Back To Top

 ಸೋಫಿಯಾ ಖುರೇಷಿ #ಕರ್ನಾಟಕದ ಸೊಸೆ

ಸೋಫಿಯಾ ಖುರೇಷಿ #ಕರ್ನಾಟಕದ ಸೊಸೆ

ಪಹಲ್ಗಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿದ್ದರ ಕುರಿತು ಸೇನೆಯ ಮಹಿಳಾ ಮಹಿಳಾ ಅಧಿಕಾರಿ ಜಗತ್ತಿಗೆ ಮಾಹಿತಿ ನೀಡಿದ್ದರು.‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ ಎಂಬುದು ಹೆಮ್ಮೆಯ ಸಂಗತಿ

ಮಹಿಳೆಯರ ತಿಲಕ ಅಳಿಸಿದ ಉಗ್ರರ ವಿರುದ್ಧ ಪ್ರತಿಕಾರಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನ ದಾಳಿ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಮಹತ್ವದ ದಾಳಿ ಕುರಿತು ಭಾರತೀಯ ಸೇನೆ ಇದೆ ಮೊದಲಬಾರಿಗೆ ಮಹಿಳಾ ಅಧಿಕಾರಿಗಳಿಂದ ಕಾರ್ಯಾಚರಣೆ ಮಾಹಿತಿ ಕೊಡಿಸಿದ್ದರು. ಸಧ್ಯ ಘಟನೆ ಕುರಿತು ವಿವರಣೆ ನೀಡಿದ್ದ ಮಹಿಳಾ ಅಧಿಕಾರಿಯಲ್ಲಿ ಒಬ್ಬರಾದ ಸೋಫಿಯಾ ಖುರೇಷಿ ಅವರಿಗೆ ಕರ್ನಾಟಕ ನಂಟು ಇದೆ ಎಂಬುದು ವಿಶೇಷ.

image

2016 ರಲ್ಲಿ ಪುಣೆಯಲ್ಲಿ ನಡೆದ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಇವರ ಪತಿ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿ ಇದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

image 1

ವಿನಾಯಕ ವಶಿಷ್ಠ

Prev Post

ಆಪರೇಷನ್ ಸಿಂಧೂರ್‌ಗೆ ಶಕ್ತಿ ತುಂಬುತ್ತಿರುವ ಭಾರತೀಯ ಅಧಿಕಾರಿಗಳಾದ ಸೋಫಿಯಾ ಖುರೇಷಿ ಮತ್ತು ವ್ಯೋಮಿಕಾ…

Next Post

ಪಾಕ್ ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆ: ಭಾರತ ಖಂಡನೆ

post-bars

Leave a Comment

Related post