Back To Top

 ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರ 7 ವರ್ಷದ ದಾಂಪತ್ಯಕ್ಕೆ ವಿದಾಯ: Saina Nehwal and Parupalli Kashyap announce separation
July 14, 2025

ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರ 7 ವರ್ಷದ ದಾಂಪತ್ಯಕ್ಕೆ ವಿದಾಯ: Saina Nehwal and Parupalli Kashyap announce separation

ನವದೆಹಲಿ( New Delhi): ಇತ್ತೀಚೆಗೆ ಸೆಲೆಬ್ರಿಟಿಗಳ ಜೀವನ, ವಿವಾಹ ವಿರಸ ಸಾಮಾನ್ಯವಾಗಿ ಬಿಟ್ಟಿದೆ. ಈ ಬೆನ್ನಲ್ಲೇ ಭಾರತದ ಖ್ಯಾತ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಮಧ್ಯೆ ದಾಂಪತ್ಯ ಮುರಿದಿರುವುದು ಕೇಳಿ ಬರುತ್ತಿದೆ. ಇಬ್ಬರು ಸಂಬಂಧದಿಂದ ದೂರಾಗುತ್ತಿರುವುದಾಗಿ ಘೋಷಿಸಿದ್ದಾರೆ Saina Nehwal and Parupalli Kashyap announce separation.


ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಕಂಚಿನ ಪದಕ ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚ್ಚೇದನದ ಬಗ್ಗೆ ಮಾಹಿತಿ ನೀಡಿದ್ದಾರೆ.
7 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳುತ್ತಿರುವ ಸೈನಾ ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಯೋಚನೆಯ ನಂತರ ನಾನು ಹಾಗೂ ಕಶ್ಯಪ್ ಪರುಪಳ್ಳಿ ಬೇರೆಯಾಗಲು ನಿರ್ಧರಿಸಿದ್ದೇವೆ.
ಹಲವು ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ನೆಹ್ವಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.


ಆದರೆ ಸೈನಾ ನೆಹ್ವಾಲ್ ಪತಿ ಬ್ಯಾಂಡ್ಮಿಂಟನ್ ತಾರೆ ಪರುಪಳ್ಳಿ ಕಶ್ಯಪ್ ಮಾತ್ರ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.
10 ವರ್ಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿ ಇದ್ದು ಇಬ್ಬರೂ 2018ರಲ್ಲಿ ವಿವಾಹವಾಗಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ, ಕಶ್ಯಪ್ ಕೋಚ್ ಆಗಿ ಬದಲಾಗಿದ್ದರು. ನಿವೃತ್ತರಾದ ನಂತರ ಅವರು ಸೈನಾ ನೆಹ್ವಾಲ್ ಅವರ ವೃತ್ತಿಜೀವನದ ಉದ್ದಕ್ಕೂ ಮಾರ್ಗದರ್ಶನ ನೀಡಲು ಪ್ರಾರಂಭಿಸಿದ್ದರು.


ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಅವರ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು ಇಬ್ಬರು ದೂರ ಆಗುವ ಯೋಚನೆ ಮಾಡಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.

image 1
Story of Saina Nehwal on Her Instagram Handle

Prev Post

ಪೋಟೋ ತೆಗೆಯುತ್ತೇನೆಂದು ಸೇತುವೆ ತುದಿಗೆ ಪತಿಯನ್ನು ನಿಲ್ಲಿಸಿ ನದಿಗೆ ನೂಕಿದ ಪತ್ನಿ

Next Post

“ಯಕ್ಷ ಕನ್ಯಾಮಣಿ” ಪಂಚಮಿ ಮಾರೂರು: panchami maaruru

post-bars

Leave a Comment