ತಾಯಿ-ಮಗನ ಜೋಡಿ ಕೊಲೆ: ಮನೆ ಕೆಲಸದವನಿಂದಲೇ ಅಮಾನುಷ ಕೃತ್ಯ: double murder case
ಇಲ್ಲೊಬ್ಬ ಮನೆಕೆಲಸಕ್ಕೆಂದು ಬಂದ ಭೂಪ ಮನೆಯೊಡತಿ ಹಾಗೂ ಮಗನ Murder ಹತ್ಯೆಗೈದಿರುವ ಘಟನೆ ದೆಹಲಿ (Delhi) ಲಜ್‌ಪತ್ ನಗರದಲ್ಲಿ (Lajpat Nagar) ನಡೆದಿದೆ. ತಾಯಿ ರುಚಿಕಾ (42) ಹಾಗೂ ಮಗ ಕ್ರಿಶ್ (14) ಕೊಲೆಯಾದವರು ಎಂದು ಗುರುತಿಸಲಾಗಿದೆ.
ನವದೆಹಲಿ: ದಿನನಿತ್ಯ ಜೀವನದಲ್ಲಿ ಹಲವಾರು ಮನಕಲಕುವ, ಮುಜುಗರ ತರುವ ಆತಂಕಕಾರಿ ಘಟನೆಗಳನ್ನು ಗಮನಿಸುತ್ತಾ ಇರುತ್ತೇವೆ. ಆದರೆ ಇಲ್ಲೊಬ್ಬ ಮನೆಕೆಲಸಕ್ಕೆಂದು ಬಂದ ಭೂಪ ಮನೆಯೊಡತಿ ಹಾಗೂ ಮಗನ ಹತ್ಯೆಗೈದಿರುವ ಘಟನೆ ದೆಹಲಿ (Delhi) ಲಜ್‌ಪತ್ ನಗರದಲ್ಲಿ (Lajpat Nagar) ನಡೆದಿದೆ.
ತಾಯಿ ರುಚಿಕಾ (42) ಹಾಗೂ ಮಗ ಕ್ರಿಶ್ (14) ಕೊಲೆಯಾದವರು ಎಂದು ಗುರುತಿಸಲಾಗಿದೆ. ಕೊಲೆಗೈದವ ಮುಖೇಶ್ (24) ಎಂಬಾತನನ್ನು ಬಂಧಿಸಲಾಗಿದೆ.
ರುಚಿಕಾ ಹಾಗೂ ಆಕೆಯ ಪತಿ ಸೇರಿಕೊಂಡು ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಆರೋಪಿ ಮುಖೇಶ್ ಚಾಲಕ ಹಾಗೂ ಸಹಾಯನಾಗಿ ಕೆಲಸ ಮಾಡುತ್ತಿದ್ದ. ಕೊಲೆ ನಡೆದ ದಿನ ಆರೋಪಿ ಮುಖೇಶ್ ಮನೆಗೆ ಬಂದಿದ್ದ. ಈ ವೇಳೆ ರುಚಿಕಾ ಕೆಲಸದ ವಿಚಾರಕ್ಕೆ ಆತನಿಗೆ ಬೈದಿದ್ದಳು ಎನ್ನಲಾಗಿದ್ದು, ಇದೇ ಕೋಪದಿಂದ ಆಕೆ ಹಾಗೂ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ರುಚಿಕಾ ಪತಿ ಕುಲದೀಪ್ ಹೇಳುವಂತೆ ನನ್ನ ಹೆಂಡತಿ ಹಾಗೂ ಮಗನಿಗೆ ನಿರಂತರವಾಗಿ ಕರೆ ಮಾಡಿದ್ದು, ಅವರು ಉತ್ತರಿಸಿರಲಿಲ್ಲ. ಅದೇ ಗಾಬರಿಯಿಂದ ಮನೆಯ ಬಳಿ ಬಂದಾಗ ಬಾಗಿಲು ಲಾಕ್ ಆಗಿತ್ತು ಹಾಗೂ ಮೆಟ್ಟಿಲು, ನೆಲದ ಮೇಲೆ ರಕ್ತದ ಕಲೆ ಇತ್ತು. ತಕ್ಷಣವೇ ನಾನು ಪೊಲೀಸರಿಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಪತ್ನಿ ರುಚಿತಾಳ ಮೃತದೇಹ ಬೆಡ್‌ರೂಮ್‌ನಲ್ಲಿ ಹಾಗೂ ಮಗನ ಮೃತದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಎರಡು ದೇಹಗಳ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆದಿರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ: