Back To Top

 ಅಪಾರ್ಟ್‌ಮೆಂಟ್‌ನಿಂದ ಕೆಳಗೆ ನಾಯಿ ಎಸೆದು ವಿಕೃತಿ ಮೆರೆದ ಡಾಕ್ಟರ್!!

ಅಪಾರ್ಟ್‌ಮೆಂಟ್‌ನಿಂದ ಕೆಳಗೆ ನಾಯಿ ಎಸೆದು ವಿಕೃತಿ ಮೆರೆದ ಡಾಕ್ಟರ್!!

ನಾಯಿಯೊಂದನ್ನು ತಮ್ಮ ಅಪಾರ್ಟ್‌ಮೆಂಟ್‌ನಿಂದ ಎಸೆದ ಪ್ರಕರಣ ಸಂಬಂಧ ನ್ಯೂರೋಸರ್ಜನ್ ಆಗಿರುವ ಡಾ.ಸಾಗರ್ ಬಲ್ಲಾಳ್ ವಿರುದ್ಧ ಪ್ರಕರಣವನ್ನು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ನಾಯಿಯೊಂದನ್ನು ತಮ್ಮ ಅಪಾರ್ಟ್‌ಮೆಂಟ್‌ನಿಂದ ಎಸೆದ ಪ್ರಕರಣ ಸಂಬಂಧ ನ್ಯೂರೋಸರ್ಜನ್ ಆಗಿರುವ ಡಾ.ಸಾಗರ್ ಬಲ್ಲಾಳ್ ವಿರುದ್ಧ ಪ್ರಕರಣವನ್ನು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಪ್ರಿಲ್ 20 ರಂದು ಬೆಂಗಳೂರಿನ 33 ವರ್ಷದ ವೈದ್ಯ ಡಾ.ಸಾಗರ್ ಬಲ್ಲಾಳ್‌, ತನ್ನ ಎರಡನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಬೀದಿ ನಾಯಿಯನ್ನು ಎಸೆದ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಹಿನ್ನೆಲೆ:

ಬೆಂಗಳೂರಿನ ಲಕ್ಕಸಂದ್ರದ ಬೃಂದಾವನ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಸ್ಕೂಬಿ ಎಂಬ ನಾಯಿಯನ್ನು ನೋಡಿಕೊಳ್ಳುತ್ತಿದ್ದರು. ಫೆಬ್ರವರಿ 5ರಂದು ಮುಂಜಾನೆ 2.30ರ ಸುಮಾರಿಗೆ ನಾಯಿಯ ಜೋರಾದ ಕೂಗಾಟಕ್ಕೆ ನಿವಾಸಿಗಳು ಎಚ್ಚರ ಗೊಂಡಿದ್ದಾರೆ. ಈ ವೇಳೆ ಹೊರಗಡೆ ಬಂದು ನೋಡಿದಾಗ ನಾಯಿ ಮಹಡಿಯಿಂದ ಕೆಳಗಡೆ ಬಿದ್ದು ನರಳಾಡುತ್ತಿತ್ತು. ಕೂಡಲೇ ಸ್ಕೂಬಿಯನ್ನು ದಕ್ಷಿಣ ಬೆಂಗಳೂರಿನ ಪಶುವೈದ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಮುರಿದ ಬೆನ್ನುಮೂಳೆ ಮತ್ತು ಇತರ ಗಾಯಗಳಿಗೆ ನಾಯಿಗೆ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಏಪ್ರಿಲ್ 16 ರಂದು ಬಿಡುಗಡೆಯಾದ ನಂತರ ಅಪಾರ್ಟ್‌ಮೆಂಟ್‌ಗೆ ನಾಯಿಯನ್ನು ಕರೆತಂದರು. ಸ್ಕೂಬಿ ಎಸೆಯುವುದನ್ನು ಯಾರೂ ನೋಡದ ಕಾರಣ ಘಟನೆ ಸಂಬಂಧ ಯಾರೂ ದೂರು ಕೊಟ್ಟಿಲ್ಲ.

ಸ್ಕೂಬಿ ಅಪಾರ್ಟ್‌ಮೆಂಟ್‌ಗೆ ಮರಳಿದ ನಾಲ್ಕು ದಿನಗಳ ನಂತರ, 2.30 ರ ಸುಮಾರಿಗೆ ದೊಡ್ಡ ಶಬ್ದದಿಂದ ನಿವಾಸಿಗಳು ಮತ್ತೆ ಎಚ್ಚರಗೊಂಡರು ಎಂದು ದೂರಿನಲ್ಲಿ ಹೇಳಲಾಗಿದೆ. ಧಾವಿಸಿ ನೋಡಿದಾಗ ನೆಲಮಹಡಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಸ್ಕೂಬಿ ಬಿದ್ದು ಅದರ ಗಾಜು ಒಡೆದು ಬಾನೆಟ್ ಮೇಲೆ ಬಿದ್ದಿರುವುದು ಕಂಡುಬಂತು. “ನಾಯಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಯಿತು” ಎಂದು ಎಫ್‌ಐಆರ್ ಉಲ್ಲೇಖಿಸಲಾಗಿದೆ. ಅದೇ ಸಮಯದಲ್ಲಿ, ನಿವಾಸಿಗಳು ಡಾ ಬಲ್ಲಾಳ್ ಅವರ ಅಪಾರ್ಟ್ಮೆಂಟ್ಗೆ ಪ್ರವೇಶಿಸಿ ಬಾಗಿಲು ಹಾಕಿರುವುದು ನೋಡಿದ್ದಾರೆ. ಈ ವೇಳೆ ವೈದ್ಯನಿಗೆ ಕರೆ ಮಾಡಿ, ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಕ್ರಿಯೆ ಸಿಗದ ಕಾರಣ ಮಾರನೇ ದಿನ ಕೆಲಸಕ್ಕೆ ಹೋಗುತ್ತಿದ್ದಾಗ ನಿವಾಸಿಗಳು ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ.

ಆಯುಷ್ ಬ್ಯಾನರ್ಜಿ (22) ಎಂಬ ವಿದ್ಯಾರ್ಥಿ ಎಪ್ರಿಲ್ 22 ರಂದು ಡಾ.ಬಲ್ಲಾಳ್ ವಿರುದ್ಧ ಪ್ರಕರಣ ದಾಖಲಿಸುತ್ತಾನೆ. ಆಡುಗೋಡಿ ಪೊಲೀಸರು ಡಾ.ಬಲ್ಲಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 325 ರ ಅಡಿಯಲ್ಲಿ ಪ್ರಾಣಿಗಳನ್ನು ಕೊಂದು ಅಥವಾ ಅಂಗವಿಕಲಗೊಳಿಸಿದ ಆರೋಪದಡಿಯಲ್ಲಿ ಐದು ವರ್ಷಗಳ ದಂಡ ಮತ್ತು ಶಿಕ್ಷೆಗೆ ಗುರಿಯಾಗಿದ್ದಾನೆ. ಡಾ ಬಲ್ಲಾಳ್ ನಾಯಿಯ ಕುತ್ತಿಗೆಯನ್ನು ಹಿಡಿದಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೂರು ನೀಡಲಾಗಿದೆ. 2022 ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಪಿಜಿ ಅಭ್ಯಾಸ ಮಾಡುತ್ತಿದ್ದಾಗ ಇದೇ ರೀತಿ ನಾಯಿ ಮೇಲೆ ಹಿಂಸೆ ನೀಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನು ಓದಿ:

https://infomindz.in/laskar-a-thoiyiba-comunder-hatye-madida-sene/
Prev Post

ಸಿಎಂಗೆ  ಆತ್ಮಹತ್ಯೆಯ ಬೆದರಿಕೆ ಹಾಕಿದ ಕೋವೀಡ್ ಸಂತ್ರಸ್ತರು

Next Post

ಪತ್ನಿಗೆ ಬುದ್ಧಿವಾದ ಹೇಳಿದಕ್ಕೆ ಪತಿಯ ಮೇಲೆ ದಾಳಿ ಮಾಡಿದ ಪತ್ನಿ

post-bars

Leave a Comment

Related post