Back To Top

 ಕಾಲ್ತುಳಿತ: ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲು
June 7, 2025

ಕಾಲ್ತುಳಿತ: ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲು

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ಸಿಬಿ ಫ್ರಾಂಚೈಸಿ, ಡಿಎನ್‌ಎ ಇವೆಂಟ್ ಮ್ಯಾನೇಜ್ಮೆಂಟ್, ಕೆ.ಎಸ್.ಸಿ.ಎ. ಆಡಳಿತ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಇದೀಗ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಿಸಲಾಗಿದೆ.ಈಗಾಗಲೇ ಆರ್‌ಸಿಬಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಅದೇ ಎಫ್‌ಐಆರ್ ಜೊತೆಗೆ ದೂರನ್ನು ಪರಿಗಣಿಸುವುದಾಗಿ ಹಿಂಬರಹ ನೀಡಲಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಗೆ ನೈಜ ಹೋರಾಟಗಾರರ ವೇದಿಕೆಯಿಂದ ದೂರು ನೀಡಲಾಗಿದೆ. ವೇದಿಕೆಯ ಹೆಚ್.ಎಂ. ವೆಂಕಟೇಶ್ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ.

Prev Post

ಕಾಲ್ತುಳಿತ: ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪೊಲೀಸ್‌ ಆಯುಕ್ತ ಸಹಿತ ಮೂವರಿಗೆ ನೋಟಿಸ್‌

Next Post

ಕಾಣೆಯಾದ ವ್ಯಕ್ತಿ ಹುಡುಕುವ ಸಂದರ್ಭ 2 ಶವ ಪತ್ತೆ: ಸಕಲೇಶಪುರದಲ್ಲಿ ಮಳೆ ಸಾವು

post-bars

Leave a Comment

Related post