Back To Top

 ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರು: ಸುಸ್ತಾದ BBMP , ಕೈ ಹಿಡಿದ ಡ್ರೋನ್
June 1, 2025

ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರು: ಸುಸ್ತಾದ BBMP , ಕೈ ಹಿಡಿದ ಡ್ರೋನ್

ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸುಸ್ತಾದ ಪಾಲಿಕೆ (BBMP) ಇದೀಗ ಮಳೆ ಅವಾಂತರಗಳನ್ನು ನಿಯಂತ್ರಿಸಲು ದಿನಕ್ಕೊಂದು ಹೊಸ ಪ್ರಯೋಗ ಮಾಡುತ್ತಿದೆ.

ಬೆಂಗಳೂರು: ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸುಸ್ತಾದ ಪಾಲಿಕೆ (BBMP) ಇದೀಗ ಮಳೆ ಅವಾಂತರಗಳನ್ನು ನಿಯಂತ್ರಿಸಲು ದಿನಕ್ಕೊಂದು ಹೊಸ ಪ್ರಯೋಗ ಮಾಡುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಬೋಟ್, ಲೈಫ್ ಜಾಕೆಟ್ ಖರೀದಿಗೆ ಟೆಂಡರ್ ಕರೆದಿದ್ದ ಬಿಬಿಎಂಪಿ ಇದೀಗ ರಾಜಧಾನಿಯ ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ (Drone) ಮೊರೆಹೋಗಲು ಮುಂದಾಗಿದೆ.
ಬೆಂಗಳೂರಿನಲ್ಲಿ ಮಳೆ ಬಂದಾಗ ಜಲಾವೃತ ಆಗುವ ಪ್ರದೇಶಗಳು ಹಾಗೂ ಮಳೆಹಾನಿ ಪ್ರದೇಶಗಳಲ್ಲಿ ಡ್ರೋನ್ ಹಾರಿಸಿ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆಸಿದೆ.
ಸದ್ಯ ಪೊಲೀಸ್ ಇಲಾಖೆಯ ಜೊತೆ ಸೇರಿ ಡ್ರೋನ್ ಕಾರ್ಯಾಚರಣೆ ಮೂಲಕ ಮಳೆ ಹಾನಿ ಪ್ರದೇಶಗಳ ಪತ್ತೆಗೆ ಚಿಂತನೆ ನಡೆಸಲಾಗಿದೆ. ಡ್ರೋನ್ ಹಾರಾಟ ನಿರ್ವಹಣೆಗೆ ಪೊಲೀಸ್ ಹಾಗೂ ಬಿಬಿಎಂಪಿಯ ಅಧಿಕಾರಿಗಳ ತಂಡದಿಂದ ನೋಡಲ್ ಆಫೀಸರ್ಗಳನ್ನು ನೇಮಿಸಲಾಗಿದೆ. ಮಳೆ ಬಂದಾಗ ಯಾವ್ಯಾವ ಪ್ರದೇಶಗಳಲ್ಲಿ ಹಾನಿಯಾಗುತ್ತದೆ ಎಂಬುದನ್ನು ಡ್ರೋನ್ ಮೂಲಕ ಬಿಬಿಎಂಪಿಯ ಕಂಟ್ರೋಲ್ ರೂಮ್ನಲ್ಲಿ ಕುಳಿತುಕೊಂಡೇ ಮಾಹಿತಿ ಕಲೆಹಾಕಲು ಉದ್ದೇಶಿಸಲಾಗಿದೆ. ಇದರಿಂದ, ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಸಮಯಕ್ಕೆ ನೆರವು ನೀಡುವುದಕ್ಕೆ ಅನುಕೂಲವಾಗಲಿದೆ.
ಮತ್ತೊಂದೆಡೆ, ಗುಂಡಿಗಳು, ನೀರು ನಿಲ್ಲುವ ಜಾಗ ಸರಿಪಡಿಸದೇ ಬೋಟ್, ಡ್ರೋನ್ ಎಂದು ಕತೆ ಹೇಳುತ್ತಿರುವ ಪಾಲಿಕೆ ನಡೆಗೆ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಗಿರಲಿದೆ ಡ್ರೋನ್ ಕಾರ್ಯಾಚರಣೆ? ಮಳೆ ಅವಾಂತರ ಆಗಿರೋ ಜಾಗದ ಬಗ್ಗೆ ಮಾಹಿತಿ ಸಂಗ್ರಹ. ಮಳೆ ನೀರು ಇರೋ ಕಡೆ ಡ್ರೋನ್ ಹಾರಿಸಲಿರುವ ತಂಡ. ಡ್ರೋನ್ ಹಾರಾಟದ ದೃಶ್ಯಗಳು ಬಿಬಿಎಂಪಿಯ ಕಂಟ್ರೋಲ್ ರೂಮ್ನಲ್ಲಿ ಡಿಸ್ಪ್ಲೇ. ಜಲಾವೃತವಾದ ಜಾಗದಲ್ಲಿ ಎಲ್ಲಿ ನೀರು ಹರಿಯಲು ಜಾಗ ಇದೆ ಎಂಬುದನ್ನು ಗುರುತಿಸಲಾಗುತ್ತದೆ. ಅವಾಂತರ ಆದ ಜಾಗಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ರೂಪುರೇಷೆ ಸಿದ್ಧತೆ. ರಕ್ಷಣಾ ಕಾರ್ಯಾಚರಣೆ, ನೀರು ತೆರವು ಕಾರ್ಯಾಚರಣೆಗೆ ಕ್ರಮ ರೂಪಿಸಲು ಪ್ಲಾನ್. ಒಟ್ಟಿನಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಮುಂದಿನ ಬಾರೀ ಹೀಗೆ ಆಗಲ್ಲ ಅಂತಾ ಭರವಸೆ ಕೊಡುತ್ತಲೇ ಬಂದಿರುವ ಪಾಲಿಕೆ, ಇದೀಗ ಬ್ರ್ಯಾಂಡ್ ಬೆಂಗಳೂರಿನ ಮಳೆ ಅವಾಂತರಗಳ ತಡೆಗೆ ದಿನಕ್ಕೊಂದು ಹೊಸ ಪ್ಲಾನ್ ಹುಡುಕುತ್ತಿದೆ. ಈ ಹೊಸ ಯೋಜನೆಗಳೆಲ್ಲ ಎಷ್ಟರಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನು ಓದಿ:

https://infomindz.in/kannad-makkala-shalege-upavasa-mouna-kalnadige-jatha
Prev Post

ಆಟೋ ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ ಹೊರ ರಾಜ್ಯದ ಮಹಿಳೆ

Next Post

ಸಕಾರಣವಿಲ್ಲದೆ ತಕ್ಷಣ ವಾಹನ ನಿಲ್ಲಿಸುವಂತಿಲ್ಲ: ಟ್ರಾಫಿಕ್ ಪೊಲೀಸರಿಗೆ ಡಿಜಿ ಐಜಿಪಿ ಸೂಚನೆ

post-bars

Leave a Comment

Related post