.
ಆಂಗ್ಲ ಭಾಷೆಯ 1ನೇ ತರಗತಿಯನ್ನು ಅಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್ ಉದ್ಘಾಟಿಸಿದರು. ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯ ಪ್ರಕಾಶ್ ಕುಂಚಡ್ಕ ದೀಪ ಬೆಳಗಿಸಿದರು. ಎಸ್ ಡಿಎಂಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರಮೂಲೆ, ಪಾಲನಾ ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಸಹಕಾರಿ ಸಂಘದ ನಿರ್ದೇಶಕ ಚಿದಾನಂದ ಕೋಲ್ಚಾರು, ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ, ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ವಾಲ್ತಾಜೆ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಸ್ವಾಗತಿಸಿ ಶಿಕ್ಷಕ ಮನು ಕುಮಾರ್ ವಂದಿಸಿದ್ದರು, ಶಿಕ್ಷಕರಾದ ರಂಗನಾಥ್ ಎಂ. ಎಸ್. ಮತ್ತು ಜಲಜಾಕ್ಷಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Watch Full Video News here
ಇದನ್ನು ಓದಿ: