Back To Top

 ರಾಯಭಾರಿ ಕಚೇರಿಯಲ್ಲಿ ಇದ್ದ ಪಾಕಿಸ್ತಾನಿ ಅಧಿಕಾರಿ ಭಾರತ ಬಿಟ್ಟು ಹೋಗುವಂತೆ ಆದೇಶ

ರಾಯಭಾರಿ ಕಚೇರಿಯಲ್ಲಿ ಇದ್ದ ಪಾಕಿಸ್ತಾನಿ ಅಧಿಕಾರಿ ಭಾರತ ಬಿಟ್ಟು ಹೋಗುವಂತೆ ಆದೇಶ

ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ‘ಪರ್ಸನಾ ನಾನ್ ಗ್ರಾಟಾ’ ಎಂದು ಘೋಷಿಸಿರುವ ಭಾರತ ಸರ್ಕಾರ, 24 ಗಂಟೆಗಳ ಒಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಿದೆ.(Pakistani official Expels)

ನವದೆಹಲಿ: ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ‘ಪರ್ಸನಾ ನಾನ್ ಗ್ರಾಟಾ’ ಎಂದು ಘೋಷಿಸಿರುವ ಭಾರತ ಸರ್ಕಾರ, 24 ಗಂಟೆಗಳ ಒಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಿದೆ.(Pakistani official Expels) ದೆಹಲಿಯಲ್ಲಿ ಕುಳಿತು ಈ ವ್ಯಕ್ತಿ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡು ಆತನನ್ನು ದೇಶ ತೊರೆಯುವಂತೆ ಆದೇಶ ಹೊರಡಿಸಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಅಧಿಕಾರಿ ಭಾರತದಲ್ಲಿನ ತನ್ನ ರಾಜತಾಂತ್ರಿಕ ಮಾನದಂಡಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆ ಅಧಿಕಾರಿ ದೆಹಲಿಯಲ್ಲಿ ಕುಳಿತುಕೊಂಡು ಭಾರತ ವಿರೋಧಿ ಚಟುವಟಿಕೆಗಳು ಮತ್ತು ಪಿತೂರಿಗಳಲ್ಲಿ ಭಾಗಿಯಾಗಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ರಾಜತಾಂತ್ರಿಕ ಮಾನದಂಡಗಳ ಉಲ್ಲಂಘನೆಯನ್ನು ಸಹಿಸುವುದಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಎರಡೂ ದೇಶಗಳ ನಡುವಿನ ಸಂಬಂಧಗಳು ಈಗಾಗಲೇ ಉದ್ವಿಗ್ನಗೊಂಡಿರುವ ಸಂದರ್ಭದಲ್ಲಿ ಈ ಬೆಳವಣಿಗೆಯನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಇದಕ್ಕೂ ಮುಂಚೆಯೇ, ಭಾರತವು ಪಾಕಿಸ್ತಾನದ ಹೆಚ್ಚಿನ ರಾಜತಾಂತ್ರಿಕರನ್ನು ದೇಶ ತೊರೆಯುವಂತೆ ಆದೇಶಿಸಿತ್ತು.

ಇದನ್ನು ಓದಿ:

https://infomindz.in/kannadada-kirutere-hasya-nata-rakesh-poojari/
Prev Post

ಅಪ್ರಾಪ್ತ ಸ್ನೇಹಿತರ ಮಧ್ಯ ಗಲಾಟೆ: ಕೊಲೆಯಲ್ಲಿ ಅಂತ್ಯ

Next Post

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ:  ಸಿಡಿಲಿಗೆ 9 ಮಂದಿ ಬಲಿ

post-bars

Leave a Comment

Related post