Back To Top

 ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರ ಆತ್ಮಹತ್ಯೆ

ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರ ಆತ್ಮಹತ್ಯೆ

ರಾಜ್ಯದಲ್ಲೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮದುವೆ ಆಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ನಡೆದಿದೆ. ಸಂತೋಷ ರವೀಂದ್ರಗುಂಡೆ (55), ಅಣ್ಣಾಸಾಹೇಬ ರವೀಂದ್ರಗುಂಡೆ (50) ಇಬ್ಬರು ಸಹೋದರರಿಗೆ ಮದುವೆ ಆಗಿರಲಿಲ್ಲ. ಇದರಿಂದ ನೊಂದಿದ್ದ ಅವರು ಕುಡಿತದ ಚಟಕ್ಕೆ ಬಿದ್ದಿದ್ದರು. ಬಳಿಕ ಕುಡಿತದ ನಶೆಯಲ್ಲಿ ವಿಷಕಾರಿ ಪದಾರ್ಥ ಸೇವನೆ ಮಾಡಿದ್ದಾರೆ. ಕೂಡಲೇ ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prev Post

ಪ್ರಚೋದನಕಾರಿ ಭಾಷಣ  ಮಾಡುವವರಿಗೆ  ಕೆಲ ಸಂಘಟನೆಗಳಿಂದ ರಕ್ಷಣೆ

Next Post

ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್‍ ವಿರುದ್ಧ ಎಫ್ ಐಆರ್ ದಾಖಲು

post-bars

Leave a Comment

Related post