Back To Top

 ಸಕಾರಣವಿಲ್ಲದೆ ತಕ್ಷಣ ವಾಹನ ನಿಲ್ಲಿಸುವಂತಿಲ್ಲ: ಟ್ರಾಫಿಕ್ ಪೊಲೀಸರಿಗೆ ಡಿಜಿ ಐಜಿಪಿ ಸೂಚನೆ

ಸಕಾರಣವಿಲ್ಲದೆ ತಕ್ಷಣ ವಾಹನ ನಿಲ್ಲಿಸುವಂತಿಲ್ಲ: ಟ್ರಾಫಿಕ್ ಪೊಲೀಸರಿಗೆ ಡಿಜಿ ಐಜಿಪಿ ಸೂಚನೆ

ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನೇಕ ಸೂಚನೆ ನೀಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನೇಕ ಸೂಚನೆ ನೀಡಿದ್ದಾರೆ.
ಡಿಜಿ ಐಜಿಪಿ ಡಾ. ಎಂ.ಎ. ಸಲೀಂ ಅವರು ಶನಿವಾರ ಸುತ್ತೋಲೆ ಹೊರಡಿಸಿದ್ದು, ಸಕಾರಣವಿಲ್ಲದೆ ದಾಖಲೆಗಳನ್ನು ಪರೀಕ್ಷಿಸಲು ವಾಹನಗಳನ್ನು ಪೊಲೀಸರು ತಡೆದು ತಪಾಸಣೆಗೊಳಪಡಿಸಬಾರದು ಎಂದು ಸೂಚಿಸಿದ್ದಾರೆ. ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಬಾರದು. ವಾಹನ ತಪಾಸಣೆಯ ವೇಳೆ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಧರಿಸಿರಬೇಕು.
ರಸ್ತೆಯಲ್ಲಿ ದಿಢೀರನೇ ಬಂದು ವಾಹನ ಅಡ್ಡಗಟ್ಟುವುದಾಗಲಿ, ವಾಹನಗಳ ಕೀ ತೆಗೆದುಕೊಳ್ಳುವುದಾಗಲಿ ಮಾಡಬಾರದು. ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಬೆನ್ನಟ್ಟಿ ಹಿಡಿಯಬಾರದು. ಆ ವಾಹನಗಳ ಸಂಖ್ಯೆಯನ್ನು ಆಧರಿಸಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.
ತಪಾಸಣೆ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರೆಫ್ಲೆಕ್ಟಿವ್ ರಬ್ಬರ್ ಕೋನ್ ಗಳನ್ನು ಸುರಕ್ಷತಾ ಸಲಕರಣೆಗಳನ್ನು ಅಳವಡಿಸಬೇಕು ಎಂಬುದು ಸೇರಿದಂತೆ ವಿವಿಧ ಸೂಚನೆಗಳನ್ನು ನೀಡಿದ್ದಾರೆ.

ಇದನ್ನು ಓದಿ:

https://infomindz.in/kallembi-turnnalli-marakke-dikki-hodeda-car/
Prev Post

ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರು: ಸುಸ್ತಾದ BBMP , ಕೈ ಹಿಡಿದ ಡ್ರೋನ್

Next Post

ಅಪರಾಧ ಕೃತ್ಯಗಳನ್ನು ಹತ್ತಿಕ್ಕುವ ಹೊಣೆ ನನ್ನದು ಎಂದ ಹೊಸ ಕಮಿಷನರ್‌

post-bars

Leave a Comment

Related post