Back To Top

 ಥಗ್ ಲೈಫ್‌’ ಸಿನಿಮಾಗೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್
June 4, 2025

ಥಗ್ ಲೈಫ್‌’ ಸಿನಿಮಾಗೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್

ಕಮಲ್ ಹಾಸನ್ ಹೇಳಿದ ಒಂದು ವಿವಾದಾತ್ಮಕ ಹೇಳಿಕೆ ಈಗ ‘ಥಗ್ ಲೈಫ್‌’ ಸಿನಿಮಾಗೆ ಬಿಸಿತುಪ್ಪವಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಬಹುಶಃ ಕಮಲ್‌ಗೂ ತಮ್ಮ ಮಾತಿನ ಪರಿಣಾಮ ಇಷ್ಟೊಂದು ಭಯಂಕರವಾಗಿರಲಿದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಕಾಣುತ್ತಿದೆ.

ಬೆಂಗಳೂರು: ಕಮಲ್ ಹಾಸನ್ ಹೇಳಿದ ಒಂದು ವಿವಾದಾತ್ಮಕ ಹೇಳಿಕೆ ಈಗ ‘ಥಗ್ ಲೈಫ್‌’ ಸಿನಿಮಾಗೆ ಬಿಸಿತುಪ್ಪವಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಬಹುಶಃ ಕಮಲ್‌ಗೂ ತಮ್ಮ ಮಾತಿನ ಪರಿಣಾಮ ಇಷ್ಟೊಂದು ಭಯಂಕರವಾಗಿರಲಿದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಕಾಣುತ್ತಿದೆ.ಸದ್ಯ ಜೂನ್ 5ರಂದು ತೆರೆಕಾಣುತ್ತಿರುವ ಅವರ ‘ಥಗ್ ಲೈಫ್‌’ ಸಿನಿಮಾಕ್ಕೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್ ಹಾಕಲಾಗಿದೆ!

ರಾಜ್ಯಾದ್ಯಂತ ನೋ ಬುಕ್ಕಿಂಗ್!

ಹೌದು, ‘ಥಗ್ ಲೈಫ್’ ಸಿನಿಮಾ ರಿಲೀಸ್‌ಗೆ ಇನ್ನೆರಡೇ ದಿನಗಳು ಬಾಕಿ ಇವೆ. ಜೂನ್ 5ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಗೆ ಬರಲಿದೆ; ಆದರೆ ಕರ್ನಾಟಕವನ್ನು ಹೊರತುಪಡಿಸಿ! ಈಗಾಗಲೇ ಎಲ್ಲಾ ಕಡೆಗಳಲ್ಲೂ ‘ಥಗ್ ಲೈಫ್’ ಸಿನಿಮಾದ ಬುಕ್ಕಿಂಗ್ ಆರಂಭವಾಗಿದೆ. ಆದರೆ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಕೂಡ ಈ ಸಿನಿಮಾಗೆ ಸಿಕ್ಕಿಲ್ಲ. ಹಾಗಾಗಿ, ಒಂದೇ ಒಂದು ಟಿಕೆಟ್ ಕೂಡ ಬುಕ್ ಆಗಿಲ್ಲ! ಈ ಮೂಲಕ ಕನ್ನಡ ಭಾಷೆಗೆ ಧಕ್ಕೆ ತಂದವರಿಗೆ ಗಟ್ಟಿ ಹೊಡೆತವನ್ನೇ ನೀಡಲಾಗಿದೆ.

ಕೋರ್ಟ್ ಮೆಟ್ಟಿಲೇರಿದ್ದ ಕಮಲ್

ಯಾವಾಗ ಕರ್ನಾಟಕದಲ್ಲಿ ತಮ್ಮ ಸಿನಿಮಾಗೆ ಒಂದು ಥಿಯೇಟರ್ ಕೂಡ ಸಿಗೋದಿಲ್ಲ ಅನ್ನೋದು ಗೊತ್ತಾಯಿತೋ, ಕೂಡಲೇ ಕೋರ್ಟ್ ಮೆಟ್ಟಿಲೇರಿದರು ಕಮಲ್. ‘ಥಗ್ ಲೈಫ್ ‘ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್‌ ಮಾಡಲು ಭದ್ರತೆ ಕೋರಿ ಕಮಲ್‌, ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, “ಕಮಲ್‌ ಹಾಸನ್ ಅವರು ಇತಿಹಾಸಕಾರರು ಅಲ್ಲ, ಭಾಷಾತಜ್ಞರು ಅಲ್ಲ ಎಂದಮೇಲೆ ಕ್ಷಮೆ ಕೋರಬೇಕು” ಎಂದು ಹೇಳಿದೆ. ಕೂಡ ಕಮಲ್‌ಗೆ ಬುದ್ಧಿ ಹೇಳಿದೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಚಿತ್ರತಂಡವೇ ಕೆಲ ಸಮಯ ಕರ್ನಾಟಕದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದೆಯಂತೆ. ಅಲ್ಲದೆ, ಕಮಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದ್ದು, ಹಾಗಾಗಿ ಮುಂದೇನು ಎಂಬುದು ವಿಚಾರಣೆ ಬಳಿಕ ಕಮಲ್ ಹಾಸನ್ & ಟೀಮ್ ಯೋಚಿಸಬಹುದು. ಸದ್ಯಕ್ಕಂತೂ ‘ಥಗ್ ಲೈಫ್’ ಸಿನಿಮಾ ರಿಲೀಸ್ ಆಗುವುದಿಲ್ಲ. ಇದಕ್ಕೆಲ್ಲಾ ಕನ್ನಡಿಗರ ಒಗ್ಗಟ್ಟಿನ ಹೋರಾಟವೇ ಕಾರಣ.

ನಷ್ಟ, ಕಮಲ್‌ಗೆ ಕನ್ನಡಿಗರಿಗಲ್ಲ!

‘ಥಗ್ ಲೈಫ್’ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡದೇ ಹೋದರೆ ಕನ್ನಡಿಗರಿಗೆ ಏನೂ ನಷ್ಟವಿಲ್ಲ. ಆದರೆ ಇಲ್ಲಿ ಕಮಲ್ ಹಾಸನ್ ಸಿನಿಮಾಗಳೂ 20-25 ಕೋಟಿ ರೂ. ಕಲೆಕ್ಷನ್ ಮಾಡಿರುವ ದಾಖಲೆ ಇದೆ. ಹಾಗಾಗಿ, ಈ ಬಾರಿ ಏನಿಲ್ಲವೆಂದರೂ 25 ಕೋಟಿ ರೂಪಾಯಿ ಲಾಸಾಗುವುದು ನಟ ಕಮಲ್ ಹಾಸನ್‌ಗೆ ಹೊರತು ಬೇರೆ ಯಾರಿಗೂ ಅಲ್ಲ. ಒಂದೇ ಒಂದು ಕ್ಷಮೆ ಕೇಳಿದ್ದರೂ, ಎಲ್ಲವೂ ಬಗೆಹರಿಯುತ್ತಿತ್ತು. ಆದರೆ ಕಮಲ್‌ ಅದನ್ನು ಮಾಡಲಿಲ್ಲ. ವಿವಾದಾತ್ಮಕ ಹೇಳಿಕೆ ನೀಡಿ, ಕ್ಷಮೆ ಕೇಳದ ಕಮಲ್‌ಗೆ ಅವರ ಸ್ವಾಭಿಮಾನವೇ ದೊಡ್ಡದಾದರೆ, ಕನ್ನಡಿಗರ ಸ್ವಾಭಿಮಾನ ಅದಕ್ಕಿಂತ ಸಾವಿರಾರು ಪಟ್ಟು ದೊಡ್ಡದು ಅನ್ನೋದು ಈಗ ಸಾಬೀತಾಗಿದೆ.

ಇದನ್ನು ಓದಿ:

https://infomindz.in/pathiya-akrama-sambanda-patthe-hachalu-electric-tooth-bresh/
Prev Post

ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ: ಕಣ್ಸನ್ನೆಗೆ ನೆಟ್ಟಿಗರು ಫಿದಾ

Next Post

20 ಕೋಟಿ ರೂ. ಮೊತ್ತದ ಬಹುಮಾನ ಪಡೆದುಕೊಂಡ ಆರ್ ಸಿ ಬಿ

post-bars

Leave a Comment

Related post