
ಪೂಲ್ ಪಾರ್ಟಿ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವು: kanpur death news
Kanpur death news: ಪಾರ್ಟಿಯಲ್ಲಿ ಭಾಗಿಯಾಗಿ ಈಜುಕೊಳದಲ್ಲಿ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಿದ್ದ ಯುವಕನೊಬ್ಬನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರಪ್ರದೇಶ ಕಾನ್ಪುರದಲ್ಲಿ (Kanpura of Uttara Pradesh) ನಡೆದಿದ್ದು, ಮೃತ ಯುವಕನನ್ನು 24 ವರ್ಷದ ಶಿಖರ್ ಸಿಂಗ್ (Shikhar sing) ಎಂದು ಗುರುತಿಸಲಾಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಕಾನ್ಪುರ: ಸಾವು ಯಾರಿಗೆ, ಯಾವಾಗ ಬೇಕಾದರೂ ಹೇಗೇ ಬೇಕಾದರೂ ಬರಬಹುದು. ಎಲ್ಲಿ ಬೇಕಾದರೂ ಸಂಭವಿಸಬಹುದು. ವಿಧಿ ವಕ್ಕರಿಸುವ ರೀತಿ ಮಾತ್ರ ತುಂಬಾ ಕ್ರೂರವಾಗಿರುತ್ತದೆ ಅಂತಹದೇ ಘಟನೆಯೊಂದು ಭಾನುವಾರ ರಾತ್ರಿ ಸಾನಿಗ್ವಾನ್ನಲ್ಲಿರುವ ರೆಸಾರ್ಟ್ನಲ್ಲಿ ಜೋರಾದ ಸಂಗೀತದೊಂದಿಗೆ ಪೂಲ್ ಪಾರ್ಟಿ ನಡೆಯುತ್ತಿತ್ತು.
ಪಾರ್ಟಿಯಲ್ಲಿ ಭಾಗಿಯಾಗಿ ಈಜುಕೊಳದಲ್ಲಿ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಿದ್ದ ಯುವಕನೊಬ್ಬನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರಪ್ರದೇಶ ಕಾನ್ಪುರದಲ್ಲಿ (Kanpura of Uttara Pradesh) ನಡೆದಿದ್ದು, ಮೃತ ಯುವಕನನ್ನು 24 ವರ್ಷದ ಶಿಖರ್ ಸಿಂಗ್ (Shikhar sing) ಎಂದು ಗುರುತಿಸಲಾಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಈಜ ಕೊಳದಲ್ಲಿ ಯುವಕ ಈಜುತ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದರೂ ಡಿಜೆ ಸೌಂಡ್ ನಿಂದಾಗಿ ಅಲ್ಲೇ ಇದ್ದ ಸ್ನೇಹಿತರ ಗಮನಕ್ಕೆ ಬರುವುದಿಲ್ಲ. ನೀರಿನಲ್ಲಿ ಮುಳುಗುತ್ತಿದ್ದಂತೆ ತನ್ನ ಎರಡು ಕೈಗಳನ್ನು ಮೇಲಕ್ಕೆ ಎತ್ತುವುದನ್ನು ಕಾಣಬಹುದು.
ಅಷ್ಟೇ ಅಲ್ಲದೇ, ಆ ಬಳಿಕ ತನ್ನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತುತ್ತಾನೆ. ಕೊನೆಗೆ ಕೈ ಕಾಲುಗಳನ್ನು ಮೇಲಕ್ಕೆ ಎತ್ತಿ, ಮೇಲೆ ಬರಲು ಪ್ರಯತ್ನಿಸುತ್ತಾನೆ. ಆದರೆ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
Mandya Crime News Kannada: ಅಕ್ರಮ ಮೋಹದ ಹಿಂದೆ ಬಿದ್ದ ಮಹಿಳೆ ಮಸಣಕ್ಕೆ ಯುವಕ ಜೈಲಿಗೆ
ಯುವಕ ಮುಳುಗಿರುವುದು ಸ್ನೇಹಿತರಿಗೆ ತಿಳಿಯುತ್ತಿದ್ದಂತೆ ನೀರಿನಿಂದ ಹೊರ ತೆಗೆದಿದ್ದಾರೆ. ಆದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಚಾಕೇರಿ ಪೊಲೀಸ್ ಠಾಣಾ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Kannada Latest news