
ಕೊಬ್ಬರಿಗೆ ಬಂಪರ್ ಬೆಲೆ, ಇದು ಸಾರ್ವಕಾಲಿಕ ದಾಖಲೆ: Agriculture News, dry Coconut price in Karnataka
Dry cocunut price in karnataka, Agriculture news in Kannada: ಜಿಲ್ಲೆಯ ತಿಪಟೂರು ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಲ್ ಕೊಬ್ಬರಿ ಬರೋಬ್ಬರಿ 26,167 ರೂ. ಗರಿಷ್ಠ ದರ ದಾಖಲಿಸಿದೆ.
Tumkuru ತುಮಕೂರು: Dry cocunut price in karnataka ಮುಂಗಾರು ಮಳೆ ಹೆಚ್ಚಾದಂತೆ ರೈತರ ಮೊಗದಲ್ಲಿ ಸಂತಸ ಮೂಡಿದೆ. ತಾವು ಬೆಳೆದ ಬೆಳೆಗೆ ಬೆಂಬಲ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ಸಾಕಷ್ಟು ಪ್ರತಿಭಟನೆಯನ್ನೂ ಮಾಡಿದ್ದರು.

ಸದ್ಯ ಈಗ ಏರುಗತಿಯಲ್ಲಿ ಸಾಗುತ್ತಿರುವ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಜಿಲ್ಲೆಯ ತಿಪಟೂರು ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಲ್ ಕೊಬ್ಬರಿ ಬರೋಬ್ಬರಿ 26,167 ರೂ. ಗರಿಷ್ಠ ದರ ದಾಖಲಿಸಿದೆ.
ಜಿಲ್ಲೆಯಲ್ಲಿ ತೆಂಗಿನ ಇಳುವರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ. ರೈತರು ದರ ನೋಡಿ ಖುಷಿ ಪಡುವಂತಾಗಿದೆ. ಸೋಮವಾರ ಮಾರುಕಟ್ಟೆಗೆ 3351 ಕ್ವಿಂಟಲ್ ಕೊಬ್ಬರಿ ಬಂದಿದ್ದು, ಸರಾಸರಿ ದರ 25,300 ರೂಪಾಯಿಯಂತೆ ಮಾರಾಟವಾಗಿದೆ.
ಕ್ವಿಂಟಲ್ ಕೊಬ್ಬರಿ ಕನಿಷ್ಠ ದರ 23 ಸಾವಿರ ರೂ., ಗರಿಷ್ಠ ದರ 26,167 ರೂ.ಗೆ ಮಾರಾಟವಾಗಿದ್ದು, ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ. ಕೊಬ್ಬರಿ ಬೆಲೆ ಹೆಚ್ಚಳವಾಗಿರುವುದರ ಜೊತೆಗೆ ಕೊಬ್ಬರಿ ಎಣ್ಣೆ ಬೆಲೆ ಕೂಡ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 15 ಕೆಜಿ ಕೊಬ್ಬರಿ ಎಣ್ಣೆಗೆ 5,500 ರೂ. ದರ ದಾಟಿದೆ. ಕಳೆದ ಒಂದು ತಿಂಗಳಿನಲ್ಲಿ ಈ ದರ 600 ರೂ.ನಷ್ಟು ಹೆಚ್ಚಳವಾಗಿದೆ. ನಿರೀಕ್ಷಿತ ದರಕ್ಕಿಂತ ಹೆಚ್ಚಾದ ಕೊಬ್ಬರಿ ಬೆಲೆ ಏರಿಕೆ ಕಂಡು ರೈತರು ಪುಲ್ ಖುಷ್ ಆಗಿದ್ದಾರೆ. dry coconut price in karnataka
In recent weeks, the dry coconut price in Karnataka has noticeably increased, affecting both small traders and everyday consumers. Farmers and wholesalers report that the price now ranges between ₹120 to ₹200 per kilogram, a steep rise compared to previous months. This surge is largely driven by reduced supply, higher demand from oil mills, and seasonal market fluctuations. For many households and businesses that rely on dry coconut for cooking and production, this price in karnataka hike is becoming a real concern, prompting a closer look at market trends and possible alternatives.