ಕೈ ಕೊಟ್ಟ ಪ್ರೀತಿಸಿದ ಹುಡುಗಿ: ನೇಣು ಬಿಗಿದುಕೊಂಡು ಆತ್ಮಹತ್ಯೆ(love failure lover suicide) ಮಾಡಿಕೊಂಡ ಯುವಕ
ಇತ್ತೀಚೆಗೆ ಯುವಜನರು ಪ್ರೀತಿ, ಪ್ರೇಮ, ಪ್ರಣಯ ವೈಫಲ್ಯ ಎಂದು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಮನೆಯವರ ವಿರೋಧ , ಜಾತಿ ಕಲಹವನ್ನು ಮೀರಿ ಸಣ್ಣ ಪುಟ್ಟ ಗಲಾಟೆಗಳು ಪ್ರೇಮಿಗಳಿಗೆ ಜೀವಕ್ಕೆ ಕುತ್ತು ತರುತ್ತಿದೆ.
ಗುಂಡ್ಲುಪೇಟೆ: ಇತ್ತೀಚೆಗೆ ಯುವಜನರು ಪ್ರೀತಿ, ಪ್ರೇಮ, ಪ್ರಣಯ ವೈಫಲ್ಯ ಎಂದು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಮನೆಯವರ ವಿರೋಧ , ಜಾತಿ ಕಲಹವನ್ನು ಮೀರಿ ಸಣ್ಣ ಪುಟ್ಟ ಗಲಾಟೆಗಳು ಪ್ರೇಮಿಗಳಿಗೆ ಜೀವಕ್ಕೆ ಕುತ್ತು ತರುತ್ತಿದೆ. (lover suicide)
ಇಲ್ಲೊಬ್ಬಾತ ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ವಿಡಿಯೋ ಕಳಿಸಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬನ್ನಿತಾಳಪುರ ಗ್ರಾಮದ ಸಂತೋಷ್ (24) ಮೃತ ವ್ಯಕ್ತಿ. love failure lover suicide) ಈತ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ವಾಸವಿದ್ದು, ಅದೇ ಗ್ರಾಮದ ಯುವತಿಯೊಬ್ಬಳ ಪ್ರೀತಿಸಿದ್ದನು. ಆದರೆ ಯುವತಿ ಬೇರೊಬ್ಬ ಹುಡುಗನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕೆ ಲವ್ ಬ್ರೇಕ್ ಆಪ್ ಎಂದಿದ್ದಾಳೆ. ಇದರಿಂದ ಮನನೊಂದು ವೀಡಿಯೋ ಮಾಡಿ, ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ
ತನ್ನ ಸಾವಿಗೆ ಯುವತಿಯೇ ಕಾರಣ, ಅವಳನ್ನು ಬಿಟ್ಟು ಇನ್ಯಾರು ಕಾರಣರಲ್ಲ ಎಂದು ಯುವಕ ಸಂತೋಷ್ ವಿಡಿಯೋ ಮಾಡಿದ್ದಾನೆ. ತೆರಕಾಂಬಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬನ್ನಿತಾಳಪುರ ಗ್ರಾಮದ ಹೊರ ವಲಯದ ಜಮೀನಿನ ಮರವೊಂದರಲ್ಲಿ ಸಂತೋಷ್ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಮೃತನ ಸಹೋದರ ಸಂಪತ್ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಇದನ್ನು ಓದಿ: