ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಐವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ DNA ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಬಂಧಿತರಾದ ಐವರು ಆರೋಪಿಗಳನ್ನು ಇಂದು 41ನೇ ಎಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ಕಬ್ಬನ್ ಪಾರ್ಕ್ ಪೊಲೀಸರು DN ಡೈರೆಕ್ಟರ್ ಸುನೀಲ್ ಮ್ಯಾಥ್ಯೂ, DNA ಮ್ಯಾನೇಜ್ಮೆಂಟ್ ಮ್ಯಾನೇಜರ್ ಕಿರಣ್, DNA ಸಿಬ್ಬಂದಿ ಸುಮಂತ್, ಹಾಗೂ RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಿದ್ದರರು.
ನ್ಯಾಯಾಧೀಶರು ಪ್ರತಿಯೊಬ್ಬ ಆರೋಪಿಗೆ ಮಾಹಿತಿ ನೀಡಿದ ನಂತರ, ‘ನಿಮ್ಮ ಪರ ವಕೀಲರಿದ್ದಾರೆನಾ? ಬಂಧನದ ಬಗ್ಗೆ ನಿಮ್ಮ ಮನೆಯವರಿಗೆ ತಿಳಿಸಿದ್ದೀರಾ?’ ಎಂದು ಪ್ರಶ್ನಿಸಿದರು. ಆರೋಪಿಗಳು ಹೌದು ಎಂದು ಉತ್ತರಿಸಿದರು. ಪ್ರಕರಣದ ತನಿಖಾ ಅಧಿಕಾರಿಯಾಗಿ ಇನ್ಸ್ಪೆಕ್ಟರ್ ರವಿ ಮಾಹಿತಿ ನೀಡಿದ್ದು, ಸಿಎಂ ಸೂಚನೆಯ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಲಾಯಿತು.