Back To Top

 ಬಚ್ಚಲು ಮನೆ ನೀರು ಕಾಯಿಸುವ ಹಂಡೆಯಲ್ಲಿ 1 ತಿಂಗಳ ಕೂಸನ್ನು ಮುಳುಗಿಸಿ ಕೊಂದ ಪಾಪಿ ತಾಯಿ

ಬಚ್ಚಲು ಮನೆ ನೀರು ಕಾಯಿಸುವ ಹಂಡೆಯಲ್ಲಿ 1 ತಿಂಗಳ ಕೂಸನ್ನು ಮುಳುಗಿಸಿ ಕೊಂದ ಪಾಪಿ ತಾಯಿ

9 ತಿಂಗಳು ಗರ್ಭದಲ್ಲಿ ಹೊತ್ತು ಹೆತ್ತ ಗಂಡು ಮಗು ನ್ನು ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಈ ಘಟನೆ ಬೆಂಗಳೂರಿನ ಹೊರವಲಯದ (nelamangala)ನೆಲಮಂಗಲದ ತಾಲೂಕು ವಿಶೇಷಪುರದ (ನಾಗಕಲ್ಲು) ಎಂಬ ಗ್ರಾಮದಲ್ಲಿ ನಡೆದಿದೆ.

ನೆಲಮಂಗಲ: nelamangala ಕಿತ್ತು ತಿನ್ನುವ ಬಡತನ ಸಂಸಾರ, ನೋಡಿಕೊಳ್ಳದ ಗಂಡ ಮಡಿಲಲ್ಲಿ ಪುಟ್ಟ ಮಗು, ತಿನ್ನಲು ಅನ್ನ ಉಡಲು ಬಟ್ಟೆಗೂ ತತ್ವಾರ ಉಂಟಾಯಿತೆಂದು ಇಲ್ಲೊಬ್ಬಳು ತಾಯಿ ತಾನು 9 ತಿಂಗಳು ಗರ್ಭದಲ್ಲಿ ಹೊತ್ತು ಹೆತ್ತ ಗಂಡು ಮಗು ನ್ನು hotwater ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಈ ಘಟನೆ ಬೆಂಗಳೂರಿನ ಹೊರವಲಯದ ನೆಲಮಂಗಲದ ತಾಲೂಕು ವಿಶೇಷಪುರದ (ನಾಗಕಲ್ಲು) ಎಂಬ ಗ್ರಾಮದಲ್ಲಿ ನಡೆದಿದೆ.
ಒಂದೂವರೆ ತಿಂಗಳ ಹಿಂದಷ್ಟೇ ಪವನ್ ಹಾಗೂ ರಾಧೆ ಎಂಬ ದಂಪತಿಗೆ ಗಂಡು ಮಗು ಜನಿಸಿತ್ತು. drinkerಕುಡಿತದ ಚಟಕ್ಕೆ ಬಿದ್ದಿದ್ದ ಪವನ್, ಹೆಂಡತಿ ಮಗುವನ್ನು ನೋಡಿಕೊಳ್ಳಲು ಆಗದೆ ಪರದಾಡ್ತಿದ್ದ ಎನ್ನಲಾಗ್ತಿದೆ. ಹಣದ ಸಮಸ್ಯೆ ಹೆಚ್ಚಾಗಿತ್ತಂತೆ. ಮಗುವಿನ ಆರೈಕೆ ಕಷ್ಟವಾಗ್ತಿದೆ ಎಂದು ತಾಯಿ ರಾಧೆ, ಹೆತ್ತ ಮಗುವನ್ನೇ ಕೊಂದಿದ್ದಾಳೆ ಎನ್ನಲಾಗ್ತಿದೆ.
ಮಧ್ಯರಾತ್ರಿ ಮಗುವನ್ನೇ ಕೊಂದ ತಾಯಿ ಕಾಡುತ್ತಿದ್ದ poorfamily ಬಡತನ ಆಕೆಯ ಈ ನಿರ್ಧಾರಕ್ಕೆ ಕಾರಣ ಎನ್ನಲಾಗ್ತಿದೆ. ತಾಯಿಯೆ ತನ್ನ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಹೋಗಿ ತಡ ರಾತ್ರಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:

Prev Post

ಎಲ್ಲೆ ಮೀರಿದ ಅಪ್ರಾಪ್ತರ ಪ್ರೀತಿ: ಯುವತಿ ಮಗುವಿಗೆ ಜನ್ಮ ನೀಡಿದ ಕೂಡಲೇ ಆರೋಪಿ…

Next Post

ಲವ್ ಬ್ರೇಕಪ್ , ಯುವಕನಿಗೆ ಮಾರಣಾಂತಿಕ ಹಲ್ಲೆ: 17ರ ಹುಡುಗಿ ಸೇರಿದಂತೆ 11…

post-bars

Leave a Comment

Related post