ಜೀವಕ್ಕೆ ಕುತ್ತು ತಂದ ಆನ್ಲೈನ್ ಬೆಟ್ಟಿಂಗ್ : ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ: online game bettinģ
ಇಲ್ಲೊಬ್ಬ ಯುವಕ ಆನ್ಲೈನ್ ಬೆಟ್ಟಿಂಗ್ online betting game ಚಟಕ್ಕೆ ಬಿದ್ದು ಸಾಲ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ suicide ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಯುವಕನನ್ನು ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ (25 ವರ್ಷ)ಎಂದು ಗುರುತಿಸಲಾಗಿದೆ.
ದಾವಣಗೆರೆ: ಸುಲಭದಲ್ಲಿ ಹಣ ಗಳಿಸುವಂತೆ ಹಲವಾರು ಜಾಹೀರಾತುಗಳು, ಆಕರ್ಷಕ ಆನ್ಲೈನ್ online game ಆಟಗಳು, rammy ರಮ್ಮಿ ಗೇಮ್ಸ್ಗಳು ದಿನನಿತ್ಯ ನೋಡುತ್ತಿರುತ್ತೇವೆ. ಇದನ್ನು ಜನರಿಗೆ ಪ್ರಚಾರ ಪಡಿಸಲು ಹೆಸರಾಂತ ನಟ ನಟಿಯರು ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ.
ಇವರು ನೀಡುವ ಸುಳ್ಳು ಆಕರ್ಷಣೆಗೆ ಬಲಿಯಾಗಿ ಯುವಕರು ಆನ್ಲೈನ್ ಆಟಗಳನ್ನು ಆಡಲು ತೊಡಗುತ್ತಾರೆ.
ಇಲ್ಲೊಬ್ಬ ಯುವಕ ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಯುವಕನನ್ನು ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ (25 ವರ್ಷ)ಎಂದು ಗುರುತಿಸಲಾಗಿದೆ.
ಶಶಿಕುಮಾರ ಆತ್ಮಹತ್ಯೆಗೂ ಮುನ್ನ 6 ಪುಟಗಳ ಡೆತ್ ನೋಟ್ ಬರೆದು, ಸೆಲ್ಫಿ selfie ವೀಡಿಯೋ ಮಾಡಿದ್ದಾನೆ. ಆನಲೈನ್ ಗೇಮಿಂಗ್ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದೇನೆ. ಆದರೆ ಇದೇ ಆನ್ಲೈನ್ ಗೇಮಿಂಗ್ ನಲ್ಲಿ 19 ಕೋಟಿ ರೂ.ಗಳಿಗೂ ಅಧಿಕ ಹಣ ನಾನು ಗೆದ್ದಿದ್ದರೂ ಆನ್ಲೈನ್ ಗೇಮ್ ನಡೆಸುವವರು ನನಗೆ ಹಣ ಕೊಟ್ಟಿಲ್ಲ.
ವಿದ್ಯಾನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರೂ ಪೊಲೀಸರು police ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಮಾನಸಿಕವಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ. ಆನ್ಲೈನ್ ಗೇಮಿಂಗ್ ಹಿಂದಿರುವ ಕಾಣದ ಕೈಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ತನ್ನಂತೆಯೇ ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂದು ಆನ್ಲೈನ್ ಗೇಮಿಂಗ್ ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಾಗಿ ಶಶಿಕುಮಾರ ಡೆತ್ ನೋಟ್ deathnote ಬರೆದಿದ್ದು, ಸೆಲ್ಫಿ ವೀಡಿಯೋದಲ್ಲೂ ತನ್ನ ಹೇಳಿಕೆ ರೆಕಾರ್ಡ್ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆಯಾಗಿ ಆನ್ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಯುವಕ ಲಕ್ಷಾಂತರ ಹಣದ ಜೊತೆಗೆ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನು ಓದಿ: