ಎರಡು ರಾಷ್ಟ್ರಗಳು ಈಗ ಕದನ ವಿರಾಮ ಘೋಷಣೆ: ವಿದೇಶಾಂಗ ಕಾರ್ಯದರ್ಶಿ ಜೈಶಂಕರ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನ (india-Pakista) ಎರಡು ರಾಷ್ಟ್ರಗಳು ಈಗ ಕದನ ವಿರಾಮ ಘೋಷಣೆಯನ್ನು ಮಾಡಿದೆ. ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಜೈಶಂಕರ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೆ ಈಗಾಗಲೇ ಸಿಂಧೂ ನದಿ ಪಾಕ್ಗೆ ಹೋಗದಂತೆ (Indus water) ಬಂದ್ ಮಾಡಲಾಗಿದೆ.ಅದನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕದನ ವಿರಾಮಕ್ಕೆ ಪೂರ್ವ ಅಥವಾ ನಂತರದ ಯಾವುದೇ ಷರತ್ತುಗಳಿಲ್ಲ. ಪಾಕಿಸ್ತಾನದಿಂದ ಈ ಕರೆ ಬಂದಿದೆ. ಸಿಂಧೂ ಜಲ ಒಪ್ಪಂದವು ಅಮಾನತಿನಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿದೆ. ಒಂದು ಹಂತದಲ್ಲಿ ಭಾರತ ಯಾವುದೇ ಮಿಲಿಟರಿ ದಾಳಿಗಳನ್ನು ನಡೆಸುವುದಿಲ್ಲ. ಆದರೆ ಪಂಚ ನಿರ್ಧಾರಗಳನ್ನು ಕಾಯ್ದುಕೊಂಡಿದೆ.
ಭಾರತೀಯ ಸಮಯ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಮಿಶ್ರಿ ಖಚಿತಪಡಿಸಿದ್ದಾರೆ.ಪಾಕಿಸ್ತಾನದ ಡಿಜಿಎಂಒ ಇಂದು ಮಧ್ಯಾಹ್ನ 3.35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದರು. ಭಾರತೀಯ ಕಾಲಮಾನ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ನಿಯಮವನ್ನು ಜಾರಿಗೆ ತರಲು ಎರಡೂ ಕಡೆಯಿಂದಲೂ ಸೂಚನೆಗಳನ್ನು ನೀಡಲಾಗಿದೆ. ಎರಡೂ ದೇಶಗಳ ನಡುವೆ ಮೇ 12ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಮಾತುಕತೆ ನಡೆಸಯಲಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ