ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರೆದ ಕಾಲೇಜು ವಿದ್ಯಾರ್ಥಿನಿ
ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕಪಾಠ ಕಲಿಸುತ್ತಿದ್ದು, ಆಕ್ರಮಣಾಕಾರಿ ದಾಳಿ ಪಾಕಿಗಳು ವಿಲವಿಲ ನಲುಗಿದ್ದಾರೆ. ಈ ನಡುವೆ ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರವಣಿಗೆ ದೊಡ್ಡ ಸದ್ದು ಮಾಡುತ್ತಿದೆ.
ಉಡುಪಿ: ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕಪಾಠ ಕಲಿಸುತ್ತಿದ್ದು, ಆಕ್ರಮಣಾಕಾರಿ ದಾಳಿ ಪಾಕಿಗಳು ವಿಲವಿಲ ನಲುಗಿದ್ದಾರೆ. ಈ ನಡುವೆ ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರವಣಿಗೆ ದೊಡ್ಡ ಸದ್ದು ಮಾಡುತ್ತಿದೆ. ಕಾರ್ಕಳ ತಾಲೂಕಿನ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿಯೊಬ್ಬಳು ದೇಶವಿರೋಧಿ ಬರಹಗಳನ್ನು ಬರೆದಿರುವುದು ಪತ್ತೆಯಾಗಿದೆ.”ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ” ಎಂದು ಗೋಡೆಯ ಮೇಲೆ ಬರೆದಿದ್ದಾಳೆ. ಯುವತಿಯ ಕೃತ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”. “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಬರೆದು ಯುವತಿ ಎಸ್ಕೇಪ್ ಆಗಿದ್ದಾಳೆ. ಈ ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ವಿದ್ಯಾರ್ಥಿನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನು ಓದಿ: