Back To Top

 ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆ ಸಂಪೂರ್ಣ ಬ್ಯಾನ್: Bike Taxi Ban
June 14, 2025

ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆ ಸಂಪೂರ್ಣ ಬ್ಯಾನ್: Bike Taxi Ban

Bike Taxi Ban: ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರ, ಪಟ್ಟಣಗಳಲ್ಲಿ ನೀಡುತ್ತಿದೆ. ಹಲವರು ಈ ಬೈಕ್ ಟ್ಯಾಕ್ಸಿಯನ್ನು ಅವಂಲಬಿಸಿದ್ದಾರೆ. ಆಟೋ, ಕ್ಯಾಬ್‌ಗೆ ಹೋಲಿಸಿದರೆ ವೆಚ್ಚವೂ ಕಡಿಮೆ.

ಬೆಂಗಳೂರು: ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರ, ಪಟ್ಟಣಗಳಲ್ಲಿ ನೀಡುತ್ತಿದೆ. ಹಲವರು ಈ ಬೈಕ್ ಟ್ಯಾಕ್ಸಿಯನ್ನು ಅವಂಲಬಿಸಿದ್ದಾರೆ. ಆಟೋ, ಕ್ಯಾಬ್‌ಗಗೆ ಹೋಲಿಸಿದರೆ ವೆಚ್ಚವೂ ಕಡಿಮೆ.ಟ್ರಾಫಿಕ್‌ನಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡದೇ ಬೇಗನೆ ನಿಗದಿತ ಸ್ಥಳ ತಲುಪಬಹುದು. ಆದರೆ ಸೋಮವಾರದಿಂದ (ಜೂ.16) ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸಂಪೂರ್ಣ ಬ್ಯಾನ್ ಆಗುತ್ತಿದೆ. ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಬೈಕ್ ಟ್ಯಾಕ್ಸಿಗೆ ಅನುವು ಮಾಡಿಕೊಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇಷ್ಟೇ ಅಲ್ಲ ಆದೇಶವನ್ನು ಎತ್ತಿಹಿಡಿದಿದೆ.

ಏಕದಸ್ಯ ಆದೇಶಕ್ಕೆ ತಡೆ ನೀಡಲು ನಕಾರ

ಡಿವಿಶನ್ ಬೆಂಚ್ ಚೀಫ್ ಜಸ್ಟಿಸ್ ಕಾಮೇಶ್ವರ್ ರಾವ್ ಹಾಗೂ ಜಸ್ಟೀಸ್ ಶ್ರೀನಿವಾಸ್ ಹರೀಶ್ ಕುಮಾರ್ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿತು. ಎಪ್ರಿಲ್ 2 ರಂದು ಹೈಕೋರ್ಟ್‌ನ ಏಕಸದಸ್ಯ ಪೀಠದ ಜಸ್ಟೀಸ್ ಶ್ಯಾಮ್ ಪ್ರಸಾದ್ ಈ ಈ ಕುರಿತು ಆದೇಶ ಹೊರಡಿಸಿದ್ದರು. ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸೂಚಿದ್ದರು. ಈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ವಿಭಾಗೀಯ ಪೀಠ, ಜೂನ್ 20ರೊಳಗೆ ಟ್ಯಾಕ್ಸಿ ಅಗ್ರೇಟರ್ ಉತ್ತರ ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಮುಂದಿನ ವಿಚಾರಣೆಯನ್ನು ಜೂನ 24ಕ್ಕೆ ಮುಂದೂಡಿದೆ.

ನೀತಿ ಜಾರಿಯಾಗುವರೆಗೆ ಬ್ಯಾನ್ ಮುಂದುವರಿಯಲಿದೆ

ಸರ್ಕಾರ ಬೈಕ್ ಟ್ಯಾಕ್ಸಿ ಕುರಿತು ಸ್ಪಷ್ಟ ಕಾನೂನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿ ಬ್ಯಾನ್ ಇರಲಿದೆ ಎಂದು ವಿಭಾಗೀಯ ಪೀಠ ಹೇಳಿದೆ. ಬೈಕ್ ಟ್ಯಾಕ್ಸಿ ಕುರಿತು ಸ್ಪಷ್ಟ ನೀತಿ ನಿಮಮಗಳು ಜಾರಿಯಾಗುವ ವರೆಗೆ ಬ್ಯಾನ್ ಮುಂದುವರಿಯಲಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ. ಆದೇಶದಲ್ಲಿ ಸೋಮವಾರದಿಂದಲೇ (ಜೂ.16) ಕರ್ನಾಟಕದಲ್ಲಿ ಎಲ್ಲಾ ಬೈಕ್ ಟ್ಯಾಕ್ಸಿ ಬ್ಯಾನ್ ಎಂದು ಉಲ್ಲೇಖಿಸಿದೆ. ಹೀಗಾಗಿ ಸೋಮವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಇರುವುದಿಲ್ಲ ಎಂದಿದೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಯಮ ರೂಪಿಸಲು ಹೆಚ್ಚು ಆಸಕ್ತಿ ಹೊಂದಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಜಾರಿಗೆ ಬರುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ. ಬೈಕ್ ಟ್ಯಾಕ್ಸಿ ನೀತಿ ರೂಪಿಸಿ ಜಾರಿಯಾದರೆ ಎಲ್ಲರಿಗೂ ಸುರಕ್ಷತೆ ನೀಡುವುದು ಸವಾಲಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಬಹುತೇಕರು ಬೈಕ್ ಟ್ಯಾಕ್ಸಿ ಪ್ರಯಾಣ ನೆಚ್ಚಿಕೊಂಡಿದ್ದರು. ಒಂದೆಡೆ ಮೆಟ್ರೋಗೆ ದುಬಾರಿ ದರ ಮಾಡಲಾಗಿದೆ. ಇತ್ತ ಆಟೋ ಹಾಗೂ ಕ್ಯಾಬ್ ದರ ಹೆಚ್ಚು ಜೊತೆಗೆ ಟ್ರಾಫಿಕ್‌ನಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಬೈಕ್ ಟ್ಯಾಕ್ಸಿ ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ನಿಗಿದಿತ ಸ್ಥಳ ತಲುಪಲು ಸಾಧ್ಯವಾಗಿತ್ತು. ಆದರೆ ಸೋಮವಾರದಿಂದ ಬೈಕ್ ಟ್ಯಾಕ್ಸಿ ನೆಚ್ಚಿಕೊಂಡಿದ್ದ ಮಂದಿ ಬೇರೆ ಟ್ಯಾಕ್ಸಿ ಸೇವೆ ಮೊರೆ ಹೋಗಬೇಕಿದೆ.

ಇದನ್ನು ಓದಿ:

https://infomindz.in/larige-sarige-bus-dikki-magu-sthaladalli-savu
Prev Post

ವಿಶ್ವದ ಟಾಪ್‌ 20 ಸಾರ್ಟಪ್‌ ಇಕೋಸಿಸ್ಟಂ ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನ:…

Next Post

ರೈಲ್ವೆ ಇಲಾಖೆಯಿಂದ ಕಾಮಗಾರಿ: ಈ ರಸ್ತೆಗಳು ತಾತ್ಕಾಲಿಕ ಬಂದ್: Indian Railways

post-bars

Leave a Comment

Related post