Back To Top

 ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಎಂದು ವ್ಯಂಗ್ಯವಾಗಿ ಬರೆದುಕೊಂಡ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್
May 23, 2025

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಎಂದು ವ್ಯಂಗ್ಯವಾಗಿ ಬರೆದುಕೊಂಡ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್

ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿನ ಪಾತ್ರಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರ ತಾವೇ ತೆಗೆದುಕೊಂಡಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಹೇಳಿದ್ದರು.

ಇಸ್ಲಾಮಾಬಾದ್ : ಭಾರತದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿನ ಪಾತ್ರಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರ ತಾವೇ ತೆಗೆದುಕೊಂಡಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಹೇಳಿದ್ದರು. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತವು ಪಾಕ್ ಒಳಗೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದ ಹೊಡೆತಕ್ಕೆ ಮುನೀರ್ ಬಂಕರ್ ನಲ್ಲಿ ಅವಿತ್ತಿದ್ದ. ಈ ಸಾಧನೆಗೆ ಪಾಕ್ ಬಡ್ತಿ ನೀಡಿದೆ ಎಂದು ಈಗಾಗಲೇ ಹಾಸ್ಯ ಮಾಡಲಾಗುತ್ತಿದೆ.

ಇದೀಗ ಮುನೀರ್, ತಾನು ಭಾರತದೊಂದಿಗಿನ ಸಂಘರ್ಷದಲ್ಲಿ ಏನೋ ದೊಡ್ಡ ಸಾಧನೆ ಮಾಡಿದ್ದಕ್ಕೆ ತನಗೆ ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದು ಅಂಕಣವೊಂದರಲ್ಲಿ ಫುಲ್ ಬಿಲ್ಡಪ್ ಕೊಟ್ಟಿರುವ ಬಗ್ಗೆ ವರದಿಯಾಗಿದೆ. ನನ್ನ ನೆಚ್ಚಿನ ಶತ್ರು ಭಾರತದ ವಿರುದ್ಧ ಮತ್ತೊಂದು ಐತಿಹಾಸಿಕ ಯುದ್ಧವನ್ನು ಗೆದ್ದ ನಂತರ ನಾನು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಗಿದ್ದೇನೆ. ನನ್ನ ಜೀವನದಲ್ಲಿ ಇದು ಐತಿಹಾಸಿಕ ದಿನ. ಇದಕ್ಕೆ ಅಲ್ಲಾಹು ಅಲ್ಲ, ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದು ಮುನೀರ್ ವ್ಯಂಗ್ಯವಾಗಿ ಬರೆದುಕೊಂಡಿದ್ದಾನೆ. ಮೋದಿ, ನನ್ನ ವೃತ್ತಿಜೀವನವನ್ನು ಹೆಚ್ಚಿಸಿದ್ದಕ್ಕಾಗಿ ಧನ್ಯವಾದಗಳು.

ಭಾರತದೊಂದಿಗೆ ಯಾವುದೇ ರೀತಿಯ ಯುದ್ಧದಲ್ಲಿ ಒಬ್ಬರು ವಿಫಲರಾಗಬಹುದು ಮತ್ತು ಪ್ರಶಂಸೆಗಳನ್ನು ಗಳಿಸಬಹುದು. ಜನರಲ್ ಪರ್ವೇಜ್ ಮುಷರಫ್ 1999ರ ಕಾರ್ಗಿಲ್ ಯುದ್ಧ ಸೋತರು. ಆದರೆ ಅಧ್ಯಕ್ಷರಾದರು. ಅವರು ನನ್ನ ಬಗ್ಗೆ ಈಗ ಹೆಮ್ಮೆ ಪಡುತ್ತಾರೆ. ಅರವತ್ತು ವರ್ಷಗಳ ನಂತರ ನಾನು 4 ದಿನಗಳ ಕಾಲ ಪತ್ರಿಕಾಗೋಷ್ಠಿಗಳನ್ನು ನಡೆಸಿ ಕೊನೆಯಲ್ಲಿ ಫೀಲ್ಡ್ ಮಾರ್ಷಲ್ ಆದೆ. ಪಾಕಿಸ್ತಾನದ ಮುಂದಿನ ರಾಜನಾಗಿ ಬಾಬರಿ ಮಸೀದಿಯಲ್ಲಿ ಶೀಘ್ರದಲ್ಲೇ ನಿಮ್ಮನ್ನು ಅಧಿಕೃತವಾಗಿ ಭೇಟಿಯಾಗಬೇಕೆಂದು ನಾನು ಭಾವಿಸುವೆ ಎಂದಿದ್ದಾನೆ.

ಇದನ್ನು ಓದಿ:

https://infomindz.in/medical-shop-sibbandi-nirlakhsya-hallu-novina-badalu-bere-oushada-sevisi-mahile-savu/
Prev Post

ಯುವತಿಗೆ ಫೋನ್‌ ಕಾಲ್‌: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು…

Next Post

ತನ್ನ ಪತಿಯನ್ನು ಕೊಲೆ ಮಾಡಿದ ಶಾಲಾ ಪ್ರಾಂಶುಪಾಲೆ: ಹೆಣ ರವಾನಿಸಲು ವಿದ್ಯಾರ್ಥಿಗಳ ನೆರವು

post-bars

Leave a Comment

Related post